ಮುಖ್ಯ ಸುದ್ದಿ
Kannada Story: ಬಿ.ಎಲ್.ವೇಣು ರಚಿಸಿರುವ ‘ಸುಡುಗಾಡು ಸಿದ್ಧನ ಪ್ರಸಂಗ ‘| ದಾವಣಗೆರೆ ವಿವಿ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಠ್ಯ

CHITRADURGA NEWS | 31 AUGUST 2024
ಚಿತ್ರದುರ್ಗ: ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು ಅವರು ರಚಿಸಿರುವ ‘ಸುಡುಗಾಡು ಸಿದ್ಧನ ಪ್ರಸಂಗ’ ಕಥೆ (Kannada Story) ದಾವಣಗೆರೆ ವಿಶ್ವವಿದ್ಯಾನಿಲಯದ ಡಿಗ್ರಿ ವಿದ್ಯಾರ್ಥಿಗಳ ಪಠ್ಯಕ್ಕೆ ಸೇರ್ಪಡೆಯಾಗಿದೆ.
ಚಿತ್ರದುರ್ಗದಲ್ಲೇ ನೆಲೆನಿಂತು ಅತ್ಯುತ್ತಮ ಚಲನಚಿತ್ರ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ಬಿ.ಎಲ್.ವೇಣು ಅವರು ಕಾದಂಬರಿ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ನಿಮ್ಮ ಮುಂದೆ | ಹಬ್ಬಿದಾ ಮಲೆ ಮಧ್ಯದೊಳಗೆ | ಬಯಲು ಸೀಮೆಯ ಮಹಾ ಕಾದಂಬರಿ
ಈಗ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಥಮ ಬಿಎ ಪದವಿಯ ಎರಡನೇ ಸೆಮಿಸ್ಟರ್ ಪಠ್ಯಕ್ರಮಕ್ಕೆ ವೇಣು ಅವರ ಸುಡುಗಾಡು ಸಿದ್ಧನ ಪ್ರಸಂಗ ಸೇರಿರುವುದು ಅವರಿಗೆ ಸಂದ ಗೌರವವಾಗಿದೆ.
ಸುಡುಗಾಡು ಸಿದ್ಧನ ಪ್ರಸಂಗ 2001ರಲ್ಲಿ ಪ್ರಜಾವಾಣಿ ನಡೆಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ | ಸ್ನಾತಕ, ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅಜಿ ಆಹ್ವಾನ
ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕ ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಡಾ.ಜೋಗಿನಕಟ್ಟೆ ಮಂಜುನಾಥ್ ವೇಣು ಅವರಿಗೆ ಪತ್ರ ಬರೆದು ಅವರ ಕಥೆಯನ್ನು ಪಠ್ಯಕ್ಕೆ ತೆಗೆದುಕೊಳ್ಳಲು ಅನುಮತಿ ಕೋರಿದ್ದಾರೆ.
