Connect with us

ರೇಣುಕಸ್ವಾಮಿ ಪುತ್ರನಿಗೆ ನಾಮಕರಣ | ಹೆಸರೇನು ಗೊತ್ತಾ ?

ಮುಖ್ಯ ಸುದ್ದಿ

ರೇಣುಕಸ್ವಾಮಿ ಪುತ್ರನಿಗೆ ನಾಮಕರಣ | ಹೆಸರೇನು ಗೊತ್ತಾ ?

CHITRADURGA NEWS | 23 FEBRUARY 2025

ಚಿತ್ರದುರ್ಗ: ಕಳೆದ ವರ್ಷ ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆಯಾಗಿ ದೇಶಾದ್ಯಂತ ಸುದ್ದಿಯಾಗಿದ್ದ ಚಿತ್ರದುರ್ಗದ ರೇಣುಕಸ್ವಾಮಿ ಪುತ್ರನಿಗೆ ಇಂದು ನಾಮಕರಣ ಶಾಸ್ತ್ರ ಮಾಡಲಾಯಿತು.

ಕನ್ನಡ ಚಿತ್ರನಟ ದರ್ಶನ್ ಮತ್ತು ಗ್ಯಾಂಗಿನಿಂದ ರೇಣುಕಸ್ವಾಮಿ ಕೊಲೆಯಾಗಿದ್ದಾನೆ ಎಂದು ದೊಡ್ಡ ಸುದ್ದಿಯಾಗಿದ್ದು, ಈ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದು, ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಇದನ್ನೂ ಓದಿ: ಅಭಾಸಪ ಉದ್ಘಾಟನೆ | ಓದುಗರ ಮನಸ್ಸು ಅರಳಿಸದ ಸಾಹಿತ್ಯದ ಪ್ರಯೋಜನವೇನು | ಡಾ.ಸಿಬಂತಿ ಪದ್ಮನಾಭ

ರೇಣುಕಾಸ್ವಾಮಿ ಕೊಲೆಯಾದಾಗ ಆತನ ಪತ್ನಿ ಸಹನಾ 5 ತಿಂಗಳ ಗರ್ಭಿಣಿಯಾಗಿದ್ದರು. ಈ ಎಲ್ಲಾ ಸಂಕಟದಲ್ಲಿ ಮುಳುಗಿದ್ದ ಕುಟುಂಬಕ್ಕೆ ಮೊಮ್ಮಗನ ಆಗಮನ ತುಸು ಸಂತಸ ತಂದಿತ್ತು.

ರೇಣುಕಸ್ವಾಮಿ ಸಹನಾ ದಾಂಪತ್ಯಕ್ಕೆ ಪದಾರ್ಪಣೆ ಮಾಡಿದ್ದ ಸಂದರ್ಭ

ಫೆ.23 ಭಾನುವಾರ ರೇಣುಕಸ್ವಾಮಿ ಮನೆಯಲ್ಲಿ ಸಂತಸ ಮನೆ ಮಾಡಿತ್ತು. ಬಹಳ ದಿನಗಳ ನಂತರ ಮನೆಯಲ್ಲಿ ಮಂಗಳಕಾರ್ಯ ನೆರವೇರಿತು.

ಇದನ್ನೂ ಓದಿ: ಮೇ.10ರ ಒಳಗಾಗಿ ಇ-ಖಾತೆ ಪಡೆಯಿರಿ | ಜಿಲ್ಲಾಧಿಕಾರಿ ವೆಂಕಟೇಶ್

ಇಂದು ರೇಣುಕಸ್ವಾಮಿಯ ತಂಗಿ ಸುಚೇತನ ಅವರು ತನ್ನ ಅಳಿಯನಿಗೆ ‘ಶಶಿಧರ ಸ್ವಾಮಿ’ ಎಂದು ನಾಮಕರಣ ಮಾಡಿದರು. ಮಗುವಿನ ಕಿವಿಯಲ್ಲಿ ಮೂರು ಸಲ ಶಶಿಧರ ಸ್ವಾಮಿ ಎಂದು ಹೇಳುವ ಮೂಲಕ ನಾಮಕರಣ ಶಾಸ್ತ್ರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರೇಣುಕಸ್ವಾಮಿ ತಂದೆ ಶಿವನಗೌಡರು, ತಾಯಿ ರತ್ನಪ್ರಭ ಸೇರದಂತೆ ಅನೇಕ ಬಂಧುಗಳು ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version