Connect with us

    ಸೈಬರ್ ವಂಚನೆಗೆ ದೇಶದ ಜನ ಕಳೆದುಕೊಂಡ ಹಣ ಕೇಳಿದ್ರೆ ಶಾಕ್ ಆಗ್ತಿರಿ !

    cyber money fraud

    ಮುಖ್ಯ ಸುದ್ದಿ

    ಸೈಬರ್ ವಂಚನೆಗೆ ದೇಶದ ಜನ ಕಳೆದುಕೊಂಡ ಹಣ ಕೇಳಿದ್ರೆ ಶಾಕ್ ಆಗ್ತಿರಿ !

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 FEBRUARY 2025

    ಚಿತ್ರದುರ್ಗ: ಜಗತ್ತಿನಾದ್ಯಂತ ಈಗ ಸೈಬರ್ ವಂಚನೆ ದೊಡ್ಡ ಸವಾಲಾಗಿದೆ. ಕಳೆದ ವರ್ಷ ದೇಶದ ಜನರು ಸೈಬರ್ ವಂಚನೆಯಿಂದ ಕಳೆದುಕೊಂಡಿರುವ ಹಣದ ಪ್ರಮಾಣ ಕೇಳಿದ್ರೆ ಬೆಚ್ಚಿ ಬೀಳುವಂತಿದೆ.

    ಹೌದು, ಚಿತ್ರದುರ್ಗದ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎನ್. ವೆಂಕಟೇಶ್ ನೀಡಿರುವ ಮಾಹಿತಿಯಂತೆ ದೇಶದಲ್ಲಿ ಕಳೆದ ವರ್ಷ ಸೈಬರ್ ಕ್ರೈಂ ಮೋಸಕ್ಕೆ ಬಲಿಯಾಗಿ ಜನ ಹಣ ಕಳೆದುಕೊಂಡ ಮೊತ್ತ ಸುಮಾರು 24 ಸಾವಿರ ಕೋಟಿ ರೂ.ಗಳಾಗಿದೆ.

    ಇದನ್ನೂ ಓದಿ: ನಿಧಿ ಆಸೆಗೆ ನರಬಲಿ | ಜಿಲ್ಲೆಯಲ್ಲಿ ನಡೆಯಿತು ಘೋರ ಕೃತ್ಯ

    ಇನ್ನೂ ಚಿತ್ರದುರ್ಗ ಜಿಲ್ಲೆಯ ವಿಚಾರಕ್ಕೆ ಬಂದರೆ, ಜಿಲ್ಲೆಯಲ್ಲಿ ಕಳೆದ ವರ್ಷ ಮನೆ ಕಳ್ಳತನ, ದರೋಡೆ, ಸುಲಿಗೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಂಚನೆಯಾಗಿರುವ ಮೊತ್ತದ ಪ್ರಮಾಣ 4 ಕೋಟಿ ರೂ.

    ಆದರೆ, ಸೈಬರ್ ವಂಚನೆಯಿಂದಲೇ ಜನ ಕಳೆದುಕೊಂಡಿರುವ ಹಣದ ಪ್ರಮಾಣ 15.10 ಕೋಟಿ ರೂ. ಇದರಲ್ಲಿ ಬಹುತೇಕ ಹಣ ದ್ವಿಗುಣದ ಆಸೆಗೆ ಒಳಗಾಗಿ, ಅಧಿಕ ಬಡ್ಡಿದರದ ಆಸೆಗೆ ಒಳಗಾಗಿ ಟ್ರೇಡ್ ಇನ್‍ವೆಸ್ಟ್‍ಮೆಂಟ್ ನಲ್ಲಿ ಹೆಚ್ಚಿನ ಹಣ ಕಳೆದುಕೊಂಡಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಗೆ 4.18 ಕೋಟಿ ಅನುದಾನ | ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ

    ಹೀಗಾಗಿ ಟ್ರೇಡ್ ಇನ್‍ವೆಸ್ಟ್‍ಮೆಂಟ್ ಮಾಡುವಾಗ ಆದಷ್ಟು ಎಚ್ಚರ ವಹಿಸಬೇಕು, ಸೆಬಿ ಹಾಗೂ ಆರ್‍ಬಿಐ ನಲ್ಲಿ ನೋಂದಣಿ ಆದವರಲ್ಲಿ ಮಾತ್ರ ಟ್ರೇಡ್ ವಹಿವಾಟು ಮಾಡಬೇಕು.

