ಮುಖ್ಯ ಸುದ್ದಿ
ನೋಟಾಗೆ ಬಿದ್ದ ಮತಗಳೆಷ್ಟು | ಪಕ್ಷೇತರರು ಎಷ್ಟು ಮತ ಪಡೆದಿದ್ದಾರೆ ಗೊತ್ತಾ

CHITRADURGA NEWS | 04 JUNE 2024
ಚಿತ್ರದುರ್ಗ: ಚಿತ್ರದುರ್ಗ (ಪರಿಶಿಷ್ಟ ಜಾತಿ) ಲೋಕಸಭಾ ಕ್ಷೇತ್ರ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಭಾರತೀಯ ಜನತಾ ಪಾರ್ಟಿಯ ಗೋವಿಂದ ಮಕ್ತಪ್ಪ ಕಾರಜೋಳ ಅವರು 6,84,890 ಮತಗಳನ್ನು ಪಡೆಯುವುದರೊಂದಿಗೆ ಜಯಭೇರಿ ಬಾರಿಸಿದ್ದಾರೆ.
ಇದನ್ನೂ ಓದಿ: ಯಾವ ತಾಲೂಕಿನಲ್ಲಿ ಎಷ್ಟು ಮತ ಸಿಕ್ಕಿವೆ | ಬಿಜೆಪಿ ಕೈ ಹಿಡಿದ ವಿಧಾನಸಭಾ ಕ್ಷೇತ್ರಗಳೆಷ್ಟು..?
ಬಿಜೆಪಿಯ ಗೋವಿಂದ ಮಕ್ತಪ್ಪ ಕಾರಜೋಳ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್. ಚಂದ್ರಪ್ಪ ಎದುರು 48,121 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಇದನ್ನೂ ಓದಿ: ಜಿಲ್ಲೆ ಅಭಿವೃದ್ಧಿಗೆ ಶ್ರಮಿಸುತ್ತೇನೆ | ಗೋವಿಂದ ಕಾರಜೋಳ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್. ಚಂದ್ರಪ್ಪ 6,36,769 ಮತಗಳನ್ನು ಗಳಿಸಿದ್ದಾರೆ. ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ 7705, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ನರಸಿಂಹರಾಜು 4950, ಉತ್ತಮ ಪ್ರಜಾಕೀಯ ಪಾರ್ಟಿಯ ರಮೇಶ್ ನಾಯ್ಕ್ ಟಿ 2206, ಇಂಡಿಯನ್ ಮೂವ್‍ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ 720, ಕರುನಾಡ ಸೇವಕರ ಪಾರ್ಟಿಯ ಶಬರೀಶ್ 1018, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸುಜಾತ ಡಿ 1014, ಪಕ್ಷೇತರ ಅಭ್ಯರ್ಥಿಗಳಾದ ಅಮೃತ್ ರಾಜ 834, ಗಣೇಶ 1093, ತುಳಸಿ ಹೆಚ್ 1082, ಡಾ.ಎಂ.ಪಿ.ದಾರಕೇಶ್ವರಯ್ಯ 1397, ನಾಗರಾಜಪ್ಪ 1679, ಭೂತರಾಜ್ ವಿ.ಎಸ್ 2397, ಮಂಜುನಾಥ ಸ್ವಾಮಿ ಟಿ 2676, ರಘುಕುಮಾರ್ ಎಸ್ 2337, ಬಿ.ವೆಂಕಟೇಶ ಶಿಲ್ಪಿ 4201, ಶ್ರೀನಿವಾಸಪುರದ ಶ್ರೀನಿವಾಸಬಾಬು ಪಾವಗಡ 4548, ಸುಧಾಕರ್ ಆರ್ 1211 ಮತ ಗಳಿಸಿದ್ದಾರೆ. ನೋಟಾಗೆ 3190 ಮತಗಳು ದಾಖಲಾಗಿವೆ. ಅಂಚೆ ಮತಗಳ ಪೈಕಿ 132 ತಿರಸ್ಕøತಗೊಂಡಿದ್ದು, 204 ಮತಗಳು ಅಮಾನ್ಯಗೊಂಡಿವೆ.
