Connect with us

    ದೇಶದಲ್ಲೇ ಮಾದರಿ ಗ್ರಾಪಂ ಕಟ್ಟಡ ನಿರ್ಮಿಸಿ | ಗೋವಿಂದ ಕಾರಜೋಳ

    ಮುಖ್ಯ ಸುದ್ದಿ

    ದೇಶದಲ್ಲೇ ಮಾದರಿ ಗ್ರಾಪಂ ಕಟ್ಟಡ ನಿರ್ಮಿಸಿ | ಗೋವಿಂದ ಕಾರಜೋಳ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 25 DECEMBER 2024

    ಚಿತ್ರದುರ್ಗ: ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಎಲ್ಲರಿಂದಲೂ ಅನುದಾನ ಪಡೆದು ದೇಶದಲ್ಲಿಯೇ ಮಾದರಿಯಾಗಿರುವಂತೆ ನಿರ್ಮಿಸಿ ಎಂದು ಸಂಸದ ಗೋವಿಂದ ಎಂ.ಕಾರಜೋಳರವರು ತಿಳಿಸಿದರು

    ಕ್ಲಿಕ್ ಮಾಡಿ ಓದಿ: ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ

    ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಮತ್ತು ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ನರೇಗಾ ಹಾಗೂ 15ನೇ ಹಣಕಾಸು ಯೋಜನೆ ಅನುದಾನದಡಿಯಲ್ಲಿ ದೊಡ್ಡಸಿದ್ದವ್ವನಹಳ್ಳಿಯಲ್ಲಿ 1.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ನರೇಗಾ ಯೋಜನೆಯಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಲು ಅವಕಾಶವಿದೆ. ಸಂಸದರ ಅನುದಾನದಲ್ಲಿಯೂ ನೆರವು ನೀಡುತ್ತೇನೆ. ಇಲ್ಲಿ ರೈತರಿಗೆ ಅಗತ್ಯ ಮಾಹಿತಿ ಸಿಗುವುದು ಸೇರಿದಂತೆ ಬಹು ಉಪಯೋಗಿ ಕಟ್ಟಡ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು.

    ಬಾಗಲಕೋಟೆ ಜಿಲ್ಲೆಯ ಮಂಟೂರು ಗ್ರಾಮದಲ್ಲಿ ದೇಶಕ್ಕೆ ಮಾದರಿಯಾಗಿರುವಂತ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿಂದ ಮ್ಯಾಪ್ ತರಿಸಿಕೊಂಡು ನೀವುಗಳು ಅದೇ ರೀತಿಯಲ್ಲಿ ನೂತನ ಕಟ್ಟಡ ನಿರ್ಮಿಸಿ ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪನವರ ಕೊಡುಗೆ ರಾಜ್ಯಕ್ಕೆ ಸಾಕಷ್ಟಿದೆ. ನೂತನ ಕಟ್ಟಡಕ್ಕೆ ಅವರ ಹೆಸರನ್ನಿಡಿ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: ಕರಡಿ ಮರಿಗಳ BIRTHDAY ಸಂಭ್ರಮ | ಆಡುಮಲ್ಲೇಶ್ವರದಲ್ಲಿ ವಿಶಿಷ್ಟ ಆಚರಣೆ

    ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡುತ್ತಾ, ಎಸ್.ನಿಜಲಿಂಗಪ್ಪನವರು ರಾಜ್ಯಕ್ಕೆ ಹೇಗೆ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದರೋ ಅದೇ ರೀತಿ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ರಾಜ್ಯಕ್ಕೆ ಮಾದರಿಯಾಗಿರುವಂತೆ ನಿರ್ಮಿಸಬೇಕು.

