ಕ್ರೈಂ ಸುದ್ದಿ
ಅಡಿಕೆ ತೋಟದಲ್ಲಿ ಗಾಂಜಾ ಬೆಳೆ | ಹತ್ತು ವರ್ಷ ಜೈಲು ಶಿಕ್ಷೆ
CHITRADURGA NEWS | 3 MARCH 2024
ಚಿತ್ರದುರ್ಗ: ಅಡಕೆ ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಯರ್ರಿಸ್ವಾಮಿ ಎಂಬುವವರ ತೋಟದಲ್ಲಿ 30 ಕೆ.ಜಿ. 500 ಗ್ರಾಂ ಹಸಿ ಗಾಂಜಾ ಸೊಪ್ಪು ಪತ್ತೆಯಾಗಿತ್ತು. ಇದನ್ನು ವಶಪಡಿಸಿಕೊಂಡ ಪೊಲೀಸರಯ ಆರೋಪಿ ಯರ್ರಿಸ್ವಾಮಿ ವಿರುದ್ಧ ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಶಾಸಕ ಚಂದ್ರಪ್ಪ ಮನೆಗೆ ಕಾರಜೋಳ ಭೇಟಿ | ಮಾತಿಗೆ ತಪ್ಪಲ್ಲ ಎಂದ ರಘುಚಂದನ್
ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪಿಐ ಎಚ್.ಶಫೀವುಲ್ಲಾ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದರು.
ಸದರಿ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ 10 ವರ್ಷ ಜೈಲು ಕಠಿಣ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಿ ಏಪ್ರಿಲ್ 1 ರಂದು ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ಎಚ್ಚರ…ಮನೆಯಿಂದ ಹೊರ ಬರಬೇಡಿ | ಹೆಚ್ಚಿದೆ ಸೂರ್ಯನ ಆರ್ಭಟ
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಹಣೇಶ್ ನಾಯ್ಕ್ ವಾದ ಮಂಡಿಸಿದ್ದರು.