    INternet Day in zp

    ಸುರಕ್ಷಿತ ಅಂತರ್ಜಾಲ ದಿನಾಚರಣೆ

    ದೇಶದಲ್ಲಿ ತಂತ್ರಜ್ಞಾನದಲ್ಲಿ ಕ್ರಾಂತಿಯಾಗುತ್ತಿದ್ದು, ಅಂತರ್ಜಾಲದಲ್ಲಿ ಬೆರಳಿನ ತುದಿಯಲ್ಲಿ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ. ಅದೇ ರೀತಿ ಸೈಬರ್ ವಂಚನೆ ಮಾಡುವವರು ಕೂಡ ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ಮೋಸ ಮಾಡುತ್ತಾರೆ. ಸುಶಿಕ್ಷಿತರೇ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ.

    | ಎಸ್.ಜೆ.ಸೋಮಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

    ಡಿಜಿಟಲ್ ಪೇಮೆಂಟ್ ಮಾಡುವಾಗ ಸುರಕ್ಷಿತ ವಿಧಾನ ಬಳಸಬೇಕು. ನಕಲಿ ಸಾಲದ ಆ್ಯಪ್‍ಗಳ ಮೂಲಕ ಸಾಲ ಪಡೆಯುವುದು, ವರ್ಕ್ ಫ್ರಂ ಹೋಂ ನಲ್ಲಿ ಮನೆಯಲ್ಲಿದ್ದುಕೊಂಡು ಹಣ ಗಳಿಸಿ ಎಂಬ ಆಮಿಷಗಳಿಗೆ ಒಳಗಾಗಬಾರದು ಎಂದು ಹೇಳಿದರು.

    ಇದನ್ನೂ ಓದಿ: Arecanut Rate | ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್

    ಹದಿಹರೆಯದ ಯುವಕರು, ಯುವತಿಯರು, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು. ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೋಸಕ್ಕೆ ಒಳಗಾಗಿ, ವಿಡಿಯೋ, ಫೋಟೋಗಳನ್ನು ದ್ವೇಷಕ್ಕೆ ಅಥವಾ ಬ್ಲಾಕ್‍ಮೇಲ್ ಮೂಲಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಅತ್ಯಂತ ಎಚ್ಚರ ವಹಿಸಬೇಕು.

    ಬ್ಯಾಂಕ್ ಖಾತೆಗಳನ್ನು ಮಾಡಿಸಿ, ಅದರ ನಿರ್ವಹಣೆಯನ್ನು ಬೇರೆಯವರಿಗೆ ವಹಿಸಿಕೊಡುವ ಜಾಲ ಜಿಲ್ಲೆಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ವಿಶೇಷವಾಗಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

    ಇದನ್ನೂ ಓದಿ: JDS ಸದಸ್ಯತ್ವ ನೋಂದಣಿಗೆ ತುರುವೇಕೆರೆ ಶಾಸಕ ಕೃಷ್ಣಪ್ಪ ಚಾಲನೆ

    ಯಾವುದೇ ಸೈಬರ್ ಕ್ರೈಂ ನಲ್ಲಿ, ಬ್ಯಾಂಕ್ ಮೂಲಕ ಹಣ ಕಳೆದುಕೊಂಡಲ್ಲಿ ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿದರೆ, ದೇಶದ ಯಾವುದೇ ಬ್ಯಾಂಕ್‍ನ ಖಾತೆಯನ್ನು ಫ್ರೀಜ್ ಮಾಡಿಸಲು ಅವಕಾಶವಿದೆ. ಹೀಗಾಗಿ ವಂಚನೆಗೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದರು.

