ಮುಖ್ಯ ಸುದ್ದಿ
SRS ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛತೆ ಅರಿವು ಅಭಿಯಾನ

CHITRADURGA NEWS | 15 MARCH 2025
ಚಿತ್ರದುರ್ಗ: ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಗರದ ಚಂದ್ರವಳ್ಳಿಯಲ್ಲಿ ಸ್ವಚ್ಛತೆಯ ಅರಿವು ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
Also Read: ಚಂದ್ರವಳ್ಳಿ ಬಳಿ ನರ್ತಕಿಯ ಶಿಲೆ ಪತ್ತೆ | ಮುರುಘಾಶ್ರೀ ಮ್ಯೂಸಿಯಂಗೆ ಹಸ್ತಾಂತರ
ಚಂದ್ರವಳ್ಳಿಯ ಚರಿತ್ರೆಯ ಕುರಿತು ಕನ್ನಡ ಉಪನ್ಯಾಸಕ ಕೆ.ದೇವೇಂದ್ರಪ್ಪ ಕನ್ನಡದ ಮೊದಲ ರಾಜಮನೆತನವಾದ ಕದಂಬರ ಸಂಸ್ಥಾಪಕ ಮಯೂರ ವರ್ಮನ ಏಕೈಕ ಶಾಸನ ಚಂದ್ರವಳ್ಳಿ ಶಾಸನದ ಲಿಪಿ, ಸಾಲುಗಳ ಸಂಖ್ಯೆ, ಭಾಷೆ, ಮಯೂರ ವರ್ಮನು ಚಂದ್ರವಳ್ಳಿ ಕೆರೆ ದುರಸ್ಥಿಗೊಳಿಸಿದ ಉಲ್ಲೇಖ ಹಾಗೂ ಚಿತ್ರದುರ್ಗ ಪ್ರದೇಶದ ಪ್ರಾಚೀನ ಚರಿತ್ರೆ ಈ ಚಂದ್ರವಳ್ಳಿಯಿಂದ ಉಗಮವಾಗಿದೆ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಿವರಿಸಿದರು.
ಈ ಶಾಸನದ ಭಾಷೆ ಪ್ರಾಕೃತ ಹಾಗೂ ಮಯೂರ ವರ್ಮನ ಕಾಲಮಾನ ಕ್ರಿ.ಶ.258 ಎಂದು ಮೊಟ್ಟ ಮೊದಲ ಬಾರಿಗೆ ಎಂ.ಎಚ್.ಕೃಷ್ಣರವರು ಪ್ರಕಟಗೊಳಿಸಿರುತ್ತಾರೆ.
ಕಾಲಮಾನವನ್ನು ಕುರಿತು ಕನ್ನಡದ ಪ್ರಸಿದ್ಧ ಸಂಶೋಧಕರು ಭಿನ್ನಾಭಿಪ್ರಾಯವನ್ನು ಹೊಂದಿರುತ್ತಾರೆ. ಇನ್ನೂ ಭಾಷೆಯನ್ನು ಕುರಿತಂತೆ ಹಿರಿಯ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ಅವರು ಸಂಸ್ಕೃತ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿವರಣೆಯಿಂದ ಮಯೂರ ವರ್ಮ ಶಾಸನದ ಮಹತ್ವವನ್ನು ವಿದ್ಯಾರ್ಥಿಗಳು ಪಡೆದರು.
Also Read: PSI ಗಾದಿಲಿಂಗಪ್ಪ – ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೇ ಪ್ರಕರಣ | ಪಿಎಸ್ಐ ವಿರುದ್ಧ FIR ದಾಖಲಿಸಲು ಪಟ್ಟು
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಿ.ಪಿ. ನಂದನ್, ಮಾಧುರಿ ಹಾಗೂ ವಿದ್ಯಾರ್ಥಿಗಳು ಇದ್ದರು.
