By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಚಿತ್ರದುರ್ಗ ಜಿಲ್ಲೆಯ ಹೊಸ ಮತದಾರರ ಪಟ್ಟಿ ಪ್ರಕಟ | ಯಾವ ತಾಲೂಕಿನಲ್ಲಿ ಎಷ್ಟು ಮತದಾರರು?
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಚಿತ್ರದುರ್ಗ ಜಿಲ್ಲೆಯ ಹೊಸ ಮತದಾರರ ಪಟ್ಟಿ ಪ್ರಕಟ | ಯಾವ ತಾಲೂಕಿನಲ್ಲಿ ಎಷ್ಟು ಮತದಾರರು?

ಮುಖ್ಯ ಸುದ್ದಿ

ಚಿತ್ರದುರ್ಗ ಜಿಲ್ಲೆಯ ಹೊಸ ಮತದಾರರ ಪಟ್ಟಿ ಪ್ರಕಟ | ಯಾವ ತಾಲೂಕಿನಲ್ಲಿ ಎಷ್ಟು ಮತದಾರರು?

News Desk Chitradurga News
Last updated: 7 January 2025 03:08
News Desk Chitradurga News
6 months ago
Share
New voter list published
ಹೊಸ ಮತದಾರರ ಪಟ್ಟಿ ಪ್ರಕಟ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 06 JANUARY 2025

ಚಿತ್ರದುರ್ಗ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ 14,29,555 ಮತದಾರರು ಇದ್ದು, ಪುರುಷ-7,09,048, ಮಹಿಳೆ-7,20,420 ಹಾಗೂ ಇತರೆ-87 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: ವಾಣಿವಿಲಾಸ ಸಾಗರ ಜಲಾಶಯದ ಇಂದಿನ ಮಟ್ಟ

 ಸೋಮವಾರ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮದ ಅನ್ವಯ ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪ್ರಚುರಪಡಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಪ್ರತಿ ವರ್ಷ ಅಕ್ಟೋಬರ್ ಮಾಹೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಒಟ್ಟು 1,661 ಮತಗಟ್ಟೆಗಳಿದ್ದು, ಕರಡು ಮತದಾರರ ಪಟ್ಟಿ ಪ್ರಕಟಣೆಯನ್ವಯ ಈ ಮೊದಲು ಜಿಲ್ಲೆಯಲ್ಲಿ 14,35,994 ಮತದಾರರಿದ್ದರು. ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಜಿಲ್ಲೆಯಲ್ಲಿ 14,29,555 ಮತದಾರರಿದ್ದಾರೆ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: ಮಾದಾರ ಚನ್ನಯ್ಯ ಶ್ರೀ ಬಗ್ಗೆ ಅವಹೇಳನಕಾರಿ ಪೋಸ್ಟ್ | ದೂರು ದಾಖಲು

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ-2025ರ ಕಾರ್ಯಕ್ರಮದ ಅನ್ವಯ ಪ್ರಸಕ್ತ ಸಾಲಿನ ವರ್ಷದಲ್ಲಿ 13,758 ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಾಗ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮರಣ, ಡಬಲ್ ಎಂಟ್ರಿ ಸೇರಿದಂತೆ ಒಟ್ಟು 20,197 ಮತದಾರರನ್ನು ನಿಯಮಾನುಸಾರವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಒಟ್ಟು 11,727 ಮತದಾರರ ಹೆಸರು, ಭಾವಚಿತ್ರ ಬದಲಾವಣೆ, ತಂದೆ, ಗಂಡನ ಹೆಸರು ಹಾಗೂ ವಿಳಾಸ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ :

ಮತದಾರರ ಅಂತಿಮ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 14,29,555 ಮತದಾರರು ಇದ್ದು, ಪುರುಷ-7,09,048, ಮಹಿಳೆ-7,20,420 ಹಾಗೂ ಇತರೆ-87 ಮತದಾರರು ಇದ್ದಾರೆ. ವಿಧಾನಸಭಾ ಕ್ಷೇತ್ರವಾರು ಮತದಾರರ ಸಂಖ್ಯೆಯ ವಿವರ ಇಂತಿದೆ.

