ಹೊಳಲ್ಕೆರೆ
ಭದ್ರೆಗಾಗಿ ಅರೆಮಲೆನಾಡು ಹೊಳಲ್ಕೆರೆ ಪೂರ್ಣ ಬಂದ್

CHITRADURGA NEWS | 04 MARCH 2024
ಹೊಳಲ್ಕೆರೆ: ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರೂಗಳನ್ನು ಘೋಷಿಸಿ ಇದುವರೆಗೂ ಹಣ ಬಿಡುಗಡೆಗೊಳಿಸದೆ ರೈತರನ್ನು ನಿರ್ಲಕ್ಷೆಯಿಂದ ಕಾಣುತ್ತಿರುವುದನ್ನು ವಿರೋಧಿಸಿ ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕು ರೈತರಿಂದ ಹೊಳಲ್ಕೆರೆಯಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಇದನ್ನೂ ಓದಿ: ಶಿವರಾತ್ರಿ ಅಬ್ಬರಿಸಲಿದ್ದಾನೆ ವರುಣ ದೇವ | ಭರ್ಜರಿ ಮಳೆಯ ಮುನ್ಸೂಚನೆ
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಎಲ್ಲಾ ಜನಪರ, ಕನ್ನಡ ಪರ, ದಲಿತ ಪರ ಸಂಘಟನೆಗಳಿಂದ ಸೋಮವಾರ ಹೊಳಲ್ಕೆರೆ ಪಟ್ಟಣವನ್ನು ಸ್ವಯಂ ಪೇರಿತ ಬಂದ್ ಮಾಡಲಾಯಿತು.
ಬೆಳ್ಳೆಗೆ 9 ಗಂಟೆ ಯಿಂದ ಪ್ರಾರಂಭವಾದ ಸ್ವಯಂ ಪ್ರೇರಿತ ಬಂದ್ ಸಂಜೆ 6 ಗಂಟೆವರಿಗೆ ನೆಡೆಯಿತು. ಬೆಳಿಗ್ಗೆಯಿಂದ ವ್ಯಾಪಾರ ಮಾಡಲು ಅಂಗಡಿ ಮಾಲೀಕರು ಅಂಗಡಿಗಳನ್ನು ತೆಗೆದಿದ್ದರೂ, ತೆಗೆದಂತಹ ಅಂಗಡಿ ಬಳಿ ರೈತರು ತೆರಳಿ ಅಂಗಡಿಗಳನ್ನು ಮುಚ್ಚಿಸಿದರು.
ಮುಖ್ಯ ವೃತ್ತದಲ್ಲಿ ರೈತರು ತಮ್ಮ ಎತ್ತಿನ ಗಾಡಿ ಹಾಗೂ ಟ್ಯಾಕ್ಟರ್ ನಿಲ್ಲಿಸಿ ಪ್ರತಿಭಟನೆ ನೆಡೆಸಿದರು.
ಇದನ್ನೂ ಓದಿ: ಕರ್ತವ್ಯ ಲೋಪ | ನಾಲ್ವರು ಪಿಡಿಓಗಳು ಅಮಾನತು
ಕೇಂದ್ರ ಸರ್ಕಾರ ಭದ್ರಾ ಮೇಲ್ದಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಶೀಘ್ರದಲ್ಲಿ ರೂ.5300 ಕೋಟಿ ಹಣ ಬಿಡುಗಡೆ ಗೊಳಿಸಬೇಕು, ರಾಜ್ಯ ಸರ್ಕಾರ ಶೀಘ್ರಗತಿಯಲ್ಲಿ ಭದ್ರಾ ಮೇಲ್ದದೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
29 ದಿನ ಕಾಲ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ, ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಯಂ ಪ್ರೇರಿತ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಸಂಘ, ಚಿತ್ರದುರ್ಗ ಕರುನಾಡ ವಿಜಯ ಸೇನೆ ವತಿಯಿಂದ ರೈತರಿಗೆ ಬೆಂಬಲ ಸೂಚಿಸಿದರು.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟ | ಡಿವೈಡರ್ಗೆ ಡಿಕ್ಕಿ | ಐವರು ಪ್ರಾಣಾಪಾಯದಿಂದ ಪಾರು
ಸ್ವಯಂ ಪ್ರೇರಿತಾ ಬಂದ್ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಈಚ್ಗಟ್ಟದ ಸಿದ್ಧವೀರಪ್ಪ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಲಿಂಗಾರೆಡ್ಡಿ, ಚಿತ್ರದುರ್ಗ ಮಲ್ಲಿಕಾರ್ಜುನ, ಸತೀಶ್, ಬಿ.ಎಸ್.ರಂಗಸ್ವಾಮಿ, ಹೊಸದುರ್ಗ ಬೋರೇಶ್, ಹಿರಿಯೂರು ತಿಪ್ಪೇಸ್ವಾಮಿ, ಮೊಳಕಾಲ್ಮೂರು ರವಿ ಕುಮಾರ್, ಅಜಯ್, ಲೋಕೇಶ್, ಸಿದ್ರಾಮಪ್ಪ ಸೇರಿದಂತೆ ರೈತ ಮುಖಂಡರುಗಳು ಇದ್ದರು.
