ಮೊಳಕಾಳ್ಮೂರು
TEACHERS: ಊರ ತುಂಬಾ ಲೈಟಿಂಗ್ಸ್, ಬಂಟಿಂಗ್ಸ್ | ಶಾಲೆ ಶಿಕ್ಷಕರ ಕಟೌಟು | ಗಡಿಭಾಗದ ಶಾಲೆಯಲ್ಲಿ ಜಾತ್ರೆಯ ಸಂಭ್ರಮ
CHITRADURGA NEWS | 06 NOVEMBER 2024
ಮೊಳಕಾಲ್ಮೂರು: ಜಾತ್ರೆಗಾದರೂ ಒಂಚೂರು ಕಡಿಮೆ ಅಲಂಕಾರ ಮಾಡಬಹುದೇನೊ ಎನ್ನುವಷ್ಟು ಲೈಟಿಂಗ್ಸ್, ಬಂಟಿಂಗ್ಸ್. ಚುನಾವಣೆಗಾದರೂ ಕಟೌಟ್ ಹಾಕಲು ನಿರ್ಬಂಧವಿದೆ. ಆದರೆ, ಇಲ್ಲಿ ಮಾತ್ರ ಆಳೆತ್ತರದ ಕಟೌಟ್‍ಗಳು ರಾರಾಜಿಸುತ್ತಿದ್ದವು.
ಇಷ್ಟೆಲ್ಲಾ ಅದ್ದೂರಿ, ವೈಭವಕ್ಕೆ ಕಾರಣವಾದ ಕಾರ್ಯಕ್ರಮ ಗುರುವಂದನ. ಅರೇ ಇದೇನಿದು, ಗುರುವಂದನೆಗೆ ಇಷ್ಟೆಲ್ಲಾ ಖರ್ಚು ಮಾಡುತ್ತಾರಾ ಎನ್ನಬಹುದು. ಆದರೆ, ಇಲ್ಲಿನ ಹಳೇ ವಿದ್ಯಾರ್ಥಿಗಳು ಜಾತ್ರೆಯನ್ನೇ ಮಾಡಿದ್ದಾರೆ.
ಇದನ್ನೂ ಓದಿ: ಚಳ್ಳಕೆರೆಯಲ್ಲಿ ಅಕ್ರಮ ಗಾಂಜಾ ಜಪ್ತಿ | ಅಂದಾಜು 3 ಲಕ್ಷ ಮೌಲ್ಯದ ಗಾಂಜಾ ಇದ್ದ ಮನೆ ಮೇಲೆ ಅಬಕಾರಿ ದಾಳಿ
ಒಂದು ಕಾಲಕ್ಕೆ ಈ ಗ್ರಾಮಕ್ಕೆ (TEACHERS)ಶಿಕ್ಷಕರು ಬರಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಉಡೇವು ಸರ್ಕಾರಿ ಶಾಲೆ ಹಚ್ಚ ಹಸುರಿನಿಂದ ನಳನಳಿಸುತ್ತಿದೆ. ಈ ಶಾಲೆಯ ಉನ್ನತೀಕರಣಕ್ಕೆ ಗ್ರಾಮದ ರೈತರು ಶೇಂಗಾ ಬೆಳೆಯಿಂದ ಬಂದ ಹಣವನ್ನು 1990 ರಲ್ಲಿ ದೇಣಿಗೆಯಾಗಿ ನೀಡಿದ ಉದಾಹರಣೆಯಿದೆ.
ಇದನ್ನೂ ಓದಿ: ದಿನ ಭವಿಷ್ಯ | ನವೆಂಬರ್ 06 | ಈ ರಾಶಿಯವರಿಗೆ ಆದಾಯ ಸಾಕಾಗುವುದಿಲ್ಲ
ಇಂತಹ ವಿಶೇಷ ಹಿನ್ನೆಲೆಯಿರುವ ಉಡೇವು ಸರ್ಕಾರಿ ಶಾಲೆಯಲ್ಲಿ ಸದ್ಯ 140 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ 1955 ರಿಂದ 2017ರವರೆಗೆ ಅಧ್ಯಯನ ನಡೆಸಿದ ಹಿರಿಯ ವಿದ್ಯಾರ್ಥಿಗಳೆಲ್ಲಾ ಸೇರಿ ಕಳೆದ ಭಾನುವಾರ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರು.
ಗುರುವಂದನಾ ಕಾರ್ಯಕ್ರಮಕ್ಕಾಗಿ ಗ್ರಾಮದ ತುಂಬೆಲ್ಲಾ ಲೈಟಿಂಗ್ಸ್ ಮಾಡಲಾಗಿತ್ತು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಜೊತೆಗಿರುವ ಆಳೆತ್ತರದ ಕಟೌಟ್‍ಗಳು ರಾರಾಜಿಸಿದವು.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಈ ಶಾಲೆಯಲ್ಲಿ ಅಧ್ಯಯನ ನಡೆಸಿ ಇಂದು ಬೇರೆ ಬೇರೆ ಸ್ಥರಗಳಲ್ಲಿ, ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾಧಕರು ಆಗಮಿಸಿದ್ದರು.
ಶಾಲೆಯ ಹಿರಿಯ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಟ್ರ್ಯಾಕ್ಟರ್‍ನಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದಾಗ ಶಿಕ್ಷಕರಿಗೆ ಸಾರ್ಥಕತೆಯ ಭಾವನೆ ಮೂಡಿತ್ತು.
ಇದನ್ನೂ ಓದಿ: ಚಿತ್ರದುರ್ಗ-ದಾವಣಗೆರೆ ಎರಡನೇ ರಾಜಧಾನಿಯಾಗಲಿ | ಬಸವಪ್ರಭು ಸ್ವಾಮೀಜಿ
ಈ ಕಾರ್ಯಕ್ರಮವನ್ನು ಶಿಕ್ಷಕರಾದ ಶಿವಣ್ಣ ನಿರ್ವಹಣೆ ಮಾಡಿದರೆ, ಎಚ್.ಗೌಡಪ್ಪ ಸ್ವಾಗತಿಸಿದರು.