Connect with us

    Arrest: ಒಂಟಿ ಮನೆಗಳೇ ಟಾರ್ಗೆಟ್‌ | ಪೊಲೀಸ್‌ ಬಲೆಗೆ ಬಿದ್ದ ಬಳ್ಳಾರಿ ಹನುಮಂತ

    crime

    ಮುಖ್ಯ ಸುದ್ದಿ

    Arrest: ಒಂಟಿ ಮನೆಗಳೇ ಟಾರ್ಗೆಟ್‌ | ಪೊಲೀಸ್‌ ಬಲೆಗೆ ಬಿದ್ದ ಬಳ್ಳಾರಿ ಹನುಮಂತ

    CHITRADURGA NEWS | 24 JULY 2024
    ಚಿತ್ರದುರ್ಗ: ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಹಿರಿಯೂರು ಪೊಲೀಸರು ಎಡೆಮುರಿ ಕಟ್ಟಿದ್ದಾರೆ. ಬಳ್ಳಾರಿ ಹನುಮಂತ(26) ಬಂಧಿತ ಆರೋಪಿ.

    ಇತನ ಬಳಿಯಿದ್ದ ಬರೋಬ್ಬರಿ 69 ಲಕ್ಷ ರೂ. ಮೌಲ್ಯದ 1 ಕೆಜಿ 3 ಗ್ರಾಂ ಚಿನ್ನ, 68 ಸಾವಿರ ನಗದು ಹಾಗೂ 2 ಬೈಕ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ 15 ಮನೆಗಳ್ಳತನ ಹಾಗೂ 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

    ಹಿರಿಯೂರು ನಗರದ ಚಳ್ಳಕೆರೆ ರಸ್ತೆಯ ನಿವಾಸಿ ಸುಜಾತ ಅವರ ಮನೆ ಕಳವು ಪ್ರಕರಣದ ಬೆನ್ನತ್ತಿದ್ದ ಪೊಲೀಸರ ಬಲೆಗೆ ಅಂತರ ರಾಜ್ಯ ಕಳ್ಳ ಬಿದ್ದಿದ್ದಾನೆ. ಬಳ್ಳಾರಿ ಹನುಮಂತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಿರಿಯೂರು ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿರುವುದು ತಿಳಿದು ಬಂದಿದೆ.

    ಇದನ್ನೂ ಓದಿ:ಎಸ್‌ಆರ್‌ಎಸ್‌ ಹೆರಿಟೇಜ್ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಠಾಣೆಯಲ್ಲಿಯೇ 8 ಪ್ರಕರಣ, ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ 5, ಹೊಸದುರ್ಗ ಠಾಣೆಯಲ್ಲಿ 2, ಅಬ್ಬಿನಹೊಳೆಯಲ್ಲಿ 1, ಚಿತ್ರದುರ್ಗದ ಬಡಾವಣೆ ಠಾಣೆಯಲ್ಲಿ 1, ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ 1 ಸೇರಿ ಒಟ್ಟು 15 ಮನೆಗಳ್ಳತನ ಮತ್ತು 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅಷ್ಟೇ ಅಲ್ಲದೆ ದಾವಣಗೆರೆ, ಬಳ್ಳಾರಿ, ಕೊಪ್ಪಳ, ಆಂಧ್ರ ಸೇರಿ ವಿವಿಧ ಕಡೆಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿದ್ದು,12 ಪ್ರಕರಣಗಳಲ್ಲಿ ವಾರೆಂಟ್‌ಗಳಿವೆ. ನಾಪತ್ತೆಯಾಗಿದ್ದ ಆರೋಪಿ ಹನುಮಂತನನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

    ಆರೋಪಿಯು ಕಳ್ಳತನ ಮಾಡುವ ಉದ್ದೇಶದಿಂದ ಏಕಾಂಕಿಯಾಗಿ ಬಸ್‌ಗಳಲ್ಲಿ ಸಂಚರಿಸುತ್ತಾ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಯಾವುದಾದರೂ ಮೋಟಾರ್‌ ಸೈಕಲ್‌ ಕಳ್ಳತನ ಮಾಡಿ ಅದರಲ್ಲಿ ಒಂಟಿ ಮನೆಗಳು. ಬೀಗ ಹಾಕಿದ ಮನೆಗಳು ಮತ್ತು ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪವಿಲ್ಲದ ಮನೆಯ ಮುಂಭಾಗದಲ್ಲಿ ದಿನ ಪತ್ರಿಕೆಗಳು ಹಾಗೆ ಬಿದ್ದಿರುವ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆಯಲ್ಲಿ ಕಬ್ಬಿಣದ ಸಲಕರಣೆಯ ಸಹಾಯದಿಂದ ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ. ಬಳಿಕ ಅದೇ ಬೈಕ್‌ನಲ್ಲಿ ಬೇರೆ ನಗರಕ್ಕೆ ಹೋಗಿ ಬೈಕ್‌ ಅನ್ನು ಯಾವುದಾದರೂ ಸ್ಥಳದಲ್ಲಿ ಬಿಟ್ಟು ಕಳ್ಳತನ ಮಾಡಿದ ಒಡವೆ ಮತ್ತು ಹಣವನ್ನು ತನ್ನ ಶೋಕಿ ಮತ್ತು ಮನರಂಜನೆಗಾಗಿ ಬಳಸುತ್ತಿದ್ದ ಎಂಬುದು ತಿಳಿದು ಬಂದಿದೆ.

    ಹಿರಿಯೂರು ಉಪವಿಭಾಗದ ಪೊಲೀಸ್‌ ಉಪಧೀಕ್ಷಕಿ ಎಸ್‌.ಚೈತ್ರ, ಹಿರಿಯೂರು ನಗರ ಪೊಲೀಸ್‌ ಠಾಣೆಯ ಪಿಐ ರಾಘವೇಂದ್ರ ಕಾಂಡಿಕೆ. ಹೊಸದುರ್ಗ ಪೊಲೀಸ್‌ ಠಾಣೆ ಪಿಎಸ್‌ಐ ಭೀಮನಗೌಡ ಪಾಟೀಲ, ಸಿಬ್ಬಂದಿ ದೇವೇಂದ್ರಪ್ಪ, ರುದ್ರಮುನಿಸ್ವಾಮಿ, ಸಿದ್ದಲಿಂಗೇಶ್ವರ, ತಿಪ್ಪೇಸ್ವಾಮಿ, ರಾಜಣ್ಣ. ಸುರೇಶನಾಯ್ಕ್‌, ಜಾಫರ್‌ ಸಾಧಿಕ್, ನಾಗಣ್ಣ, ಸುದರ್ಶನ್ ಗೌಡ ಹಾಗೂ ಬೆರಳಚ್ಚು ಘಟಕದ ವಿಶ್ವನಾಥ, ತಾಂತ್ರಿಕ ವಿಭಾಗದ ರಾಘವೇಂದ್ರ ತಂಡದ ಕಾರ್ಯವನ್ನು ಶ್ಲಾಘಿಸಿದ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top