Dina Bhavishya
ವರ್ಷದ ಭವಿಷ್ಯ | ಮೇಷ ರಾಶಿ – 2025
CHITRADURGA NEWS | 01 JANUARY 2025
ಮೇಷ ರಾಶಿ : ಆರ್ಥಿಕ ಸಮಸ್ಯೆಗಳು, ಕುಟುಂಬ ಸಮಸ್ಯೆಗಳು ಉಂಟಾಗುತ್ತವೆ. ಶನೀಶ್ವರ ದೋಷ ಪ್ರಭಾವ ತೃತೀಯ ಸ್ಥಾನದಲ್ಲಿ ಗುರು ಪ್ರಭಾವದಿಂದಾಗಿ ಸಹೋದರರು, ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು . ಕಷ್ಟದಿಂದ ವಿವಾಹ ಪ್ರಯತ್ನಗಳು ಫಲಿಸುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡದಿಂದಾಗಿ ಕಿರಿಕಿರಿ ಹೆಚ್ಚಾಗುತ್ತದೆ. ವ್ಯಾಪಾರಸ್ಥರಿಗೆ ಧನಹಾನಿ ಉಂಟಾಗುತ್ತದೆ. ಸಾಲದ ಬಾಧೆಗಳಿರುತ್ತವೆ. ವಿದ್ಯಾರ್ಥಿಗಳು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಸ್ತ್ರೀಯರಿಗೆ ಸಾಮಾನ್ಯ ಫಲಿತಾಂಶಗಳಿರುತ್ತವೆ. ಆದಾಯಕ್ಕಿಂತ ಖರ್ಚುಗಳು ಮತ್ತು ಸಾಲಗಳು ಹೆಚ್ಚಾಗುತ್ತವೆ. ಟೀಕೆಗಳು ಮತ್ತು ಅವಮಾನಗಳು ಹೆಚ್ಚಾಗುತ್ತವೆ. ಜಗಳಗಳಿಂದ ದೂರವಿರುವುದು ಉತ್ತಮ. ನ್ಯಾಯಾಲಯದ ವ್ಯವಹಾರಗಳು ಮತ್ತು ಸಮಸ್ಯೆಗಳು ಕಿರಿಕಿರಿಯನ್ನು ಉಂಟುಮಾಡುತ್ತವೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆಗತ್ಯದ ಸಮಯದಲ್ಲಿ ಹಣದ ವಿಳಂಬವಾಗುತ್ತದೆ, ವರ್ಷದ ದ್ವಿತೀಯಾರ್ಧದಲ್ಲಿ ಶುಭ ಫಲಿತಾಂಶ ಉಂಟಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಕಠಿಣ ಸಮಯ. ಚಲನಚಿತ್ರ ಮತ್ತು ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ಆತುರದ ನಿರ್ಧಾರಗಳಿಂದ ಸಮಸ್ಯೆಗಳು ಉಂಟಾಗುತ್ತವೆ. ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆ ಇರುತ್ತದೆ. ಉದ್ಯಮಿಗಳಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಈ ವರ್ಷ ಅನುಕೂಲಕರವಾಗಿದೆ. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ವಹಿಸುವುದು ಮುಖ್ಯ. ಕುಟುಂಬ ಸಂಬಂಧಗಳಲ್ಲಿ ಕೆಲವು ಕಲಹಗಳು ಮತ್ತು ಮಾನಸಿಕ ಚಿಂತೆಗಳಿರುತ್ತವೆ.
ಜನವರಿ
ಈ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಕುಟುಂಬದಲ್ಲಿ ವಿವಾದಗಳು. ಮಕ್ಕಳ ವಿಷಯದಲ್ಲಿ ಸಮಸ್ಯೆಗಳು. ಲಾಭದಕ್ಕಿಂತ, ವೆಚ್ಚಗಳು ಹೆಚ್ಚಾಗಿರುತ್ತವೆ. ಉದ್ಯೋಗಿಗಳಿಗೆ ಅನಿರೀಕ್ಷಿತ ಸ್ಥಾನ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಸಲಹೆ ಇತರರಿಗೆ ಉಪಯೋಗ್ಯವಾಗುತ್ತದೆ. ಶತ್ರುಗಳ ಭಯ ಇರುತ್ತದೆ.