    ಜಿಲ್ಲಾ ಎನ್‍ಐಸಿ ಅಧಿಕಾರಿ ಶಾಸ್ತ್ರಿ ಮಾತನಾಡಿ, ಡಿಜಿಟಲ್ ಅರೆಸ್ಟ್, ವಂಚನೆ ಕರೆಗಳು, ಬ್ಯಾಂಕ್ ಖಾತೆ, ಎಟಿಎಂ ಬ್ಲಾಕ್ ಮಾಡಲಾಗಿದೆ ಎನ್ನುವುದೆಲ್ಲಾ ಸುಳ್ಳು. ಡಿಜಿಟಲ್ ಅರೆಸ್ಟ್ ಇಲ್ಲವೇ ಇಲ್ಲ. ಬ್ಯಾಂಕ್‍ಗಳಿಂದ ಖಾತೆದಾರರಿಗೆ ಖಾತೆ ಬ್ಲಾಕ್ ಮಾಡಿದ್ದೇವೆ ಎಂದು ಫೋನ್ ಕರೆ ಮಾಡುವುದಿಲ್ಲ.

    ಇದನ್ನೂ ಓದಿ: ಸೇವಂತಿಗೆ, ತೆಂಗು, ಅಡಿಕೆ ಬೆಳೆ | 3 ದಿನ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ

    ನಕಲೆ ವೆಬ್‍ಸೈಟ್‍ಗಳು, ವಾಟ್ಸಪ್‍ನಲ್ಲಿ ಬರುವಂತಹ ವಂಚನೆಯ ಲಿಂಕ್‍ಗಳು, ವೆಬ್‍ಸೈಟ್‍ನಲ್ಲಿ ಲಭ್ಯವಿರುವ ನಕಲಿ ಕಸ್ಟಮರ್ ಕೇರ್ ನಂಬರ್‍ಗಳು, ಅಪರಿಚಿತ ಮೂಲಗಳಿಂದ ಬರುವ ಇಮೇಲ್ ಅಥವಾ ವೆಬ್‍ಲಿಂಕ್‍ಗಳನ್ನು ಯಾವುದೇ ಕಾರಣಕ್ಕೂ ತೆರೆಯುವ ಪ್ರಯತ್ನ ಮಾಡಬಾರದು.

    ಯಾವುದೇ ಕಾರಣಕ್ಕೂ ಪಾಸ್‍ವರ್ಡ್ ಅಥವಾ ಓಟಿಪಿ ಇತರರೊಂದಿಗೆ ಹಂಚಿಕೊಳ್ಳಬಾರದು, ಇದರ ಜೊತೆಗೆ ವಿಶ್ವಾಸಾರ್ಹವಲ್ಲದ ಯಾವುದೇ ಆ್ಯಪ್‍ಗಳನ್ನು ಕಂಪ್ಯೂಟರ್‍ಗೆ ಅಥವಾ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಾರದು.

    ಅನಧಿಕೃತ ವೆಬ್‍ಸೈಟ್‍ಗಳನ್ನು ನಂಬಿ, ಮೋಸ ಹೋಗಬಾರದು, ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ವಿವಿಧ ಬಗೆಯ ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸಾರ್ವಜನಿಕರು ಜಾಗೃತರಾಗಬೇಕು.

    | ಬಿ.ಟಿ.ಕುಮಾರಸ್ವಾಮಿ, ಅಪರ ಜಿಲ್ಲಾಧಿಕಾರಿ

    ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಕಾರಣಕ್ಕೂ ದ್ವೇಷದ, ಸತ್ಯಾಸತ್ಯತೆ ಪರಿಶೀಲಿಸದ ಸಂದೇಶಗಳನ್ನು ನಂಬಬಾರದು ಮತ್ತು ಶೇರ್ ಮಾಡಬಾರದು. ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು, ತುರ್ತು ಕಾರಣಗಳನ್ನು ಹೇಳಿ ಹಣಕ್ಕೆ ಬೇಡಿಕೆ ಮಾಡುವಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಖಾತೆಗಳ ಬಗ್ಗೆ ರಿಪೋರ್ಟ್ ಮಾಡಬೇಕು. ಡಿಜಿಟಲ್‍ನಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

    ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ಗೋವಿಂದ ಕಾರಜೋಳ | ಭದ್ರಾ ಮೇಲ್ದಂಡೆ ಯೋಜನೆ ಕುರಿತು ಚರ್ಚೆ

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಎನ್‍ಐಸಿ, ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುರಕ್ಷಿತ ಅಂತರ್ಜಾಲ ದಿನಾಚರಣೆಯಲ್ಲಿ ಮಾತನಾಡಿದರು.

    ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‍ಪಿ ಉಮೇಶ್ ಈಶ್ವರ್ ನಾಯ್ಕ್ ಪಾಲ್ಗೊಂಡಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top