ಮುಖ್ಯ ಸುದ್ದಿ
ಎರಡು ದಿನ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?
CHITRADURGA NEWS | 12 FEBRUARY 2025
ಚಿತ್ರದುರ್ಗ: ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಪಂಡರಹಳ್ಳಿ ಶಾಖೆಯ ಪಂಡರಹಳ್ಳಿ ವಿ.ವಿ.ಕೇಂದ್ರದಿಂದ ಹೊರಡುವ ಐ.ಪಿ.ಮಾರ್ಗದಲ್ಲಿ ಲೋಡ್ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇದೇ ಫೆ.13 ಮತ್ತು 14ರಂದು ಬೆಳಿಗ್ಗೆ 10 ರಿಂದ 5 ರವರೆಗೆ ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎನ್.ಜೆ.ವೈ ಹಾಗೂ ಐ.ಪಿ.ಮಾರ್ಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
Also Read: ಚಿತ್ರದುರ್ಗದಲ್ಲಿ SBI ಪ್ರಾದೇಶಿಕ ಕಚೇರಿ | ಸಂಸದ ಗೋವಿಂದ ಕಾರಜೋಳ ಪತ್ರ
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
66/11 ಕೆವಿ ಪಂಡರಹಳ್ಳಿ ವಿವಿ ಕೇಂದ್ರದಿಂದ ಸರಬರಾಜಾಗುವ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ. ಅನ್ನೆಹಾಳ್, ಹುಲ್ಲೂರು, ಪಂಡರಹಳ್ಳಿ ಕಾವಲಹಟಟಿ, ಮಹದೇವನಕಟ್ಟೆ, ಗೊಡಬನಹಾಳ್, ಸೊಂಡೆಕೊಳ, ಕುರುಬರಹಳ್ಳಿ, ಬೆಟ್ಟದನಾಗೇನಹಳ್ಳಿ, ಸಿಂಗಾಪುರ ಹಾಗೂ ಕಕ್ಕೇರು ಗ್ರಾಮಗಳು ಮತ್ತು ಐ.ಪಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಯಣ್ಣ ತಿಳಿಸಿದ್ದಾರೆ.