Connect with us

ಭಾರತೀಯ ಮಹಿಳಾ ಅಂಧರ ಕ್ರಿಕೇಟ್ ತಂಡಕ್ಕೆ ನಾಯಕಿಯಾದಳು ಹಿರಿಯೂರಿನ ಮಗಳು ವರ್ಷಾ

ಭಾರತೀಯ ಮಹಿಳಾ ಅಂಧರ ಕ್ರಿಕೇಟ್ ತಂಡಕ್ಕೆ ನಾಯಕಿ

ಮುಖ್ಯ ಸುದ್ದಿ

ಭಾರತೀಯ ಮಹಿಳಾ ಅಂಧರ ಕ್ರಿಕೇಟ್ ತಂಡಕ್ಕೆ ನಾಯಕಿಯಾದಳು ಹಿರಿಯೂರಿನ ಮಗಳು ವರ್ಷಾ

ಚಿತ್ರದುರ್ಗ ನ್ಯೂಸ್:

  • ಹಿರಿಯೂರು ತಾಲೂಕು ಆದಿವಾಲ ಗ್ರಾಮದ ರೈತನ ಮಗಳು
  • ಕೋಟೆನಾಡಿನ ಮಗಳ ಸಾಧನೆ ಕರ್ನಾಟಕದ ಹಿರಿಮೆ
  • ಇಂಗ್ಲೆಂಡ್‍ನಲ್ಲಿ ಭಾರತ ತಂಡ ಮುನ್ನಡೆಸುತ್ತಿರುವ ವರ್ಷಾ

ಸಾಧನೆಗೆ ಛಲ ಬೇಕಾಗಿರುವುದು ಛಲ ಮಾತ್ರ. ಮತ್ತಾವುದೇ ಸೌಲಭ್ಯಗಳಲ್ಲ ಎನ್ನುವುದನ್ನು ಹಿರಿಯೂರು ತಾಲೂಕು ಆದಿವಾಲ ಗ್ರಾಮದ ಸಾಮಾನ್ಯ ರೈತನ ಮಗಳು ವರ್ಷಾ ಸಾಬೀತು ಮಾಡಿದ್ದಾರೆ.

ಹೌದು, ಬಾಲ್ಯದಲ್ಲಿ ಕಣ್ಣಿನ ಸಮಸ್ಯೆಯಾಗಿ ದೃಷ್ಟಿಯನ್ನೇ ಕಳೆದುಕೊಂಡ ವರ್ಷಾ, ಈ ಪರಿಸ್ಥಿತಿಯನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆಯ ಶಿಖರವನ್ನೇರಿದ್ದಾರೆ. ವರ್ಷಾ ಇಂದು ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಇಡೀ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಸದ್ಯ ಇಂಗ್ಲೆಡ್‍ನ ಬಮಿರ್ಂಗ್ ಹ್ಯಾಮ್‍ನಲ್ಲಿ ಆಗಸ್ಟ್ 20 ರಿಂದ 26ರ ವರೆಗೆ ನಡೆದ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೇಡರೇಷನ್(ಐಬಿಎಸ್‍ಎ) ವಿಶ್ವ ಕ್ರೀಡಾಕೂಟದಲ್ಲಿ ಭಾರತ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ್ದಾರೆ. ಮೊದಲು ಆ.20ರಂದು ಆಸ್ಟ್ರೇಲಿಯಾ ಮತ್ತು ಆ.21ರಂದು ಇಂಗ್ಲೆಂಡ್ ವಿರುದ್ದ ಜಯಗಳಿಸಿದ್ದಾರೆ.

ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ತೇರುಬೀದಿ ನಿವಾಸಿಯಾಗಿರುವ ರೈತ ಉಮಾಪತಿ ಮತ್ತು ಯಶೋಧಾ ದಂಪತಿಗಳ ಪುತ್ರಿ ವರ್ಷಾ. ಇವರ ತಾಯಿಯ ತವರು ಹೊಸದುರ್ಗ ತಾಲೂಕಿನ ಕೆಂಕೆರೆಯಾಗಿದೆ.