ಮೊಳಕಾಲ್ಮೂರು : ಪುರುಷ-1,25,800, ಮಹಿಳೆ-1,25,575, ಇತರೆ-13, ಒಟ್ಟು 2,51,387 ಮತದಾರರಿದ್ದಾರೆ.

ಚಳ್ಳಕೆರೆ : ಪುರುಷ-1,10,954, ಮಹಿಳೆ-1,13,139, ಇತರೆ-08, ಒಟ್ಟು 2,24,101.

 ಚಿತ್ರದುರ್ಗ: 1,31,022, ಮಹಿಳೆ-1,36,410, ಇತರೆ-39, ಒಟ್ಟು 2,67,471.

 ಹಿರಿಯೂರು: 1,22,266, ಮಹಿಳೆ-1,25,793, ಇತರೆ-16, ಒಟ್ಟು 2,48,075.

 ಹೊಸದುರ್ಗ: 1,00,596, ಮಹಿಳೆ-1,01,185, ಇತರೆ-01, ಒಟ್ಟು 2,01,782.

 ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ- 1,18,410, ಮಹಿಳೆ-1,18,319, ಇತರೆ-10, ಒಟ್ಟು 2,36,739 ಮತದಾರರಿದ್ದಾರೆ.

29,240 ಯುವ ಮತದಾರರು:  

ಕರಡು ಮತದಾರರ ಪಟ್ಟಿಯಲ್ಲಿ 18 ರಿಂದ 19 ವರ್ಷದ 22,667 ಯುವ ಮತದಾರರಿದ್ದು, ಅಂತಿಮ ಪಟ್ಟಿಯನ್ವಯ ಈ ಸಂಖ್ಯೆ 29,240ಕ್ಕೆ ಏರಿಕೆಯಾಗಿದೆ. 369 ಸೇವಾ ಮತದಾರರಿದ್ದಾರೆ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿಗೆ ಸಾಣೇಹಳ್ಳಿ ಶ್ರೀ ಆಯ್ಕೆ

ಭಾರತ ಚುನಾವಣಾ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 14ಕ್ಕೆ ತಿದ್ದುಪಡಿ ಮಾಡಿ ಮತದಾರರ ನೋಂದಣಿ ನಿಯಮಗಳು 1960ಕ್ಕೆ ಅನುಗುಣವಾಗಿ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಲು 4 ಅರ್ಹತಾ ದಿನಾಂಕಗಳನ್ನು ನೀಡಿ, ಅವಕಾಶ ಕಲ್ಪಿಸಿದ್ದು, ಜನವರಿ 1, ಏಪ್ರಿಲ್ 1, ಜುಲೈ 1, ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹ ಮತದಾರರು ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು.

ಹಾಗೂ ಹೆಸರು ಕೈಬಿಟ್ಟುಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿ ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಅದೇ ವಿಧಾನ ಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾದಲ್ಲಿ ನಿಗಧಿಪಡಿಸಿರುವ ನಮೂನೆಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ, ತಾಲ್ಲೂಕು ಕಚೇರಿಯಲ್ಲಿ, ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ.

www.ceokarntaka.nic.in, https://chitradurga.nic.in ವೆಬ್‍ಸೈಟ್‍ನಲ್ಲಿಯೂ ಸಹ ಪರಿಶೀಲಿಸಿಕೊಂಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿಗಳನ್ನು ಗಿಊಂ ಂಠಿಠಿ ನಲ್ಲಿಯೂ ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕ್ಲಿಕ್ ಮಾಡಿ ಓದಿ: 15. ಹಿರೇ ಬಡಗಿ ಗೌನಳ್ಳಿಗೆ ಬಂದರು | ಹಬ್ಬಿದಾ ಮಲೆ ಮಧ್ಯದೊಳಗೆ

ರಾಜಕೀಯ ಪಕ್ಷದವರು ಪ್ರತಿಯೊಂದು ಮತಗಟ್ಟೆಗೆ ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಕ ಮಾಡಿ, ಏಜೆಂಟರು ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಗೆ ಅರ್ಹರನ್ನು ಸೇರಿಸುವ, ಬಿಡತಕ್ಕ, ತಿದ್ದುಪಡಿ, ಮಾಡಲು ಬಿಎಲ್‍ಓಗಳಿಗೆ ಸಹಾಯ ಮಾಡುವಂತೆ ಕೋರಿದರು.

