ಕ್ರೈಂ ಸುದ್ದಿ
ಕಣ್ಣಿಗೆ ಖಾರದಪುಡಿ ಹಾಕಿ ಕಳ್ಳತನ ಮಾಡಿದ್ದ ಪ್ರಕರಣ | ನಾಲ್ಕೇ ದಿನಗಳಲ್ಲಿ ಆರೋಪಿಗಳ ಬಂಧನ
ಚಿತ್ರದುರ್ಗ ನ್ಯೂಸ್: ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ಬಟ್ಟೆ ಅಂಗಡಿಗೆ ನುಗ್ಗಿ ಕಣ್ಣಿಗೆ ಖಾರದಪುಡಿ ಹಾಕಿ ಬಂಗಾರದ ಸರ ಕಳ್ಳತನ ಮಾಡಿದ್ದ ಮೂರು ಜನ ಆರೋಪಿಗಳನ್ನು ಪೊಲೀಸರು ನಾಲ್ಕೇ ದಿನದಲ್ಲಿ ಬಂದಿಸಿದ್ದಾರೆ.
ಆಗಸ್ಟ್ 27 ಭಾನುವಾರ ಬೆಳಗ್ಗೆ ಬೈಕಿನಲ್ಲಿ ಬಂದ ಮೂರು ಜನ ಪಾವಗಡ ರಸ್ತೆಯಲ್ಲಿರುವ ದವನಂ ಟೆಕ್ಸ್‍ಟೈಕ್ಸ್ ಅಂಗಡಿಗೆ ಬಂದಿದ್ದ ಮೂರು ಜನ ಅಪರಿಚಿತರು ಅಂಗಡಿ ಮಾಲಿಕ ಡಿ.ಸಿ.ಗೋವಿಂದರಾಜು ಅವರಿಗೆ ಟಿ ಶರ್ಟ್ ತೋರಿಸುವಂತೆ ಹೇಳಿದ್ದರು. ಟಿ-ಶರ್ಟ್ ತೋರಿಸುತ್ತಿರುವಾಗಲೇ ಒಬ್ಬ ಕಣ್ಣಿಗೆ ಖಾರದ ಪುಡಿ ಎರಚಿ ಗೋವಿಂದರಾಜ್ ಕೊರಳಿನಲ್ಲಿದ್ದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ: ಕಣ್ಣಿಗೆ ಖಾರದಪುಡಿ ಎರಚಿ ಬಂಗಾರದ ಸರ ಕಳ್ಳತನ | ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿ ಘಟನೆ
ಕಳ್ಳತನ ಮಾಡಿದ್ದ ಬಂಗಾರದ 45 ಗ್ರಾಂ ತೂಕವಿದ್ದು, 2 ಲಕ್ಷ ರೂ. ಬೆಲೆ ಬಾಳುತ್ತಿತ್ತು. ಕಳುವು ನಡೆದ ದೃಶ್ಯ ಸಿ.ಸಿ.ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಳ್ಳರ ಪತ್ತೆಗೆ ಚಿತ್ರದುರ್ಗ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಜೆ.ಕುಮಾರಸ್ವಾಮಿ ಹಾಗೂ ಚಳ್ಳಕೆರೆ ಡಿವೈಎಸ್ಪಿ ಟಿ.ರಾಜಣ್ಣ, ಸಿಪಿಐ ಆರ್.ಎಫ್‍ದೇಸಾಯಿ ನೇತೃತ್ವದಲ್ಲಿ ಪಿ.ಎಸ್.ಐ ಶಿವರಾಜ್ ಸಿಬ್ಬಂದಿಗಳಾದ ಹಾಲೇಶ, ಸತೀಶ್, ಶ್ರೀಧರ ವಸಂತ ಧರಣ್ಣವರ್, ಶಿವರಾಜ್, ರಮೇಶ್ ಬಾರ್ಕಿ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಸೇರಿದಂತೆ ಐವರನ್ನು ಪತ್ತೆ ಮಾಡಿದೆ.
ಸದರಿಯವರಿಂದ ಕೊರಳು ಚೈನ್ ಮತ್ತು ಒಂದು ರಾಯಲ್ ಎನ್‍ಫೀಲ್ಡ್ ಹಾಗೂ ಒಂದು ಯೂನಿಕಾರ್ನ್ ಬೈಕ್ ಒಟ್ಟು 7 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ತ್ವರಿತ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆ ಮಾಡಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗದು ಬಹುಮಾನ ಘೋಷಿಸಿದ್ದಾರೆ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)