ಫೆಬ್ರವರಿ
ಈ ತಿಂಗಳು ನಿಮಗೆ ಅನುಕೂಲಕರವಾಗಿರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಆಪ್ತ ಮಿತ್ರರಿಂದ ಸಹಾಯ ಸಿಗುತ್ತದೆ. ಸ್ವಲ್ಪ ಅನಾರೋಗ್ಯದ ಸೂಚನೆಗಳಿವೆ. ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುತ್ತದೆ. ದೇವಾಲಯ ಭೇಟಿ ನೀಡುತ್ತೀರಿ. ವ್ಯಾಪಾರ ವ್ಯವಹಾರಗಳು ಸೀಮಿತವಾಗಿರುತ್ತವೆ.
ಮಾರ್ಚ್
ಈ ತಿಂಗಳು ಕೆಲವು ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತದೆ. ಅಧಿಕ ಪ್ರಯಾಣದ ಸೂಚನೆಗಳಿವೆ. ವೃತ್ತಿಪರ ವ್ಯವಹಾರಗಳಲ್ಲಿ ಕೆಲವು ಸಕಾರಾತ್ಮಕ ಫಲಿತಾಂಶಗಳಿರುತ್ತವೆ. ಶತ್ರುಗಳಿಂದ ಸ್ವಲ್ಪ ಒತ್ತಡ ಇದ್ದರೂ ಹೊರಬರಲು ಸಾಧ್ಯವಾಗುತ್ತದೆ. ವೆಚ್ಚವನ್ನು ಕಡಿತಗೊಳಿಸುವುದು ಉತ್ತಮ. ಶುಭ ಕಾರ್ಯಗಳಿಗೆ ಅಡೆತಡೆಗಳು ಸ್ವಲ್ಪಮಟ್ಟಿಗೆ ಕಿರಿಕಿರಿಯನ್ನುಂಟುಮಾಡುತ್ತವೆ. ಕುಟುಂಬ ಸದಸ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಏಪ್ರಿಲ್
ಈ ತಿಂಗಳು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಕುಟುಂಬದ ಹಿರಿಯರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಹೊಸ ಹೂಡಿಕೆಗಳ ವಿಷಯದಲ್ಲಿ ಮರುಪರಿಶೀಲಿಸಬೇಕು. ಪ್ರತಿಯೊಂದು ವಿಷಯದಲ್ಲೂ ಜಾಗರೂಕರಾಗಿರಿ. ವೃತ್ತಿಪರ ವ್ಯಾಪಾರದಲ್ಲಿ ಗಮನ ಹರಿಸಬೇಕು.
ಮೇ
ಈ ತಿಂಗಳು ಮಿಶ್ರ ಫಲಿತಾಂಶಗಳಿರುತ್ತವೆ. ವೃತ್ತಿಪರ ವ್ಯವಹಾರಗಳು ಕೂಡಿ ಬರುತ್ತವೆ. ಹಣಕಾಸಿನ ವ್ಯವಹಾರಗಳಲ್ಲಿ ಕೆಲವು ಉತ್ತಮ ಫಲಿತಾಂಶಗಳಿರುತ್ತವೆ. ಹೊಸ ಹೂಡಿಕೆಗೆ ಸಂಬಂಧಿಸಿದಂತೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಆರೋಗ್ಯದ ವಿಷಯದಲ್ಲಿ ಶ್ರದ್ಧೆ ವಹಿಸಬೇಕು.
ಜೂನ್
ಈ ತಿಂಗಳು ಮಿಶ್ರ ಮಿಶ್ರ ಫಲಿತಾಂಶಗಳಿರುತ್ತವೆ. ಹೊಸ ವ್ಯಕ್ತಿಗಳ ಪರಿಚಯ ಸ್ವಲ್ಪಮಟ್ಟಿಗೆ ಕೂಡಿಬರುತ್ತದೆ. ಕೆಲವು ಕೆಲಸಗಳು ಅತ್ಯಂತ ಶ್ರಮದಿಂದಲೂ ಪೂರ್ಣಗೊಳ್ಳುವುದಿಲ್ಲ. ವೃತ್ತಿಪರ ವ್ಯವಹಾರಗಳು ಸಮಾನ್ಯವಾಗಿರುತ್ತವೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ. ಹೊಸ ಉದ್ಯೋಗ ಪ್ರಯತ್ನಗಳು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ.