    ಐದು ನೂರು ಜನ ಕೂರುವಂತ ದೊಡ್ಡ ಸಭಾಂಗಣ, ಸಿಬ್ಬಂದಿಗಳಿಗೆ ಪ್ರತ್ಯೇಕ ಕೋಣೆ, ನಿರ್ಮಿಸಲಾಗುವುದು. ರಾಜಕಾರಣ ಬೇರೆ. ಅಭಿವೃದ್ದಿ ವಿಚಾರ ಬಂದಾಗ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಈ ಪಂಚಾಯಿತಿಗೆ 187 ಮನೆಗಳನ್ನು ಮಂಜೂರು ಮಾಡಲಾಗುವುದು. ನೂತನ ಕಟ್ಟಡಕ್ಕೆ ಶಾಸಕರ ಅನುದಾನದಿಂದ 25 ಲಕ್ಷ ರೂ.ಗಳನ್ನು ನೀಡುತ್ತೇನೆಂದು ಭರವಸೆ ಕೊಟ್ಟರು.

    ಮುಖ್ಯಮಂತ್ರಿಗಳ ಅನುದಾನದಿಂದ 35 ಲಕ್ಷ ರೂ.ಗಳನ್ನು ನೀಡಲಾಗಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯಿ0ದ ತಲಾ ಮೂರು ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಸಂಸದರ ಅನುದಾನದಲ್ಲಿಯೂ ಹಣ ಪಡೆಯಲು ಅವಕಾಶವಿದೆ. ಒಟ್ಟಾರೆ ಗ್ರಾಮ ಪಂಚಾಯಿತಿ ಕಟ್ಟಡ ಸುಂದರವಾಗಿ ನಿರ್ಮಾಣವಾಗಬೇಕೆಂದರು.

    ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿನಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ದೇಶದಲ್ಲಿಯೇ ಈ ಕಟ್ಟಡ ಮಾದರಿಯಾಗಿರಬೇಕು. ಮಕ್ಕಳ ಗ್ರಂಥಾಲಯ, ವಿಶಾಲವಾದ ಸಭಾಂಗಣ, ವಸತಿ ಗೃಹ ಗುಣಮಟ್ಟದಲ್ಲಿ ನಿರ್ಮಾಣವಾಗಲಿ.

    ನನ್ನ ಅನುದಾನದಲ್ಲಿಯೂ ಕಟ್ಟಡಕ್ಕೆ 25 ಲಕ್ಷ ರೂ.ಗಳನ್ನು ನೀಡುತ್ತೇನೆ. ಶಾಸಕರು, ಸಂಸದರಿಂದಲೂ ಅನುದಾನ ಸಿಗುತ್ತದೆ. ಎಲ್ಲವನ್ನು ಬಳಸಿಕೊಂಡು ಗಟ್ಟಿಮುಟ್ಟಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿ ಇನ್ನೊಂದು ವರ್ಷದಲ್ಲಿ ಉದ್ಘಾಟನೆ ಆಗಬೇಕು ಎಂದು ಹೇಳಿದರು.

    ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಟಿ.ಶಶಿಕಲಾ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

    ಕ್ಲಿಕ್ ಮಾಡಿ ಓದಿ: ನಾಕೀಕೆರೆ ಗ್ರಾಮದಲ್ಲಿ ವಿಜೃಂಭಣೆಯ ಕೆಂಚಾಂಬಿಕಾ ದೇವಿಯ ಕಾರ್ತಿಕ ಮಹೋತ್ಸವ | ಮೂರು ಕ್ವಿಂಟಾಲ್ ಬೇಳೆಯ ಹೋಳಿಗೆ ತಯಾರಿ

    ಉಪಾಧ್ಯಕ್ಷೆ ಎಂ.ಜಿ.ವನಿತಾ ಅನಿಲ್‌ಕುಮಾರ್, ಸದಸ್ಯರಾದ ಮಾರುತಿ ಎನ್.ಸಲುಫಯ್ಯ, ಕೆ.ಟಿ.ರುದ್ರೇಶ್, ಭಾಗ್ಯಮ್ಮ, ವಿದ್ಯಾವತಿ, ಗಂಗಮ್ಮ, ಕೆ.ಎಸ್.ಕಲ್ಲೇಶಪ್ಪ, ಸತ್ಯಮ್ಮ, ಟಿ.ಲಕ್ಷ್ಮಿದೇವಿ, ಕಲ್ಲಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸದಸ್ಯರು ಇದ್ದರು.

    ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಿಲ್ಪ ಎನ್. ಕಾರ್ಯದರ್ಶಿಗಳಾದ ಆಶಾ, ಅನುಸೂಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top