Connect with us

    ಗಾಂಧಿ ವೃತ್ತದಲ್ಲಿ ಕಟ್ಟಡ ತೆರವು ಕಾರ್ಯಾಚರಣೆ | ನೊಡಲು ಜನವೋ ಜನ

    Buildin operation i Gandhi circle

    ಮುಖ್ಯ ಸುದ್ದಿ

    ಗಾಂಧಿ ವೃತ್ತದಲ್ಲಿ ಕಟ್ಟಡ ತೆರವು ಕಾರ್ಯಾಚರಣೆ | ನೊಡಲು ಜನವೋ ಜನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 09 MARCH 2025

    ಚಿತ್ರದುರ್ಗ: ನಗರದಲ್ಲಿ ರಸ್ತೆ ಅಗಲೀಕರಣದ ವಿಚಾರ ತೀವ್ರ ಚರ್ಚೆಯಲ್ಲಿದೆ. ಈ ನಡುವೆಯೇ ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಎರಡು ಜೆಸಿಬಿಗಳು ಬಂದು ಗಾಂಧಿ ವೃತ್ತದಲ್ಲಿ ನಿಂತ ತಕ್ಷಣ ಕಟ್ಟಡ ಮಾಲಿಕರ ಎದೆಯಲ್ಲಿ ಢವ ಢವ ಶುರುವಾಗಿತ್ತು.

    ಕೆಲ ಹೊತ್ತಿನಲ್ಲೇ ಪೊಲೀಸರು ಬಂದರು, ನಗರಸಭೆ ಅಧಿಕಾರಿಗಳು, ಸಾಕಷ್ಟು ಸಾರ್ವಜನಿಕರು ಜಮಾಯಿಸಿದರು. ಸಂಚಾರಕ್ಕೆ ಅಡ್ಡಿಯಾಗಿದ್ದ ಗಾಂಧಿ ವೃತ್ತದ ಪಕ್ಕದಲ್ಲೇ ಇರುವ ಕಟ್ಟಡವೊಂದನ್ನು ತೆರವು ಪ್ರಕ್ರಿಯೆ ಶುರುವಾಯಿತು.

    ಇದನ್ನೂ ಓದಿ: ಭೀಕರ ಅಪಘಾತ | ಐದು ಜನ ಸ್ಥಳದಲ್ಲೇ ಸಾವು | ತಮಟಕಲ್ಲು ಬಳಿ ಘಟನೆ

    ಹೌದು, ಬಾಟೆಲ್ ನೆಕ್ ರೀತಿಯಲ್ಲಿ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿರುವ ಕಟ್ಟಡಗಳ ತೆರವಿಗೆ ನಗರಸಭೆ ಅಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದು ಕಾರ್ಯಾಚರಣೆಗೆ ಇಳಿದಿದ್ದಾರೆ.

    ಇದರ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿದ್ದ ಗಾಂಧಿ ವೃತ್ತದಲ್ಲಿನ ಹಳೆಯ ಕಟ್ಟಡದ ಮೂರು ಮಳಿಗೆಗಳನ್ನು ಎರಡು ಜೆಸಿಬಿಗಳ ಮೂಲಕ ತೆರವು ಮಾಡಲು ಪೊಲೀಸ್ ಭದ್ರತೆಯೊಂದಿಗೆ ಚಾಲನೆ ನೀಡಲಾಯಿತು.

    ಇದನ್ನೂ ಓದಿ: ಔಡಲ ಚಿಗುರು ತಿಂದ 86 ಕುರಿ ಸಾವು

    ನಗರಸಭೆಯ ಕಟ್ಟಡ ತೆರವು ಕಾರ್ಯಾಚರಣೆಗೆ ಅಲ್ಲಿನ ಮಳಿಗೆಗಳ ಮಾಲಕರು, ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಕಟ್ಟಡ ತೆರವು ಮಾಡುವುದರಿಂದ ನಮ್ಮ ಕಟ್ಟಡಗಳಿಗೂ ತೊಂದರೆಯಾಗಲಿದೆ ಎಂದು ಅಕ್ಕಪಕ್ಕದ ಕಟ್ಟಡದ ಮಾಲಿಕರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.

    ಪ್ರತಿಕ್ರಿಯಿಸಿದ ಅಧಿಕಾರಿಗಳು, ನ್ಯಾಯಾಲಯದ ಅನುಮತಿ ಪಡೆದು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ತಿಳಿಸಿದರೂ ಮಾತಿನ ಚಕಮಕಿ ಮುಂದುವರೆದಿತ್ತು. ಅಂತಿಮವಾಗಿ ಪೊಲೀಸರ ಭದ್ರತೆಯೊಂದಿಗೆ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರೆದಿದೆ.

    ಇದನ್ನೂ ಓದಿ: ಮೂವರು ಪೊಲೀಸ್ Inspector ವರ್ಗಾವಣೆ

    ನಗರದ ಹೃದಯ ಭಾಗದಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದರು. ಸಂಚಾರಕ್ಕೆ ಸಮಸ್ಯೆಯಾಗಿತ್ತು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top