ವರ್ಷಾ ಬಾಲ್ಯದ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಬಾಲ್ಯ ಶಿಕ್ಷಣ ಪಡೆದಿದ್ದಾಳೆ. ಬಾಲ್ಯದಲ್ಲಿ ಕಣ್ಣಿನ ಪಿಗ್ಮೆಂಟೊಸ್ ಸಮಸ್ಯೆಯಿದ್ದು, ಆಗ ಶೇ.20ರಷ್ಟು ಮಾತ್ರ ದೃಷ್ಟಿ ದೋಷವಿತ್ತು. ಆದರೂ ಓದುವುದು, ಬರೆಯುವುದು ಮಾಡುತ್ತಿದ್ದಳು. ಹೈಸ್ಕೊಲ್ ಓದುವ ವೇಳೆಗೆ ಪೂರ್ಣ ಪ್ರಮಾಣದಲ್ಲಿ ದೃಷ್ಟಿ ದೋಷ ಆವರಿಸಿದ ಪರಿಣಾಮ ಪೂರ್ಣ ಅಂಧತ್ವ ಅವರಿಸಿದೆ. ಈ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮತ್ತೊಬ್ಬರ ಸಹಾಯದಿಂದ ಪರೀಕ್ಷೆ ಬರೆದು ಶೇ.88 ರಷ್ಟು ಅಂಕಗಳಿಸಿ ಭೇಷ್ ಅನ್ನಿಸಿಕೊಂಡಿದ್ದಾಳೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಛಲ ಬಿಡದ ವರ್ಷಾ ಅವರ ಚಿಕ್ಕಮ್ಮ ಪುಷ್ಪಾ ಹಾಗೂ ಚಿಕ್ಕಪ್ಪ ರಮೇಶ್ ಸಹಾಯದಿಂದ ಬೆಂಗಳೂರಿನ ಬಸವನಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ್ದಾಳೆ. ಪ್ರಸ್ತುತ ಬಿ.ಎ ಪದವಿ ಹಾಗೂ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಾರೆ.

ಪಿಯುಸಿ ಮುಗಿಸಿದ ನಂತರವೇ 2019ರಲ್ಲಿ ಕ್ರಿಕೆಟ್ ಆಟದ ಸೆಳೆತಕ್ಕೆ ಮನಸೋತು ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಸಮರ್ಥನಂ ಎಂಬ ತರಬೇತಿ ಅಕಾಡೆಮಿಗೆ ಸೇರಿ ಉತ್ತಮ ತರಬೇತಿ ಪಡೆದ್ದಾಳೆ. ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಕರ್ನಾಟಕ ಅಂಧರ ಮಹಿಳಾ ತಂಡದಲ್ಲಿಯೂ ಅರ್ಹತೆ ಪಡೆದು ಸುಮಾರು 15-16 ರಾಜ್ಯಗಳ ವಿರುದ್ದ ಆಟವಾಡಿದ್ದಾರೆ.

2022ರಲ್ಲಿ ಭಾರತ ಅಂಧರ ತಂಡಕ್ಕೂ ಆಯ್ಕೆಯಾಗಿ ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಬಹುಮಾನ, ಪ್ರಶಸ್ತಿ ಪಡೆದಿದ್ದಾಳೆ. 2023ರ ಜನವರಿ ತಿಂಗಳಲ್ಲಿ ನಡೆದ ಭಾರತ-ನೇಪಾಳ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯೂ ಪಡೆದಿದ್ದಾಳೆ.

ವರ್ಷಾ ಉತ್ತಮ ಅಲ್‍ರೌಂಡರ್. ಬಲಗೈ ಬ್ಯಾಟ್ಸ್‍ಮನ್ ಹಾಗೂ ಅತ್ಯುತ್ತಮ ಬೌಲರ್. 13 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ದಾಖಲೆ ಈಕೆಯಲ್ಲಿ ಹೆಸರಿನಲ್ಲಿದೆ. ಅಲ್ಲದೇ ಬಲಗೈ ವೇಗದ ಬೌಲರ್ ಕೂಡ ಆಗಿದ್ದು ಒಮ್ಮೆ ಹ್ಯಾಟ್ರಿಕ್ ಸಾಧನೆ ಕೂಡ ಮಾಡಿದ್ದಾರೆ.

(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)

(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ  https://www.facebook.com/chitradurganews?mibextid=ZbWKwL)

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version