ಮುಖ್ಯ ಸುದ್ದಿ
ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿ.ಟಿ.ಜಗದೀಶ್ ಆಯ್ಕೆ
CHITRADURGA NEWS | 26 DECEMBER 2024
ಚಿತ್ರದುರ್ಗ: ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿ.ಟಿ.ಜಗದೀಶ್ ಆಯ್ಕೆಯಾಗಿದ್ದಾರೆ.
2025 ರಿಂದ 2030ರವರೆಗಿನ 5 ವರ್ಷಗಳ ಅವಧಿಗೆ ಬಿ.ಟಿ.ಜಗದೀಶ್ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿದ್ದಾರೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಕೆ.ರಾಮಕೃಷ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ಜನವರಿ ಮೊದಲ ವಾರದಲ್ಲಿ ವಿವಿ ಸಾಗರ ಕೋಡಿ
ತಾಲ್ಲೂಕು ಕೃಷಿಕ ಸಮಾಜದ ಚುನಾವಣೆ ಡಿ.15 ರಂದು ನೆಡೆಸಿದ್ದು, ಈ ಚುನಾವಣೆಯಲ್ಲಿ ಸತೀಶ್, ಪಾರ್ವತಮ್ಮ, ಬಿ.ಟಿ.ಜಗದೀಶ್, ಎಸ್.ಎಲ್.ನಾಗರಾಜು, ಸಿ.ಯೋಗರಾಜ, ಎಂ.ಮಹೇಶ್ವರಪ್ಪ, ಗಂಗಾಧರ, ಕೆ.ಪ್ರಾಣೇಶ್, ಆರ್.ಶಶಿಧರ್, ಮಂಜುಳಮ್ಮ, ಎಂ.ಪರಮೇಶ್, ಎನ್.ಪರಶುರಾಮ್, ಎನ್.ಹನುಮಂತರೆಡ್ಡಿ ಹಾಗೂ ಸಿ.ಶಂಭುಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಡಿ.26ರಂದು ನಡೆದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಬಿ.ಟಿ.ಜಗದೀಶ್ ಅಧ್ಯಕ್ಷರಾಗಿ, ಎಂ.ಸತೀಶ್ ಉಪಾಧ್ಯಕ್ಷರಾಗಿ, ಕೆ.ಪ್ರಾಣೇಶ್ ಪ್ರಧಾನ ಕಾರ್ಯದರ್ಶಿ, ಸಿ.ಶಂಭುಲಿಂಗಪ್ಪ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.