CHITRADURGA NEWS | 08 AUGUST 2024
ಮೊಳಕಾಲ್ಮೂರು: ಮೊಳಕಾಲ್ಮೂರು(molakalmuru) ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 05 ಅಂಗನವಾಡಿ ಕಾರ್ಯಕರ್ತೆ ಮತ್ತು 14 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಕ್ಲಿಕ್ ಮಾಡಿ ಓದಿ: Power cut; 8 ದಿನ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಅಂತೀರಾ… ಈ ಸುದ್ದಿ ಓದಿ…
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಕೇಂದ್ರಗಳ ವಿವರ:
ಮೊಳಕಾಲ್ಮೂರು ತಾಲ್ಲೂಕಿನ ನರ‍್ಲಹಳ್ಳಿ ಗ್ರಾ. ಪಂ.ನ ಅವುಲು ಪಾಪಯ್ಯನಹಟ್ಟಿ, ರಾಯಪುರ ಗ್ರಾ.ಪಂ.ನ ಮಠದಜೋಗಿಹಳ್ಳಿ, ನಾಗಸಮುದ್ರ ಗ್ರಾ. ಪಂ.ನ ನಾಗಸಮುದ್ರ-ಡಿ ಹಾಗೂ ನಾಗಸಮುದ್ರ-ಎಚ್ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಪಂಗಡಕ್ಕೆ ಹಾಗೂ ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಯ ವಾರ್ಡ-11ರ ಸಂತೇ ಮೈದಾನ ಇತರೆ ವರ್ಗಕ್ಕೆ ಮೀಸಲಿವೆ.
ಅಂಗನವಾಡಿ ಸಹಾಯಕಿಯರ ಕೇಂದ್ರಗಳ ಮೀಸಲಾತಿ ವಿವರ:
ಹಾನಗಲ್ ಗ್ರಾ.ಪಂ.ನ ಹಾನಗಲ್-ಎ ಹಾಗೂ ಹಳೆಕೆರೆ, ರಾಪಾಪುರ ಗ್ರಾ.ಪಂ.ನ ಮಠದಜೋಗಿಹಳ್ಳಿ, ಬಿ.ಜಿ.ಕೆರೆ ಗ್ರಾ.ಪಂ.ನ ಸೂರಮ್ಮನಹಳ್ಳಿ-ಬಿ ಮತ್ತು ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ, ನರ‍್ಲಹಳ್ಳಿ ಗ್ರಾ.ಪಂ.ನ ಮುದ್ದಯ್ಯನಹಟ್ಟಿ, ಅಶೋಕ ಸಿದ್ದಾಪುರ ಗ್ರಾ.ಪಂ.ನ ಮಾಚೇನಹಳ್ಳಿ ಎಸ್.ಟಿ ಕಾಲೋನಿ, ತಮ್ಮೇನಹಳ್ಳಿ ಗ್ರಾ.ಪಂ.ನ ಬೊಮ್ಮದೇವರಹಳ್ಳಿ-ಬಿ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿವೆ. ಉಳಿದಂತೆ ಜೆ.ಬಿ.ಹಳ್ಳಿ ಗ್ರಾ.ಪಂ.ನ ಹೊಸದಡಗೂರು-ಎ, ಅಶೋಕ ಸಿದ್ದಾಪುರ ಗ್ರಾ.ಪಂ.ನ ಗೌರಸಮುದ್ರ-ಬಿ ಕೇಂದ್ರಗಳು ಪರಿಶಿಷ್ಟ ಜಾತಿಗೆ ಹಾಗೂ ತಮ್ಮೇನಹಳ್ಳಿ ಗ್ರಾ.ಪಂ.ನ ಮುರುಡಿ, ದೇವಸಮುದ್ರ ಗ್ರಾ.ಪಂ.ನ ವೆಂಕಟಾಪುರ-ಎ, ಕೊಂಡ್ಲಹಳ್ಳಿ ಗ್ರಾ.ಪಂ.ನ ಕೊಂಡ್ಲಹಳ್ಳಿ-ಡಿ, ಚಕ್ಕೇರಹಳ್ಳಿ ಗ್ರಾ.ಪಂ.ನ ಅಮುಕುಂದಿ-ಎ ಕೇಂದ್ರಗಳು ಇತರೆ ವರ್ಗಕ್ಕೆ ಮೀಸಲಿವೆ.
ಕ್ಲಿಕ್ ಮಾಡಿ ಓದಿ: Murugha muth:ಒಂಟಿ ಕಂಬದ ಮಠದಲ್ಲಿ ಮಲ್ಲಿಕಾರ್ಜುನ ಶ್ರೀ ಸ್ಮರಣೋತ್ಸವ | ಹತ್ತಾರು ಮಠಾಧೀಶರು ಭಾಗೀ | ಯರ‍್ಯಾರು ಏನು ಹೇಳಿದ್ರು
ಹೆಚ್ಚಿನ ಮಾಹಿತಿಗಾಗಿ ಮೊಳಕಾಲ್ಮೂರು ತಾಲ್ಲೂಕಿನ ಸಾಮರ್ಥ್ಯ ಸೌಧ ಹಿಂಭಾಗ, ಸ್ತ್ರೀ ಶಕ್ತಿ ಭವನಕಟ್ಟಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ 08198-229565 ಗೆ ಸಂಪರ್ಕಿಸಬಹುದು ಎಂದು ಮೊಳಕಾಲ್ಮೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number