ಮುಖ್ಯ ಸುದ್ದಿ
ಸೇವಂತಿಗೆ, ತೆಂಗು, ಅಡಿಕೆ ಬೆಳೆ | 3 ದಿನ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ
CHITRADURGA NEWSS | 10 FEBRUARY 2025
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಫೆ.12 ರಿಂದ 14 ರವರೆಗೆ ಜಿಲ್ಲೆಯ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಥ ಬಳಕೆ ಹೆಚ್ಚಿಸಲು ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಅಳವಡಿಕೆ ಮತ್ತು ನಿರ್ವಹಣೆ ಹಾಗೂ ಸೇವಂತಿಗೆ, ತೆಂಗು, ಅಡಿಕೆ ಬೆಳೆಗಳಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Also Read: ಒಂದು ಲೋಡ್ ಯೂರಿಯಾ ವಶಕ್ಕೆ | 12.74 ಲಕ್ಷ ಮೊತ್ತದ ಗೊಬ್ಬರ ಅಕ್ರಮ ಸಾಗಾಣೆ
ಫೆ.12ರಂದು ಬೆಳಿಗ್ಗೆ 10ಕ್ಕೆ ದೇವರಾಜ ಕೆ. ಜೈನ್‍ಇರಿಗೇಷನ್ ಬೆಂಗಳೂರು ಇವರು ನೀರಿನ ಸಮರ್ಥ ಬಳಕೆಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಮತ್ತು ಅವುಗಳ ನಿರ್ವಹಣೆಯ ಕುರಿತು ವಿಷಯ ಮಂಡನೆ ಮಾಡುವರು.
ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದ ಪ್ರಗತಿಪರ ಕೃಷಿಕರಾದ ಪಿ. ಸಿ ಶ್ರೀನಿವಾಸ್‍ರವರು ಸೇವಂತಿಗೆ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ತಾವು ಅನುಸರಿಸಿದ ಬೇಸಾಯ ಕ್ರಮಗಳ ಅನುಭವ ಹಂಚಿಕೊಳ್ಳುವರು.
ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ. ಗುರುದೇವಿಯವರು ಸೇವಂತಿಗೆ ಬೆಳೆಯಲ್ಲಿ ಬರುವ ರೋಗಗಳ ನಿರ್ವಹಣೆ ಮತ್ತುಬಬ್ಬೂರು ಫಾರಂನ ಕೃಷಿ ವಿಜ್ಞಾನಕೇಂದ್ರದ ಕೀಟಶಾಸ್ತ್ರಜ್ಞರಾದ ಡಾಓಂಕಾರಪ್ಪರವರು ಸೇವಂತಿಗೆ ಬೆಳೆಯಲ್ಲಿ ಕೀಟಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ತೊಗರಿ ರೇಟ್ ಎಷ್ಟಿದೆ?
ಫೆ.13ರಂದು ಬೆಳಿಗ್ಗೆ 10ಕ್ಕೆ ಬಬ್ಬೂರು ಫಾರಂನ ಕೃಷಿ ವಿಜ್ಞಾನಕೇಂದ್ರದ ತೋಟಗಾರಿಕೆ ತಜ್ಞರಾದ ಡಾ ಮಹಾಂತೇಶ್ ಪಿ. ಎಸ್ ಅವರು ತೆಂಗಿನ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳು ಮತ್ತು ಹಿರಿಯ ತಾಂತ್ರಿಕ ಅಧಿಕಾರಿಯಾದ ಡಾ. ರುದ್ರಮುನಿ ಟಿ ಅವರು ತೆಂಗಿನ ಬೆಳೆಯಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ಫೆ.14ರಂದು ಬೆಳಿಗ್ಗೆ 10ಕ್ಕೆ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞರಾದ ಡಾ ಮಹಾಂತೇಶ್ ಪಿ. ಎಸ್ ಅವರು ಅಡಿಕೆ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ಹಾಗೂ ಕೀಟಶಾಸ್ತ್ರಜ್ಞರಾದಡಾಓಂಕಾರಪ್ಪರವರು
ಫೆ.13 ಮತ್ತು 14ರಂದು ನೆಟಾಫಿಮ್ ಸಂಸ್ಥೆಯ ಬೇಸಾಯ ಶಾಸ್ತ್ರಜ್ಞರಾದ ಅಂಜಿನಪ್ಪರವರು ತೆಂಗು ಮತ್ತು ಅಡಿಕೆ ಬೆಳೆಯಲ್ಲಿ ನೀರಿನ ಸಮರ್ಥ ಬಳಕೆಯ ತಾಂತ್ರಿಕತೆ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಮತ್ತು ಅವುಗಳ ನಿರ್ವಹಣೆಯ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
Also Read: ಮಹಾಕುಂಭ ಮೇಳದಲ್ಲಿ ಎಂ.ಸಿ.ರಘುಚಂದನ್ ಪವಿತ್ರ ಸ್ನಾನ
ಪ್ರತಿ ದಿನ ಆಸಕ್ತ ಚಿತ್ರದುರ್ಗ ಜಿಲ್ಲೆಯ 60 ಜನರೈತ ಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು 8277931058 ದೂರವಾಣಿ ಸಂಖ್ಯೆಗೆಕರೆ ಮಾಡಿ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.
ನೋಂದಾವಣಿ ಮಾಡಿಕೊಂಡ ರೈತ ಭಾಂದವರು ಫ್ರೂಟ್ಸ್ ಐಡಿ (ಎಫ್.ಐಡಿ) ಅಥವಾ ಚುನಾವಣೆ ಗುರುತಿನ ಚೀಟಿಯೊಂದಿಗೆ ತರಬೇತಿಗೆ ಹಾಜರಾಗಲು ವಿನಂತಿಸಿದೆ ಹಾಗೂ ಮೊದಲು ನೋಂದಾವಣಿ ಮಾಡಿಕೊಂಡ 60 ಜನ ರೈತ ಭಾಂದವರನ್ನು ತರಬೇತಿಗೆ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.