ಲೋಕಸಮರ 2024
ಲೋಕಸಭಾ ಚುನಾವಣೆಗೆ ಚಿಹ್ನೆ ಹಂಚಿಕೆ | ಯಾರಿಗೆ ಯಾವುದು ಸಿಕ್ತು | ಇಲ್ಲಿದೆ ನೋಡಿ ಪೂರ್ಣ ವಿವರ
Published on
CHITRADURGA NEWS | 09 APRIL 2024
ಚಿತ್ರದುರ್ಗ: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಯುಗಾದಿ ಹಬ್ಬದ ದಿನವೇ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.
ನಾಮಪತ್ರ ಹಿಂಪಡೆಯಲು ಏಪ್ರಿಲ್ 8 ಸೋಮವಾರ ಕಡೆಯ ದಿನವಾಗಿತ್ತು. ಒಟ್ಟು 28 ಅಭ್ಯರ್ಥಿಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಸೋಮವಾರ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ | ದೇಶದ ಅಭಿವೃದ್ಧಿ ದೃಷ್ಟಿಯಿಂದ ಎರಡು ಪಕ್ಷಗಳ ಸಮಾಗಮ
ಈಗ 20 ಅಭ್ಯರ್ಥಿಗಳು ಕಣದಲ್ಲಿ ಉಳಿದಿದಿದ್ದಾರೆ. ಇದರಲ್ಲಿ 12 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದರೆ, ಉಳಿದ 8 ಮಂದಿ ಮಾನ್ಯತೆ ಪಡೆದ ರಾಷ್ಟ್ರೀಯ, ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳಿದ್ದಾರೆ.
ಯಾವ ಅಭ್ಯರ್ಥಿಗೆ ಯಾವ ಚಿಹ್ನೆ
- ಗೋವಿಂದ ಕಾರಜೋಳ (ಬಿಜೆಪಿ – ಕಮಲ)
- ಬಿ.ಎನ್.ಚಂದ್ರಪ್ಪ (ಕಾಂಗ್ರೆಸ್ – ಕೈ)
- ಅಶೋಕ ಚಕ್ರವರ್ತಿ (ಬಿಎಸ್ಪಿ – ಆನೆ)
- ಸಿ.ಎನ್.ನರಸಿಂಹರಾಜು (ಕರ್ನಾಟಕ ರಾಷ್ಟ್ರಸಮಿತಿ ಪಕ್ಷ – ಬ್ಯಾಟರಿ ಟಾರ್ಚ್)
- ಟಿ.ರಮೇಶ್ ನಾಯ್ಕ್ (ಉತ್ತಮ ಪ್ರಜಾಕೀಯ ಪಾರ್ಟಿ – ಆಟೋರಿಕ್ಷಾ)
- ಬಿ.ಟಿ.ರಾಮಸುಬ್ಬಯ್ಯ(ಇಂಡಿಯನ್ ಮೂವ್ಮೆಂಟ್ ಪಾರ್ಟಿ – ಸೀಟಿ)
- ಆರ್.ಶಬರೀಶ (ಕರುನಾಡ ಸೇವಕರ ಪಕ್ಷ – ತೆಂಗಿನ ತೋಟ)
- ಡಿ.ಸುಜಾತಾ (ಎಸ್ಯುಸಿಐ – ಪ್ರೆಷರ್ ಕುಕ್ಕರ್)
ಪಕ್ಷೇತರ ಅಭ್ಯರ್ಥಿಗಳ ಚಿಹ್ನೆಗಳು
- ಅಮೃತ ರಾಜ (ಗಣಕಯಂತ್ರ)
- ಗಣೇಶ್ (ಮೈಕ್)
- ಎಚ್.ತುಳಸಿ (ಬಳೆಗಳು)
- ಎಂ.ಪಿ.ದಾರಕೇಶ್ವರಯ್ಯ (ಸ್ಟೊತೋಸ್ಕೋಪ್)
- ಕೆ.ನರಸಿಂಹಮೂರ್ತಿ (ಕಲ್ಲಂಗಡಿ)
- ನಾಗರಾಜಪ್ಪ (ಟ್ರಕ್)
- ಭೂತರಾಜ ವಿ.ಎಸ್ (ಸಿಸಿಟಿವಿ ಕ್ಯಾಮರಾ)
- ಟಿ.ಮಂಜುನಾಥ ಸ್ವಾಮಿ (ಹಡಗು)
- ಎಸ್.ರಘುಕುಮಾರ್ (ದೂರವಾಣಿ)
- ಬಿ.ವೆಂಕಟೇಶ್ ಶಿಲ್ಪಿ (ಹಲಸಿನ ಹಣ್ಣು)
- ಎಸ್.ಎಚ್.ಶ್ರೀನಿವಾಸ (ಐಸ್ಕ್ರೀಂ)
- ಆರ್.ಸುಧಾಕರ (ಹಣ್ಣುಗಳ ಬ್ಯಾಸ್ಕಟ್)
Continue Reading
You may also like...
Related Topics:BJP, Chitradurga, congress, Election Commission, Lok Sabha Elections, Symbol Sharing, ಕಾಂಗ್ರೆಸ್, ಚಿತ್ರದುರ್ಗ, ಚಿಹ್ನೆ ಹಂಚಿಕೆ, ಚುನಾವಣಾ ಆಯೋಗ, ಬಿಜೆಪಿ, ಲೋಕಸಭಾ ಚುನಾವಣೆ
Click to comment