ಮುಖ್ಯ ಸುದ್ದಿ
ಅಪ್ಪು 11 ಕ್ರಿಕೆಟ್ ಕಪ್ | ವಿಜೇತ ತಂಡಕ್ಕೆ ರೂ.50 ಸಾವಿರ ಬಹುಮಾನ ವಿತರಿಸಿದ ಇಮ್ಮಡಿ ಶ್ರೀ
CHITRADURGA NEWS | 23 FEBRUARY 2025
ಚಿತ್ರದುರ್ಗ: ಅಪ್ಪು ಗೆಳೆಯರ ಬಳಗ ವತಿಯಿಂದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಪ್ಪು 11 ಕ್ರಿಕೆಟ್ ಕಪ್ ಕ್ರಿಕೆಟ್ ಪದ್ಯಾವಳಿಯನ್ನು ಆಯೋಜಿಸಲಾಗಿತ್ತು.
Also Read: Kannada Novel: 21. ದುಷ್ಟನಿಂದ ದೂರ ಹೋದವರು
ಅಪ್ಪು 11 ಕ್ರಿಕೇಟ್ ಕಪ್ ಕ್ರಿಕೆಟ್ ಪದ್ಯಾವಳಿಯಲ್ಲಿ ರಾಹುಲ್ ತಂಡ ವಿಜೇತ ತಂಡವಾಗಿ ಹೊರಹೊಮ್ಮಿದೆ. 3ನೇ ರನ್ನರ್ ಅಪ್ ಆಗಿ ಸುವರ್ಣ ತಂಡ, 2ನೇ ರನ್ನರ್ ಅಪ್ ಆಗಿ ಎವರಿಗ್ರಿನ್ ತಂಡ ಹೊರಹೊಮ್ಮಿದೆ.
ಕಳೆದ ಮೂರುದಿನಗಳಿಂದ ಚಿತ್ರದುರ್ಗ ನಗರದಲ್ಲಿ ಕ್ರಿಕೇಟ್ ಜಾತ್ರೆ ನಡೆಯುತ್ತಿದ್ದು, ನಗರವಾಸಿಗಳು ಸುಮಾರು 24 ತಂಡಗಳಾಗಿ ಭಾಗವಹಿಸಿದ್ದವು.
ವಿಜೇತ ತಂಡಕ್ಕೆ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದ ಕ್ರೀಡಾಪ್ರೋತ್ಸಾಹ ನಿಧಿಯಿಂದ ರೂ.50 ಸಾವಿರ ನಗದು ಬಹುಮಾನ ಪಡೆದಿದೆ.
Also Read: ಮೊಮ್ಮಗನ ನಾಮಕರಣದಲ್ಲಿ ಬಿಕ್ಕಿ ಬಿಕ್ಕಿ ಅತ್ತ ರೇಣುಕಸ್ವಾಮಿ ತಾಯಿ | ಮತ್ತೆ ಮಗ ಮನೆಗೆ ಬಂದಿದ್ದಾನೆ ಎಂದ ರತ್ನಪ್ರಭ
ಮೊದಲನೇ ರನ್ನರ್ ಅಪ್ ಆಗಿ ಚಾಣಕ್ಯ ತಂಡಕ್ಕೆ ರೂ. 25 ಸಾವಿರ ಬಹುಮಾನ ಪಡೆದಿದೆ.
ಮ್ಯಾನ್ ಆಫ್ ದಿ ಮ್ಯಾಚ್ ಮಂಜುನಾಥ್ ಚಾರಿ, ಮ್ಯಾನ್ ಆಫ್ ದಿ ಸಿರಿಸ್ ಚಾಣಕ್ಯ ತಂಡದ ಶಿವುಕುಮಾರ ಪಡೆದರು.
ರಾಹುಲ್ ತಂಡದ ಲಿಂಗರಾಜು ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ ಸ್ವೀಕರಿಸಿದರು. ರಾಹುಲ್ ತಂಡ ರಂಗಸ್ವಾಮಿ ಬೆಸ್ಟ್ ಭೋಲರ್ ಪ್ರಶಸ್ತಿ ಸ್ವೀಕರಿಸಿದರು.
Also Read: ರೇಣುಕಸ್ವಾಮಿ ಪುತ್ರನಿಗೆ ನಾಮಕರಣ | ಹೆಸರೇನು ಗೊತ್ತಾ ?
ಸಮಾರಂಭವನ್ನು ಕೆ.ಎನ್.ರಾಜಣ್ಣ ಉದ್ಘಾಟಿಸಿದರು, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.