ಹೊಸದುರ್ಗ
ಲೇಔಟ್‍ನಲ್ಲಿ ಬೆಳ್ಳಂ ಬೆಳಗ್ಗೆ ಕರಡಿಯ ವಾಕಿಂಗ್

Published on
CHITRADURGA NEWS | 05 MARCH 2025
ಹೊಸದುರ್ಗ: ಹೊಸದುರ್ಗ ತಾಲೂಕಿನ ಜನರಿಗೆ ಜಾಂಬವಂತನ ಕಾಟ ತಪ್ಪಿದಂತೆ ಕಾಣುತ್ತಿಲ್ಲ.
ಈವರೆಗೆ ಇಲ್ಲಿನ ಕುಂಚಿಟಿಗ ಮಹಾಸಂಸ್ಥಾನದ ಆವರಣದಲ್ಲಿ ಕಾಣಸಿಕೊಳ್ಳುತ್ತಿದ್ದ ಕರಡಿಗಳು, ಈಗ ಇನ್ನೂ ಸ್ವಲ್ಪ ಮುಂದೆ ಹೋಗಿ ಖಾಸಗಿ ಲೇಔಟ್‍ಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿವೆ.
ಇದನ್ನೂ ಓದಿ: ಅಕ್ಷರದಿಂದ ಸಾಕ್ಷರತೆ | ದೇವರ ಸಂಸ್ಕಾರದಿಂದ ಅಭಿವೃದ್ಧಿ | ಸದ್ಗುರು ಡಿ.ಎಸ್.ಪ್ರದೀಪ್
ಪಟ್ಟಣದ ಕಂಬದ ದೇವರ ಬಡಾವಣೆಯಲ್ಲಿ ಯಾವುದೋ ದನ ಅಥವಾ ಎಮ್ಮೆಯಂತೆಯೇ ಜೋಡಿ ಕರಡಿ ಸಹಜವಾಗಿ ಓಡಾಡುತ್ತಿರುವ ದೃಶ್ಯವನ್ನು ಪಕ್ಕದ ಮನೆಯವರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ಕರಡಿಯ ಹಿಂದೆ ಎರಡು ನಾಯಿಗಳು ಬೊಗಳಿಕೊಂಡು ಓಡಾಡುತ್ತಿದ್ದು, ಕರಡಿಯನ್ನ ಗುರುತಿಸಿದೆ ಯಾರಾದರೂ ಜನ ಬಂದಿದ್ದರೆ ಗತಿಯೇನು ಎಂಬ ಆತಂಕ ಕಾಡುತ್ತದೆ.
ಇದನ್ನೂ ಓದಿ: SJM ಡೆಂಟಲ್ ಕಾಲೇಜಿಗೆ 30 ರ್ಯಾಂಕ್
ಹಾಡು ಹಗಲೇ ನಗರದಲ್ಲಿ ಕರಡಿಗಳ ಓಡಾಟದಿಂದ ಆತಂಕಗೊಂಡಿರುವ ಪಟ್ಟಣದ ಜನತೆ ಕರಡಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹ ಮಾಡಿದ್ದಾರೆ.
Continue Reading
Related Topics:bear, Chitradurga Latest, Chitradurga news, featured, forest department, Hosadurga, Walking, ಅರಣ್ಯ ಇಲಾಖೆ, ಕರಡಿ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ವಾಕಿಂಗ್, ಹೊಸದುರ್ಗ

Click to comment