ಚಳ್ಳಕೆರೆ
Challakere; ಚಳ್ಳಕೆರೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
CHITRADURGA NEWS | 07 AUGUST 2024
ಚಳ್ಳಕೆರೆ: ಚಳ್ಳಕೆರೆ(Challakere) ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 16 ಅಂಗನವಾಡಿ ಕಾರ್ಯಕರ್ತೆ ಮತ್ತು 30 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕ್ಲಿಕ್ ಮಾಡಿ ಓದಿ: Power cut: ಏಳು ದಿನ ವಿದ್ಯುತ್ ವ್ಯತ್ಯಯ | ಬೆಸ್ಕಾಂ ಮಾಹಿತಿ
ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಇಲಾಖೆಯ ವೆಬ್ಸೆöÊಟ್ https://karnemakaone.kar.nic.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ವಿವರ :
ದೊಡ್ಡೇರಿ ಗ್ರಾ.ಪಂ.ನ ದೊಡ್ಡೇರಿ ಗೊಲ್ಲರಹಟ್ಟಿ, ದೇವರೆಡ್ಡಿಹಳ್ಳಿ ಗ್ರಾ.ಪಂ.ನ ಮಲ್ಲಸಮುದ್ರ-ಎ, ಬೆಳೆಗೆರೆ ಗ್ರಾ.ಪಂ.ನ ಕಲಮರಹಳ್ಳಿ, ಸೋಮಗುದ್ದು ಗ್ರಾ.ಪಂ.ನ ಸೋಮಗುದ್ದು-ಎ, ಚೌಳೂರು ಗ್ರಾ.ಪಂ.ನ ಜುಂಜರಗುಂಟೆ-ಎ, ಮೀರಸಾಬಿಹಳ್ಳಿ ಗ್ರಾ.ಪಂ.ನ ವಿಡುಪನಕುಂಟೆ ಹಾಗೂ ಕರೀಕೆರೆ-ಎ, ಚನ್ನಮ್ಮನಾಗತಿಹಳ್ಳಿ ಗ್ರಾ.ಪಂ.ನಹಾಲಿಗೊಂಡನಹಳ್ಳಿ-ಎ, ಓಬಳಾಪುರ ಗ್ರಾ.ಪಂ.ನ ಕೋಡಿಹಟ್ಟಿ ಹಾಗೂ ಚಿಕ್ಕಬಾದಿಹಳ್ಳಿ ಅಂಗನವಾಡಿ ಕೇಂದ್ರಗಳು ಇತರೆ ವರ್ಗಕ್ಕೆ ಮೀಸಲಿವೆ. ಉಳಿದಂತೆ ಎನ್.ದೇವರಹಳ್ಳಿ ಗ್ರಾ.ಪಂ.ನ ವರವು-ಬಿ, ಬುಡ್ನಹಟ್ಟಿ ಗ್ರಾ.ಪಂ.ನ ವೀರದಿಮ್ಮನಹಳ್ಳಿ, ಸಾಣಿಕೆರೆ ಗ್ರಾ.ಪಂ.ನ ಕಮ್ಮತ್‌ಮರಿಕುಂಟೆ, ಚನ್ನಮ್ಮನಾಗತಿಹಳ್ಳಿ ರಾಜೀವ್ ನಗರ, ಹಾಗೂ ಚಟ್ಟೆಕಂಬ-ಎ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಜಾತಿಗೆ ಹಾಗೂ ನನ್ನಿವಾಳ ಗ್ರಾ. ಪಂ. ನ ಚಂದ್ರಗಿರಿಹಟ್ಟಿ ಅಂಗನವಾಡಿ ಕೇಂದ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ.