ಜುಲೈ
ಈ ತಿಂಗಳು ಅನುಕೂಲಕರ ಫಲಿತಾಂಶಗಳಿರುತ್ತವೆ. ಉದ್ಯೋಗಿಗಳು ಅನಿರೀಕ್ಷಿತ ಬಡ್ತಿ ಮತ್ತು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಹೊಸ ವ್ಯಾಪಾರದ ವಿಷಯದಲ್ಲಿ ಜಾಗರೂಕರಾಗಿರಬೇಕು. ಬಂಧು ಮಿತ್ರರೊಂದಿಗೆ ವಿವಾದಗಳು ನಡೆಯುತ್ತವೆ. ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಬೇಕು.
ಆಗಸ್ಟ್
ಈ ತಿಂಗಳು ಕೆಲವು ಮಿಶ್ರ ಫಲಿತಾಂಶಗಳಿರುತ್ತವೆ. ಹಳೆ ಸಾಲಗಳನ್ನು ತೀರಿಸುತ್ತೀರಿ. ಪ್ರಮುಖ ವಿಷಯಗಳಲ್ಲಿ ಅಡೆತಡೆಗಳು ಬಂದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಆರ್ಥಿಕವಾಗಿ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.
ಸೆಪ್ಟೆಂಬರ್
ಈ ತಿಂಗಳಲ್ಲಿ ಮಿಶ್ರ ಫಲಿತಾಂಶಗಳಿರುತ್ತವೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಉಂಟಾಗುತ್ತವೆ. ಹಠಾತ್ ಧನಯೋಗವಿದೆ. ಕೆಲವು ವಿಷಯಗಳಲ್ಲಿ ಮಾನಸಿಕ ಚಿಂತನೆ ಹೆಚ್ಚಾಗುತ್ತದೆ. ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ನಿರುದ್ಯೋಗಿಗಳ ಪ್ರಯತ್ನಗಳು ನಿರಾಶೆಗೊಳಿಸುತ್ತವೆ.
ಅಕ್ಟೋಬರ್
ಈ ತಿಂಗಳು ಅನುಕೂಲಕರವಾಗಿರುತ್ತದೆ. ಮನೆಯ ಹೊರಗೆ ಗೌರವ ಪ್ರತಿಷ್ಟೆ ಹೆಚ್ಚಾಗುತ್ತದೆ. ಕೆಲವು ಕೈಗಾರಿಕೆಗಳಿಗೆ ಸೂಕ್ತ ಸಮಯ. ಉದ್ಯೋಗಿಗಳು ಸಂಬಳದ ಬಗ್ಗೆ ಶುಭ ಸುದ್ದಿ ಕೇಳುತ್ತಾರೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಭಾವನಾತ್ಮಕವಾಗಿ ಉತ್ಸುಕರಾಗಿರುತ್ತೀರಿ.
ನವೆಂಬರ್
ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ಖರ್ಚು ಹೆಚ್ಚಾಗುತ್ತವೆ. ಶತ್ರು ಸಮಸ್ಯೆಗಳಿರುತ್ತವೆ. ಜ್ವರದಂತಹ ಅನಾರೋಗ್ಯ ಸಮಸ್ಯೆಗಳಿರುತ್ತವೆ. ವ್ಯಾಪಾರದ ವಿಷಯದಲ್ಲಿ ಗೊಂದಲಮಯ ಪರಿಸ್ಥಿತಿಗಳಿರುತ್ತವೆ. ಪಾಲುದಾರಿಕೆ ವ್ಯವಹಾರಗಳಲ್ಲಿ ವಿವಾದದದ ಸೂಚನೆಗಳಿವೆ.
ಡಿಸೆಂಬರ್
ಈ ತಿಂಗಳು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಸ್ತ್ರೀಯರಿಂದ ವ ವಿವಾದಗಳಿರುತ್ತವೆ . ವ್ಯವಹಾರದಲ್ಲಿ ಆರ್ಥಿಕ ನಷ್ಟಗಳಾಗುತ್ತವೆ. ಕೆಲವು ವ್ಯವಹಾರಗಳಲ್ಲಿ ಸಹೋದರರ ಸಹಾಯ ,ಸಹಕಾರ ದೊರೆಯುತ್ತದೆ. ಶತ್ರು ಸಮಸ್ಯೆಗಳಿರುತ್ತವೆ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು.
ಶನೀಶ್ವರನಿಗೆ ತೈಲಾಭಿಷೇಕ ,1 ¼ ಕೆಜಿ ಕಪ್ಪು ಎಳ್ಳನ್ನು ದಾನ ಮಾಡಿ. ಗುರುವಾರ 1 ¼ ಕೆಜಿ ಕಡಲೆ ಕಾಳು ದಾನ ಮಾಡಿ. ಗುರುವಾರ ಶಿವನ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಬೇಕು.