Connect with us

    ನಿಮ್ಮ ಮನೆಗೆ ಕೊರಿಯರ್‌ ಬಂದರೆ ಎಚ್ಚರ | ಸ್ವೀಕರಿಸುವ ಮುನ್ನ ಯೋಚಿಸಿ

    ಮುಖ್ಯ ಸುದ್ದಿ

    ನಿಮ್ಮ ಮನೆಗೆ ಕೊರಿಯರ್‌ ಬಂದರೆ ಎಚ್ಚರ | ಸ್ವೀಕರಿಸುವ ಮುನ್ನ ಯೋಚಿಸಿ

    CHITRADURGA NEWS | 17 MAY 2024
    ಚಿತ್ರದುರ್ಗ: ಸುಶಿಕ್ಷಿತರ, ವಿದ್ಯಾವಂತರ ಚುನಾವಣೆ ಎಂದೇ ಬಿಂಬಿತವಾಗಿದ್ದ ವಿಧಾನ ಪರಿಷತ್‌ ಚುನಾವಣೆ ಇದೀಗ ಉಡುಗೊರೆ, ಔತಣಕೂಟ, ಪಾಕೆಟ್‌ಮನಿ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಕಾಂಚಾಣ ಸದ್ದು ರಾಜ್ಯದ ವಿವಿಧೆಡೆ ಜೋರಾಗಿದೆ. ಈ ಎಲ್ಲವನ್ನು ಗಮನಿಸಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

    ಕೊರಿಯರ್‌ ಮೂಲಕ ಮತದಾರರ ಮನೆಗೆ ಉಡುಗೊರೆ ತಲುಪುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಚುನಾವಣಾ ತಂಡ ಕೊರಿಯರ್‌ ಸರ್ವಿಸ್‍ನವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪಕ್ಷದವರು ಶಿಕ್ಷಕ ಮತದಾರರಿಗೆ ಉಚಿತ ಉಡುಗೊರೆಗಳನ್ನು ಕೋರಿಯರ್, ಪಾರ್ಸೆಲ್ ಕಳುಹಿಸುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಎಚ್ಚರಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: ಲಿಂಗೈಕ್ಯ ಜಗದ್ಗುರು ಶ್ರೀ ಜಯವಿಭವ ಮುರುಘರಾಜೇಂದ್ರ ಶ್ರೀಗಳ ಸ್ಮರಣೆ | ಗದ್ದುಗೆಗೆ ವಚನಾಭಿಷೇಕ

    ಉಚಿತ ಉಡುಗೊರೆಗಳನ್ನು ಸ್ವೀಕರಿಸುವುದು ಸಹ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ಉಡುಗೊರೆ ಸ್ವೀಕರಿಸಿದರೆ ಸಂಬಂಧಪಟ್ಟವರ ವಿರುದ್ಧ ಅಮಾನತಿಗೆ ಆದೇಶ ಮಾಡಲು ನಿರ್ಧರಿಸಿದೆ. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಕ ಮತದಾರರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದರೆ ನಿರ್ಧಾಕ್ಷಿಣ್ಯವಾಗಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: ಅಸ್ಥಿಪಂಜರ ಸಿಕ್ಕ ಮನೆಯಲ್ಲಿ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳೆಷ್ಟು ಗೊತ್ತಾ

    ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 4615 ಶಿಕ್ಷಕ ಮತದಾರರು ಇದ್ದು, ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸರಿಯಾದ ವಿಧಾನ ಹಾಗೂ ಸರಿಯಾದ ಕ್ರಮದಲ್ಲಿ ಮತದಾನ ಮಾಡಬೇಕು. ಶಿಕ್ಷಕ ಮತದಾರರು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ವರ್ತಿಸಬೇಕು ಎಂದು ಎಚ್ಚರಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top