Connect with us

    ಡೆಂಗ್ಯೂ ತಡೆಗೆ ಆಯುರ್ವೇದದಲ್ಲಿದೆ ಉತ್ತಮ ಪರಿಹಾರ

    ಡಾ.ಚಂದ್ರಕಾಂತ್ ನಾಗಸಮುದ್ರ

    ಮುಖ್ಯ ಸುದ್ದಿ

    ಡೆಂಗ್ಯೂ ತಡೆಗೆ ಆಯುರ್ವೇದದಲ್ಲಿದೆ ಉತ್ತಮ ಪರಿಹಾರ

    CHITRADURGA NEWS | 27 MAY 2024

    ಚಿತ್ರದುರ್ಗ: ಸುರಕ್ಷಿತ ನಾಳೆಗಳಿಗಾಗಿ ಡೆಂಗ್ಯೂವನ್ನು ತಡೆಗಟ್ಟಲು ಆಯುರ್ವೇದವನ್ನು ಬಳಸಿ ಉತ್ತಮ ಪರಿಹಾರ ಕಂದುಕೊಳ್ಳಬಹುದು ಎಂದು ಡಾ.ಚಂದ್ರಕಾಂತ್ ನಾಗಸಮುದ್ರ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ಮಹಿಳೆಯರಿಗೆ ಐಟಿಐ ಸೀಟುಗಳು ಲಭ್ಯ | ONLINE ಮೂಲಕ ಅರ್ಜಿ ಹಾಕಿ

    ಮಳೆಗಾಲದ ದಿನಗಳಲ್ಲಿ ಡೆಂಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮಳೆ ಬಂದು ಮನೆ ಸುತ್ತಮುತ್ತ ನೀರು ಶೇಖರಣೆಯಾದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗಿ ಡೆಂಗಿ ಹರಡಲು ಸಹಾಯಕವಾಗುತ್ತದೆ ಹಾಗೂ ವಾತಾವರಣದ ಉಷ್ಣಾಂಶವು ಕೂಡ ವೈರಾಣುಗಳ ಬೆಳವಣಿಗೆಗೆ ಹಾಗೂ ಡೆಂಗ್ಯೂ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿರುವುದರಿಂದ ಮಳೆಗಾಲದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ.

    ಆದ ಕಾರಣ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಒಳಗಡೆಯೂ ನೀರನ್ನು ಸಂಗ್ರಹಿಸುವುದಾದರೆ ಅದರ ಮುಚ್ಚಳವನ್ನು ಮುಚ್ಚಿಟ್ಟಿರಬೇಕು. ಸೊಳ್ಳೆಗಳು ಕಚ್ಚದಂತೆ ಸಂಪೂರ್ಣವಾಗಿ ಮೈಮುಚ್ಚುವಂತಹ ಬಟ್ಟೆಯನ್ನು ಧರಿಸಬೇಕು ಇದರಿಂದ ಡೆಂಗಿ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ.

    ಇದನ್ನೂ ಓದಿ: ಕಾಂಗ್ರೆಸ್ OPS ಪರವಾಗಿದೆ | MLC ಪುಟ್ಟಣ್ಣ

    ಸೊಳ್ಳೆಗಳು ಮನೆ ಒಳಗೆ ಬರದಂತೆ ಚಂಡು ಹೂವು, ಬೇವಿನ ಎಲೆ ಹಾಗೂ ಬೆಳ್ಳುಳ್ಳಿ ಸಿಪ್ಪೆಯ ಹೊಗೆಯನ್ನು ಹಾಕುವುದರಿಂದ ಸೊಳ್ಳೆಗಳು ಮನೆ ಒಳಗೆ ಬರುವುದನ್ನು ತಪ್ಪಿಸಬಹುದು. ಈ ಸರಳ ಕ್ರಮಗಳಿಂದ ನಾವು ಡೆಂಗಿ ಬರದಂತೆ ತಡೆಯಬಹುದು.

    ತೀವ್ರ ಜ್ವರ ತಲೆನೋವು ಕೈಕಾಲು ನೋವು ಲಕ್ಷಣಗಳು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಡೆಂಗಿ ಲಕ್ಷಣಗಳು ಆಯುರ್ವೇದದಲ್ಲಿ ಹೇಳಿರುವ ರಕ್ತ ದೋಷದಿಂದ ಆಗುವಂತಹ ರಕ್ತ ಪಿತ್ತ ಎಂಬ ಖಾಯಿಲೆಯ ಲಕ್ಷಣಗಳನ್ನು ಹೋಲುತ್ತವೆ. ವೈದ್ಯರು ನೀಡುವ ಚಿಕಿತ್ಸೆಯೊಂದಿಗೆ ಪಪ್ಪಾಯಿ ಎಲೆಯ ರಸ, ಈರುಳ್ಳಿರಸವನ್ನು ಮನೆಮದ್ದಾಗಿ ಬಳಸಿ.

    ಇದನ್ನೂ ಓದಿ: ಸನಾತನ ಧರ್ಮಕ್ಕೆ ಪುನಶ್ಚೇತನ ನೀಡಿದವರು ಶಂಕರಾಚಾರ್ಯರು | ಉಪವಿಭಾಗಾಧಿಕಾರಿ ಕಾರ್ತಿಕ್

    ಡೆಂಗಿ ಕಾಯಿಲೆಯು ವೈರಾಣುನಿಂದ ಬರುವ ಕಾರಣ ಅಮೃತಬಳ್ಳಿ ತುಳಸಿ ಇವುಗಳ ಎಲೆಯನ್ನು ಸೇವಿಸುವುದು, ಜ್ವರ, ಮೈ-ಕೈ ನೋವು ನಿಯಂತ್ರಿಸಲು ಸಹಾಯಕ. ಸತ್ವಯುತವಾದ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ, ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ ಇಟ್ಟುಕೊಂಡಲ್ಲಿ ಯಾವುದೇ ಕಾಯಿಲೆ ಬರುವ ಸಾಧ್ಯತೆಗಳು ಕಡಿಮೆ, ಆದಕಾರಣ ಉತ್ತಮವಾದ ಆಹಾರ, ಜೀವನ ಶೈಲಿಯನ್ನು ಪಾಲಿಸಿ ಆರೋಗ್ಯ ಕಾಪಾಡಿ ಕೊಳ್ಳಿ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top