ಮುಖ್ಯ ಸುದ್ದಿ
ಎಮ್ಮೆ ಕಟ್ಟಿಹಾಕಿದ್ದಕ್ಕೆ ಮಚ್ಚಿನಿಂದ ಹಲ್ಲೆ | 10 ವರ್ಷ ಜೈಲು ಶಿಕ್ಷೆ
CHITRADURGA NEWS | 13 FEBRUARY 2025
ಚಿತ್ರದುರ್ಗ: ಪದೇ ಪದೇ ಜಮೀನಿಗೆ ಬರುತ್ತಿದೆ ಎಂದು ಪಕ್ಕದ ಜಮೀನಿನವರ ಎಮ್ಮೆ ಕಟ್ಟಿ ಹಾಕಿದ್ದ ವಿಚಾರಕ್ಕೆ ಶುರುವಾದ ಗಲಾಟೆ ಮಚ್ಚಿನಿಂದ ಹಲ್ಲೆ ನಡೆಸುವ ವಿಪರೀತಕ್ಕೆ ಹೋಗಿದೆ.
ಪರಿಣಾಮ ದೂರು ದಾಖಲಾಗಿ, ನ್ಯಾಯಾಲಯದ ಮೆಟ್ಟಿಲೇರಿ ಜೈಲು ಶಿಕ್ಷೆ ಅನುಭವಿಸುವಂತಾಗಿರುವ ಪ್ರಕರಣ ಕುರಿತ ವರದಿ ಇದಾಗಿದೆ.
ಇದನ್ನೂ ಓದಿ: PDO ಸೇವೆಯಿಂದ ಅಮಾನತು
2017 ಅಕ್ಟೋಬರ್ 29 ರಂದು ಹಿರಿಯೂರು ತಾಲೂಕು ಶಿವನಗರ ಗ್ರಾಮದ ಭಾಗ್ಯಮ್ಮ ಪತಿ ಬಸವರಾಜಪ್ಪ ಜಮೀನಿನ ಕಡೆಗೆ ಹೋಗುತ್ತಿದ್ದಾಗ ಅದೇ ಮಾರ್ಗದಲ್ಲಿ ಬಂದ ಯರಗುಂಟಸ್ವಾಮಿ ನಮ್ಮ ಎಮ್ಮೆಯನ್ನು ಯಾಕೆ ಕಟ್ಟಿ ಹಾಕಿದ್ದು ಎಂದು ದಂಪತಿಯನ್ನು ಪ್ರಶ್ನಿಸಿದ್ದಾನೆ.
ಈ ವೇಳೆ ಪದೇ ಪದೇ ಎಮ್ಮೆ ನಮ್ಮ ಜಮೀನಿಗೆ ಬರುತ್ತಿದೆ. ಈ ಬಗ್ಗೆ 2-3 ಸಲ ಹೇಳಿದರೂ ಕೇಳದ ಕಾರಣಕ್ಕೆ ಕಟ್ಟಿ ಹಾಕಿದ್ದೇವೆ ಎಂದು ಹೇಳಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಯರಗುಂಟಸ್ವಾಮಿ ತನ್ನ ಬಳಿಯಿದ್ದ ಮಚ್ಚಿನಿಂದ ಭಾಗ್ಯಮ್ಮನ ಮೇಲೆ ಹಲ್ಲೆ ನಡೆಸಿದ್ದಾನೆ. ಬಿಡಿಸಲು ಹೋದ ಆಕೆಯ ಪತಿ ಬಸವರಾಜಪ್ಪನ ಮೇಲೆಯೂ ಹಲ್ಲೆ ನಡೆದಿದೆ.
ಇದನ್ನೂ ಓದಿ: ಮಾರ್ಚ್ ನಲ್ಲಿ ಚಿತ್ರದುರ್ಗದಲ್ಲಿ ಉದ್ಯೋಗ ಮೇಳ | ಯುವ ಜನತೆಗೆ ಉದ್ಯೋಗಾವಕಾಶ | ಡಿಸಿ ಟಿ.ವೆಂಕಟೇಶ್
ಈ ವೇಳೆ ಅದೇ ಗ್ರಾಮದ ಸಾರಾವಾಟಯ್ಯ ಹಾಗೂ ಬಸವರಾಜಪ್ಪ ಎಂಬ ಇಬ್ಬರು ವ್ಯಕ್ತಿಗಳು ಯರಗುಂಟಸ್ವಾಮಿಗೆ ಕುಮ್ಮಕ್ಕು ನೀಡಿದ್ದರು ಎಂದು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರು ಫೆಬ್ರವರಿ 12 ರಂದು ಪ್ರಕರಣದ 1ನೇ ಆರೋಪಿ ಯರಗುಂಟಸ್ವಾಮಿಗೆ ಬೇರೆ ಬೇರೆ ಸೆಕ್ಷನ್‍ಗಳ ಅಡಿಯಲ್ಲಿ ಒಟ್ಟು 10 ವರ್ಷ ಜೈಲು ಶಿಕ್ಷೆ ಹಾಗೂ 1.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ಎರಡು ದಿನ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?
ಆರೋಪಿ ಈಗಾಗಲೇ ನ್ಯಾಯಾಂಗ ಬಂಧನದ ಅವಧಿಯನ್ನು ಕಡಿತಗೊಳಿಸಿ ಶಿಕ್ಷೆ ವಿಧಿಸಿದ್ದಾರೆ. ಇನ್ನೂ ಈ ಪ್ರಕರಣದ ವಿಚಾರಣೆ ಹಂತದಲ್ಲಿದ್ದಾಗಲೇ ಎರಡನೇ ಆರೋಪಿ ಸಾರಾವಾಟಯ್ಯ ಮೃತಪಟ್ಟಿದ್ದಾರೆ.
ಮೂರನೇ ಆರೋಪಿ ಬಸವರಾಜಪ್ಪನ ವಿರುದ್ಧ ಕುಮ್ಮಕ್ಕು ನೀಡಿದ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣದಿಂದ ಕೈ ಬಿಟ್ಟಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎನ್.ಎಸ್.ಮಲ್ಲಯ್ಯ ವಾದ ಮಂಡಿಸಿದ್ದರು.