ಮುಖ್ಯ ಸುದ್ದಿ
Chitradurga; ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಣೆಗೆ ಕರುನಾಡ ವಿಜಯಸೇನೆ ಒತ್ತಾಯ
CHITRADURGA NEWS | 27 SEPTEMBER 2024
ಚಿತ್ರದುರ್ಗ: ಐತಿಹಾಸಿಕ ಏಳು ಸುತ್ತಿನ ಕೋಟೆಯಿರುವ ಚಿತ್ರದುರ್ಗ(Chitradurga)ದಲ್ಲಿ ದುರ್ಗೋತ್ಸವ(Durgotsava) ಆಚರಿಸುವಂತೆ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕ್ಲಿಕ್ ಮಾಡಿ ಓದಿ: Village Accountants; ಗ್ರಾಮ ಲೆಕ್ಕಾಧಿಕಾರಿಗಳ ಮುಷ್ಕರ ಎರಡನೇ ದಿನಕ್ಕೆ
ರಾಜಾವೀರ ಮದಕರಿನಾಯಕ, ವೀರವನಿತೆ ಒನಕೆ ಓಬವ್ವಳ ನಾಡು ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಿಸಿ ವರ್ಷಗಳೆ ಉರುಳಿದೆ. ಮೈಸೂರು ದಸರಾ, ಹಂಪಿ ಉತ್ಸವ ಕೊಡಗು ಉತ್ಸವ, ಕಿತ್ತೂರು ಉತ್ಸವ ಆಚರಣೆಗೆ ಕೋಟಿಗಟ್ಟಲೆ ಹಣ ವ್ಯಯಿಸುತ್ತಿರುವ ಸರ್ಕಾರ ಚಿತ್ರದುರ್ಗ ಉತ್ಸವ ಏಕೆ ಆಚರಿಸುತ್ತಿಲ್ಲ.
ಅನೇಕ ಬಾರಿ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದೇವೆ. ರಾಜಕಾರಣಿಗಳಿಗೆ ಆಸಕ್ತಿ ಇಲ್ಲದಿರುವುದೇ ದುರ್ಗೋತ್ಸವ ನಡೆಯದಿರಲು ಕಾರಣ ಎಂದು ಪ್ರತಿಭಟನಯಲ್ಲಿ ಆಪಾದಿಸಿದರು.
ವಿಶ್ವಹಿಂದೂ ಪರಿಷತ್, ಭಜರಂಗದಳದವರು ಕಳೆದ ಹದಿನೆಂಟು ವರ್ಷಗಳಿಂದಲೂ ನಿರಂತರವಾಗಿ ಹಿಂದೂ ಮಹಾ ಗಣಪತಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಕ್ಲಿಕ್ ಮಾಡಿ ಓದಿ: Hindu MahaGanapathi shobhayatra; ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಸಜ್ಜಾದ ಕೋಟೆನಾಡು | ಸ್ವರ್ಗದಂತಿರುವ ದುರ್ಗ ನೋಡಿ
ದುರ್ಗೋತ್ಸವ ಆಚರಣೆಗೆ ಏಕೆ ಕರ್ನಾಟಕ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಡಿಸೆಂಬರ್ ಒಳಗೆ ದುರ್ಗೋತ್ಸವ ಆಚರಿಸುವಂತೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಉಪಾಧ್ಯಕ್ಷೆ ರತ್ನಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಎಸ್. ಕಾರ್ಯದರ್ಶಿ ಜಗದೀಶ್ ಸಿ. ಉಪಾಧ್ಯಕ್ಷ ಮುಜಾಹಿದ್, ವಿದ್ಯಾರ್ಥಿ ಘಟಕದ ಅಖಿಲೇಶ್, ನಗರಾಧ್ಯಕ್ಷ ಅವಿನಾಶ್, ಯರ್ರಿಸ್ವಾಮಿ, ನಾಗರಾಜ್ ಮುತ್ತು, ಕಮಲ, ಸುರೇಶ್, ಹರೀಶ್‍ಕುಮಾರ್ ಇದ್ದರು.