ಕ್ಲಿಕ್ ಮಾಡಿ ಓದಿ: Farmers Association; ರೈತ ಸಂಘದ ಜಿಲ್ಲಾಧ್ಯಕ್ಷರಾಗಿ ಹಂಪಯ್ಯನಮಾಳಿಗೆ ಧನಂಜಯ
ಅಂಗನವಾಡಿ ಸಹಾಯಕಿಯರ ಹುದ್ದೆಗಳ ವಿವರ:
ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾ.ಪಂ.ನ ನಂದಾಪುರ, ಚೌಳೂರು ಗ್ರಾ.ಪಂ.ನ ಚೌಳೂರು-ಬಿ, ಘಟಪರ್ತಿ ಗ್ರಾ.ಪಂ.ನ ಘಟಪರ್ತಿ-ಸಿ, ಸಾಣಿಕೆರೆ ಗ್ರಾ.ಪಂ.ನ ಕಾಪರಹಳ್ಳಿ-ಎ, ಬೆಳೆಗೆರೆ ಗ್ರಾ.ಪಂ.ನ ಕಲಮರಹಳ್ಳಿ ಹಾಗೂ ಹುಲಿಕುಂಟೆ-ಎಫ್, ಚಳ್ಳಕೆರೆ ನಗರದ ವಾರ್ಡ ಸಂಖ್ಯೆ-19ರ ವಾಸವಿ ಶಾಲೆ ಹಿಂಭಾಗ ಕೇಂದ್ರ, ನಗರದ ವಾರ್ಡ ಸಂಖ್ಯೆ-8ರ ಶಾಂತಿನಗರ-ಎ, ನಗರದ ವಾರ್ಡ ಸಂಖ್ಯೆ-12ರ ತ್ಯಾಗರಾಜನಗರ-ಬಿ, ನೇರಲಗುಂಟೆ ಗ್ರಾ.ಪಂ.ನ ನೇರಲಗುಂಟೆ-ಸಿ, ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವಾರ್ಡ ಸಂಖ್ಯೆ-12ರ ನಾಯಕನಹಟ್ಟಿ-ಇ, ದೊಡ್ಡ ಉಳ್ಳಾರ್ತಿ ಗ್ರಾ.ಪಂ.ನ ದೊಡ್ಡ ಉಳ್ಳಾರ್ತಿ-ಎ, ಓಬಳಾಪುರ ಗ್ರಾ.ಪಂ.ನ ಕೋಡಿಹಟ್ಟಿ, ಗೋಪನಹಳ್ಳಿ ಗ್ರಾ.ಪಂ.ನ ಗೋಪನಹಳ್ಳಿ ಗೋವರ್ಧನಗಿರಿ ಅಂಗನವಾಡಿ ಕೇಂದ್ರಗಳು ಇತರೆ ವರ್ಗಕ್ಕೆ ಹಾಗೂ ಎನ್.ದೇವರಹಳ್ಳಿ ಗ್ರಾ.ಪಂ.ನ ಪುರಿಚನ್ನಯ್ಯನಹಟ್ಟಿ, ತಳಕು ಗ್ರಾ.ಪಂ.ನ ಪೀಲಯ್ಯನಹಟ್ಟಿ, ರಾಮಜೋಗಿಹಳ್ಳಿ ಗ್ರಾ.ಪಂ.ನ ನೆಲಜಾಮನಹಟ್ಟಿ, ನನ್ನಿವಾಳ ಗ್ರಾ.ಪಂ.ನ ನಿಂಗ್ಲೋರಹಟ್ಟಿ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವಾರ್ಡ ಸಂಖ್ಯೆ-11ರ ನಾಯಕನಹಟ್ಟಿ-ಸಿ, ವಾರ್ಡ ಸಂಖ್ಯೆ-1ರ ಜಾಗನೂರಹಟ್ಟಿ-ಬಿ, ಗೌಡಗೆರೆ ಗ್ರಾ.ಪಂ.ನ ಕೌಲನಹಳ್ಳಿ, ಅಬ್ಬೇನಹಳ್ಳಿ ಗ್ರಾ.ಪಂ.ನ ಮುಸ್ಟಲಗುಮ್ಮಿ-ಎ, ಬುಡ್ನಹಟ್ಟಿ ಗ್ರಾ.ಪಂ.ನ ಬುಡ್ನಹಟ್ಟಿ-ಎ, ದೊಡ್ಡೇರಿ ಗ್ರಾ.ಪಂ.ನ ಭರಮಸಾಗರ-ಬಿ, ಮಲ್ಲೂರಹಳ್ಳಿ ಗ್ರಾ.ಪಂ.ನ ರೇಖಲಗೆರೆ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿವೆ. ಉಳಿದಂತೆ ನಗರಂಗೆರೆ ಗ್ರಾ.ಪಂ.ನ ನಗರಂಗೆರೆ-ಬಿ, ತಳಕು ಗ್ರಾ.ಪಂ.ನ ತಳಕು-ಎ, ದೇವರಮರಿಕುಂಟೆ ಗ್ರಾ.ಪಂ.ನ ಯಲಗಟ್ಟೆ, ಜಾಜೂರು ಗ್ರಾ.ಪಂ.ನ ಜಾಜೂರು-ಎ, ಚನ್ನಮ್ಮನಾಗತಿಹಳ್ಳಿ ಗ್ರಾ.ಪಂ.ನ ದ್ಯಾವರನಹಳ್ಳಿ ಕೇಂದ್ರಗಳು ಪರಿಶಿಷ್ಟ ಜಾತಿಗೆ ಮೀಸಲಿವೆ.
ಕ್ಲಿಕ್ ಮಾಡಿ ಓದಿ: water level: ವಿವಿ ಸಾಗರಕ್ಕೆ ಹೆಚ್ಚಿದ ಒಳಹರಿವು | ಜಲಾಶಯದ ಇಂದಿನ ನೀರಿನ ಮಟ್ಟ
ಹೆಚ್ಚಿನ ಮಾಹಿತಿಗಾಗಿ ಚಳ್ಳಕೆರೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತ್ಯಾಗರಾಜ ನಗರ, ಚಳ್ಳಕೆರೆ ದೂರವಾಣಿ ಸಂಖ್ಯೆ 08195-200042 ಗೆ ಸಂಪರ್ಕಿಸಬಹದು ಎಂದು ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.