ಮುಖ್ಯ ಸುದ್ದಿ
ನಾಲ್ಕು ತಿಂಗಳಲ್ಲೇ ₹ 38 ಲಕ್ಷ ಸಂಗ್ರಹ | ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ

CHITRADURGA NEWS | 06 MARCH 2024
ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವಾಲಯದಲ್ಲಿ ಮಹಾ ರಥೋತ್ಸವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳ ನಂತರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬರೋಬ್ಬರಿ ₹ 38 ಲಕ್ಷ ಹಣ ಸಂಗ್ರಹವಾಗಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/muktinath-meditated-in-the-lap-of-jogimatti
ದೇವಾಲಯದ ಆವರಣದಲ್ಲಿ ಕೆನರಾಬ್ಯಾಂಕ್, ಕಂದಾಯ ಮತ್ತು ಧಾರ್ಮಿಕ ದತ್ತಿ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಮಂಗಳವಾರ ಎಣಿಕೆ ನಡೆಸಲಾಯಿತು. ಹೊರಮಠದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಎಣಿಕೆ ಕಾರ್ಯ 12 ಗಂಟೆಗೆ ಮುಕ್ತಾಯವಾಯಿತು. ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಮಧ್ಯಾಹ್ನ 4ಗಂಟೆಗೆ ಮುಕ್ತಾಯವಾಯಿತು. ಹೊರಮಠದಲ್ಲಿ ₹6,00,595 ಹಾಗೂ ಒಳಮಠದಲ್ಲಿ ₹32,67,065 ಸೇರಿ, ₹38,67,660 ಹಣ ಸಂಗ್ರಹವಾಗಿದೆ.

ಕ್ಲಿಕ್ ಮಾಡಿ ಓದಿ: https://chitradurganews.com/heavy-rain-forecast/
ಹಣವನ್ನು ದೇವಾಲಯದ ಖಾತೆ ಇರುವ ಕೆನರಾಬ್ಯಾಂಕ್‌ಗೆ ಹಣ ಜಮಾ ಮಾಡಲಾಯಿತು. ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಉಪತಹಶೀಲ್ದಾರ್ ಬಿ.ಶಕುಂತಲ, ಕಂದಾಯ ನಿರೀಕ್ಷಕ ಚೇತನ್‌ಕುಮಾರ್, ಕಂದಾಯ ಇಲಾಖೆ ಸಿಬ್ಬಂದಿ ಜಗದೀಶ್, ಪ್ರಕಾಶ್, ಶರಣಬಸವ, ಶಂಕರ್, ಕೆನರಾಬ್ಯಾಂಕ್ ವ್ಯವಸ್ಥಾಪಕ ಸತ್ಯನಾರಾಯಣ, ಸಿಬ್ಬಂದಿ ವಿರೂಪಾಕ್ಷಿ, ರಘು ಮೂರ್ತಿ, ಕೆ.ಎಚ್.ಚೇತನ, ಸಿಬ್ಬಂದಿ ಸಕ್ಲೈನ್, ಎಂ.ಬಿ.ಮಹಾಸ್ವಾಮಿ, ಬ್ಯಾಂಕ್ ಮಿತ್ರರಾದ ಕೆ.ಎಂ.ಪ್ರಸನ್ನಕುಮಾರ್, ಪುರಂದರ, ವೀರಭದ್ರಪ್ಪ, ರಾಜಣ್ಣ, ದೇವಾಲಯ ಸಿಬ್ಬಂದಿ ಎಸ್.ಸತೀಶ್, ಮಂಜುನಾಥ್, ರುದ್ರೇಶ್, ಶಿವಕುಮಾರ್, ಶಂಕರಪ್ಪ ಸೇರಿದಂತೆ ಕಂದಾಯ ಇಲಾಖೆ, ಮುಜರಾಯಿ ಇಲಾಖೆಯ ಅಧಿಕಾರಿಗಳು ಇದ್ದರು.

