ಮುಖ್ಯ ಸುದ್ದಿ
ವಿದ್ಯಾನಗರದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ
CHITRADURGA NEWS | 28 MAY 2024
ಚಿತ್ರದುರ್ಗ: ಚಿತ್ರದುರ್ಗದ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಭಾನುವಾರ ಸಂಜೆ ಜರುಗಿತು.
ಈ ಸಭೆಯಲ್ಲಿ ವಿದ್ಯಾನಗರ ಬಡಾವಣೆ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಒಟ್ಟು 16 ವಿದ್ಯಾರ್ಥಿಗಳನ್ನು ಬೆಳ್ಳಿಯ ಪದಕ, ಶಾಲು, ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿ, ಪುರಸ್ಕರಿಸಲಾಯಿತು.
ಇದನ್ನೂ ಓದಿ: ಮೇ.30 ರಂದು ವಿದ್ಯುತ್ ವ್ಯತ್ಯಯ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.99 ರಷ್ಟು ಅಂಕ ಗಳಿಸಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವ ಕೆ.ಆರ್.ಅಭಿನವ್, ದ್ವಿತೀಯ ಪಿಯುಸಿಯಲ್ಲಿ ಶೇ.98ರಷ್ಟು ಅಂಕ ಗಳಿಸಿರುವ ಎಂ.ಮಹಿತಾ ವಿದ್ಯಾ ನಗರದ ನಿವಾಸಿಗಳಾಗಿದ್ದು, ಅಭಿಮಾನದಿಂದ ಸನ್ಮಾನಿಸಲಾಯಿರು ಎಂದು ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಾಯತ್ರಿ ಶಿವರಾಂ ತಿಳಿಸಿದ್ದಾರೆ.
ಇದನ್ನೂ ಓದಿ: ಡಿವೈಡರ್‍ಗೆ ಅಪ್ಪಳಿಸಿ ಕಾರು ಪಲ್ಟಿ | ಸ್ಥಳದಲ್ಲೇ ಇಬ್ಬರ ದುರ್ಮರಣ
ಸಂಘದ ಗೌರವಾಧ್ಯಕ್ಷ ಜೆ ಪರಶುರಾಮ್, ಅಧ್ಯಕ್ಷ ಪ್ರತಾಪ್ ರೆಡ್ದಿ, ಸಹ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ಶಂಕರ್, ಖಜಾಂಚಿ ಮುಕುಂದ್ ರೆಡ್ಡಿ, ನಿರ್ದೇಶಕರಾದ ಡಾ.ಗೌರಮ್ಮ, ಡಾ.ಹರಿಣಿ, ವೀಣಾ ಜಯರಾಮ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಮಂಜುನಾಥ್, ಗ್ರಾಪಂ ಸದಸ್ಯರಾದ ರಮೇಶ್ ಮೋತ್ಕೂರ್, ನಿರಂಜನ್‍ಮೂರ್ತಿ ಹಾಗೂ ಸಂಘದ ಸದಸ್ಯರು, ಪೋಷಕರು ಹಾಜರಿದ್ದರು.