Connect with us

    Job’s; ಹೊಸದುರ್ಗ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

    jobs in chitradurga news

    ಮುಖ್ಯ ಸುದ್ದಿ

    Job’s; ಹೊಸದುರ್ಗ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 06 AUGUST 2024

    ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಯೋನಿವೃತ್ತಿ, ಇತರೆ ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ(Job’s)ಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಕ್ಲಿಕ್ ಮಾಡಿ ಓದಿ: RESERVATION: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

    ಜುಲೈ 30 ರಿಂದ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

    ಅಂಗನವಾಡಿ ಕಾರ್ಯಕರ್ತೆಯರನ್ನು ಆಯ್ಕೆ ಮಾಡಬೇಕಾದ ಅಂಗನವಾಡಿಕೇಂದ್ರದ ಹೆಸರು:

    ಹೊಸದುರ್ಗ ತಾಲ್ಲೂಕಿನ ಅಗಸರಹಳ್ಳಿ, ಮೆಟ್ಟಿನಹೊಳೆ, ಅಲರಹಳ್ಳಿ, ಅಜ್ಜಿಕಂಸಾಗರ, ಇಟ್ಟಿಗೆಹಳ್ಳಿ, ಬುಕ್ಕಸಾಗರ, ಅಹಮದ್ ನಗರ, ಚಿಕ್ಕಯಗಟಿ, ಕಂಗುವಳ್ಳಿ-1, ಡಿ.ಕೆ.ಕಟ್ಟೆ, ಕಾಡುಸಿದ್ದರಹಟ್ಟಿ, ಬೀಸನಹಳ್ಳಿ, ಸೋಮಸಂದ್ರ, ಕಬ್ಬಳ-1, ಕಾನುಬೇನಹಳ್ಳಿ, ಮಲ್ಲಿಹಳ್ಳಿ, ಶ್ರೀರಾಂಪುರ-3,ತುಂಬಿನಕೆರೆ, ಹಳೆಕಡಿವಾಣಕಟ್ಟೆ ( ಮಿನಿ ಅಂಗನವಾಡಿ ಕೇಂದ್ರ), ವಿದ್ಯಾನಗರ-1 ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

    ಅಂಗನವಾಡಿ ಸಹಾಯಕಿಯರನ್ನು ಆಯ್ಕೆಮಾಡಬೇಕಾದ ಅಂಗನವಾಡಿ ಕೇಂದ್ರಗಳ ಹೆಸರು:

    ಹೊಸದುರ್ಗ ತಾಲ್ಲೂಕಿನ ಸಿದ್ದರಾಮನಗರ, ವಿದ್ಯಾನಗರ, 2ನೇ ಯಲಕಪ್ಪನಹಟ್ಟಿ, ಕೆರೆಕೋಡಿಹಟ್ಟಿ, ರಂಗವ್ವನಹಳ್ಳಿ ಲಂ.ಹಟ್ಟಿ, ಹೊನ್ನೇಕೆರೆ, ಜಾನಕಲ್ ಲಂ.ಹಟ್ಟಿ, ಶಾಂತಿನಗರ-1, ಕೃಷ್ಣಾಪುರ, ಹೊತ್ತರಗೊಂಡನಹಳ್ಳಿ, ಮಾರಬಘಟ್ಟ, ಆದ್ರಿಕಟ್ಟೆ, ಹುಲ್ಲುಕಟ್ಟೆ, ಸಿದ್ದಗೊಂಡನಹಳ್ಳಿ, ಬಳ್ಳೆಕೆರೆ, ಸೊಡರನಾಳ್, ಜಂಗಮನಗರ, ಕೆಲ್ಲೋಡು-2, ಸೋಮಸಂದ್ರ, ಬೆನಕನಹಳ್ಳಿ,ಬೆಲಗೂರು, ಜಯಸುವರ್ಣಾಪುರ ಹಾಗೂ ಜೆ.ಎನ್.ಕೆರೆ -2 ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಕ್ಲಿಕ್ ಮಾಡಿ ಓದಿ: APMC: ಆಗಸ್ಟ್ 6 ರಿಂದ ಹತ್ತಿ ಮಾರುಕಟ್ಟೆ ಬಂದ್ | ನಾಳೆಯಿಂದ ರೈತರು ಮಾರುಕಟ್ಟೆಗೆ ಹತ್ತಿ ತರದಂತೆ ಸೂಚನೆ

    ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್ https://karnemakaone.kar.nic.in/abcd/ ನ್ನು ಸಂಪರ್ಕಿಸಬಹುದು ಎಂದು ಹೊಸದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top