ಮತದಾರರ ಭಾವಚಿತ್ರವಿರುವ ಗುರತಿನ ಚೀಟಿಯು ನೇರವಾಗಿ ಆಯಾ ಮತದಾರರ ವಿಳಾಸಕ್ಕೆ ಅಂಚೆ ಮೂಲಕ ಉಚಿತವಾಗಿ ತಲುಪಿಸಲಾಗುವುದು.

ಎಪಿಕ್ ಕಾರ್ಡ್ ಕಳೆದುಹೋದಲ್ಲಿ ಅಥವಾ ಬದಲಿ ಕಾರ್ಡ್ ಪಡೆಯಲು ಸಂಬಂಧಪಟ್ಟ ಬಿಎಲ್‍ಓ, ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿಯೇ ಅರ್ಜಿಯನ್ನು ಸಲ್ಲಿಸಿ, ಉಚಿತವಾಗಿ ಕಾರ್ಡ್ ಪಡೆಯಬಹುದಾಗಿದೆ.

ಮತದಾರರ ಪಟ್ಟಿಯ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ಸಂಪರ್ಕ ಕೇಂದ್ರದ ಸಹಾಯವಾಣಿ ಸಂಖ್ಯೆ-ಟೋಲ್ ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಕ್ಲಿಕ್ ಮಾಡಿ ಓದಿ: ಹುಲ್ಲೂರು ಅನಂತರೆಡ್ಡಿ ನಿಧನ | ಬಸವೇಶ್ವರ ಐ ಬ್ಯಾಂಕ್ ಗೆ ನೇತ್ರದಾನ

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಿಪಿಐ(ಎಂ)ಡಿಒಸಿ ಸಿ.ಕೆ.ಗೌಸ್‍ಪೀರ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್ ಸೇರಿದಂತೆ ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Assembly ConstituencyChitradurgaChitradurga newsChitradurga UpdatesCollector T. VenkatesDeputy Collector B.T. KumaraswamyElection Commission of Indiafinal listKannada Latest NewsKannada NewsList publishedVotersಅಂತಿಮ ಪಟ್ಟಿಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಜಿಲ್ಲಾಧಿಕಾರಿ ಟಿ. ವೆಂಕಟೇಶ್ಪಟ್ಟಿ ಪ್ರಕಟಭಾರತ ಚುನಾವಣಾ ಆಯೋಗಮತದಾರರವಿಧಾನಸಭಾ ಕ್ಷೇತ್ರ
Share This Article
Facebook Email Print
Previous Article ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
Next Article today bhavishya Horoscope: ದಿನ ಭವಿಷ್ಯ | ಜನವರಿ 07 | ಕುಟುಂಬ ಸದಸ್ಯರೊಂದಿಗೆ ವಿವಾದ, ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ
Leave a Comment

Leave a Reply Cancel reply

Your email address will not be published. Required fields are marked *

ಕ್ರೀಡಾ ಪ್ರೋತ್ಸಾಹಧನ | ಸರ್ಕಾರಿ ಶಾಲೆಯಿಂದ ಪ್ರಸ್ತಾವನೆ ಸಲ್ಲಿಸಲು ಅವಕಾಶ
ಮುಖ್ಯ ಸುದ್ದಿ
today bhavishya
Astrology: ದಿನ ಭವಿಷ್ಯ | ಜುಲೈ 01 | ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ, ಮನೆಯಲ್ಲಿ ಶುಭ ಕಾರ್ಯಗಳ ಪ್ರಸ್ತಾಪ, ನಿರುದ್ಯೋಗಿಗಳಿಗೆ ಶುಭ ಸುದ್ದಿ
Dina Bhavishya
ಕಾಂಗ್ರೆಸ್ ಅವಧಿಯಲ್ಲಿ ಶೇ.60 ರಷ್ಟು ಕಮಿಷನ್ ನಡೆಯುತ್ತಿದೆ | AAP ಜಿಲ್ಲಾಧ್ಯಕ್ಷ ಜಗದೀಶ್
ಮುಖ್ಯ ಸುದ್ದಿ
ಗಾಂಧಿವೃತ್ತ, ಸಂತೆಹೊಂಡದ ಬಳಿಯ ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ವೀಕ್ಷಿಸಿದ ಸಚಿವರು
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up