ಮುಖ್ಯ ಸುದ್ದಿ
ಭರಮಸಾಗರ ಕೆರೆಯಲ್ಲಿ ಇಂದಿನಿಂದ ಬೋಟಿಂಗ್ | ಮುರುಡೇಶ್ವರದಿಂದ ಬಂದಿವೆ ಬೋಟ್
CHITRADURGA NEWS | 4 FEBRUARY 2025
ಚಿತ್ರದುರ್ಗ: ತರಳಬಾಳು ಹುಣ್ಣಿಮೆ ಮಹೋತ್ಸವದ ಸಂಭ್ರಮಕ್ಕೆ ಭರಮಸಾಗರ ಕೆರೆಯೂ ಪ್ರಮುಖ ಕಾರಣವಾಗಿದೆ. ಕಾರಣ ಸಿರಿಗೆರೆ ಡಾ.ಶ್ರೀ.ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಮುತುವರ್ಜಿ ವಹಿಸಿ ಸರ್ಕಾರದ ಮೇಲೆ ಒತ್ತಡ ಹಾಕಿ ಭರಮಸಾಗರ ಕೆರೆಗೆ ನೀರು ಹರಿಸಿದ್ದಾರೆ.
ಅತ್ಯಂತ ದೊಡ್ಡದಾದ ಈ ಕೆರೆ ತುಂಬಿರುವುದು ಈ ಭಾಗದ ರೈತರಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈ ಕಾರಣಕ್ಕೆ ಉತ್ಸವವನ್ನು ಅದ್ದೂರಿಯಾಗಿ ಸಂಘಟಿಸುತ್ತಿದ್ದಾರೆ.
ಇದನ್ನೂ ಓದಿ: ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ | 9 ದಿನಗಳ ಕಾಲ ಭರಮಸಾಗರದಲ್ಲಿ ಹಬ್ಬದ ಸಂಭ್ರಮ
ಈಗ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯುವ 9 ದಿನಗಳ ಕಾಲ ಭರಮಸಾಗರದ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದ್ದು, ಉತ್ಸವಕ್ಕೆ ಬರುವವರಿಗೆ ಮಸ್ತ್ ಮಜಾ ಮಾಡಲು ಅನುಕೂಲವಾಗಿದೆ.
ಐತಿಹಾಸಿಕ ಭರಮಣ್ಣ ನಾಯಕನ ಕೆರೆಯಲ್ಲಿ ದೋಣಿ ವಿಹಾರ ಏರ್ಪಡಿಸಿದ್ದು, ಇದಕ್ಕಾಗಿ ಮುರುಡೇಶ್ವರದಿಂದ ಯಾಂತ್ರಿಕೃತ ದೋಣಿಗಳನ್ನು ತರಿಸಲಾಗುತ್ತಿದೆ. ಭಕ್ತಾಗಳು ವಿಶಾಲವಾದ ಕೆರೆಯಲ್ಲಿ ಬೋಟ್‍ನಲ್ಲಿ ಕುಳಿತು ಸಂಚರಿಸಬಹುದಾಗಿದೆ.
ಇದನ್ನೂ ಓದಿ: ತರಳಬಾಳು ಮಠ ಸರ್ವಜನಾಂಗದ ಶಾಂತಿಯ ತೋಟ | ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಹುಣ್ಣಿಮೆ ನಿಮಿತ್ತ ಮುರುಡೇಶ್ವರದಿಂದ 20 ಹಾಗೂ 10 ಜನರನ್ನು ಒಳಗೊಂಡ ಎರಡು ವಿಶೇಷ ಬೋಟ್‍ಗಳು ಬರಲಿದ್ದು, 9 ದಿನಗಳ ಕಾಲ ಭರಮಸಾಗರ ಕೆರೆಯಲ್ಲಿ ನೋಡುಗರ ಮನ ಸೆಳೆಯಲಿದೆ.
ಇದಕ್ಕಾಗಿ ಜಿಲ್ಲಾ ರಕ್ಷಣಾಕಾರಿಗಳಿಂದ ಇದಕ್ಕೆ ಅನುಮತಿ ಪಡೆದಿದ್ದು, ಬೋಟಿಂಗ್ ವಿಹಾರಕ್ಕೆ ವಯಸ್ಕರಿಗೆ ತಲಾ 100 ರೂ.ಗಳ ನಿಗಧಿ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಮಕ್ಕಳಿಗೆ ಪ್ರವೇಶವನ್ನು ನಿಷೇಸಲಾಗಿದೆ.
ಇಂದು ಸಂಜೆ ಸಿರಿಗೆರೆ ಗುರುಗಳ ತೆಪ್ಪೋತ್ಸವ
ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಫೆ.4ರ ಮಂಗಳವಾರ ಸಂಜೆ 4.30ಕ್ಕೆ ಭರಮಸಾಗರ ದೊಡ್ಡ ಕೆರೆಯಲ್ಲಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿ ದೋಣಿ ವಿಹಾರ ಮಾಡಲಿದ್ದಾರೆ.
ಇದನ್ನೂ ಓದಿ: ದಾಳಿಂಬೆ, ಮಾವು, ಬಾಳೆ ಸೂಕ್ಷ್ಮ ನೀರಾವರಿ ಅಳವಡಿಕೆ ತರಬೇತಿ
ಇದಕ್ಕಾಗಿ ಬೊಟ್‍ಗಳನ್ನು ಹೂವುಗಳಿಂದ ವಿಶೇಷವಾಗಿ ಸಿಂಗರಿಸಲಾಗುತ್ತಿದ್ದು, ಬಲೂನ್ ಡೆಕೋರೇಷನ್ ಸಹ ಇರಲಿದೆ. ತೆಪ್ಪೋತ್ಸವ ಉದ್ಘಾಟನೆಯಾದ ನಂತರ ಭಕ್ತಾದಿಗಳು 9 ದಿನಗಳ ಕಾಲ 1 ಸಾವಿರ ಎಕರೆ ವಿಸ್ತೀರ್ಣದ ವಿಶಾಲ ಕೆರೆಯಲ್ಲಿ ದೋಣಿ ಸಂಚಾರದ ಅನುಭವವನ್ನು ಪಡೆಯಬಹುದಾಗಿದೆ.