ಕ್ರೈಂ ಸುದ್ದಿ
National Highway: ಶವ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಲಾರಿಗೆ ಡಿಕ್ಕಿ | ಸ್ಥಳದಲ್ಲೇ ಮಹಿಳೆ ಸಾವು | 3 ಜನ ಗಂಭೀರ

Published on
CHITRADURGA NEWS | 27 AUGUST 2024
ಚಿತ್ರದುರ್ಗ: ಬೆಂಗಳೂರಿನಿಂದ ಹಾವೇರಿಗೆ ಮೃತದೇಹ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಪಾಲಿಗೆ ನಡು ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಯೇ ಜವರಾಯನಾಗಿದೆ.
ಮಂಗಳವಾರ ನಸುಕಿನಲ್ಲಿ ಹಾವೇರಿಗೆ ಶವ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಚಿತ್ರದುರ್ಗ ಸಮೀಪದ ಬಳ್ಳೆಕಟ್ಟೆ ಬಳಿ ಕೆಟ್ಟು ನಿಂತಿದ್ದ ಅದಿರು ಸಾಗಾಣೆ ಮಾಡುವ ಲಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ದೇವಸ್ಥಾನದಲ್ಲಿ ಗಲಾಟೆ | ಪರಸ್ಪರ ದೂರು ದಾಖಲು
ಹಾವೇರಿ ಮೂಲದ ಸರೋಜಮ್ಮ(60) ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅಂಬ್ಯುಲೆನ್ಸ್ ಚಾಲಕ ಮಂಜುನಾಥ್ ಸೇರಿದಂತೆ ಇನ್ನೂ ಇಬ್ಬರು ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ (National Highway) ನಡುವೆ ಕೆಟ್ಟಿದ್ದ ಲಾರಿಯನ್ನು ಚಾಲಕ ನಡು ರಸ್ತೆಯಲ್ಲೇ ನಿಲ್ಲಿಸಿ ರಿಪೇರಿ ಮಾಡುತ್ತಿದ್ದ ಎನ್ನಲಾಗಿದೆ. ವೇಗವಾಗಿ ಬಂದ ಅಂಬ್ಯುಲೆನ್ಸ್ ಲಾರಿಗೆ ಡಿಕ್ಕಿಯಾಗಿದೆ.
Continue Reading
Related Topics:Ambulance, Chitradurga, Chitradurga news, Kannada Latest News, national highway, National Highway Accident, ಅಂಬ್ಯಲೆನ್ಸ್, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ರಾಷ್ಟ್ರೀಯ ಹೆದ್ದಾರಿ ಅಪಘಾತ

Click to comment