ಮುಖ್ಯ ಸುದ್ದಿ
Hi-Tech Harvester Hub; ಕೃಷಿ ಇಲಾಖೆಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಅರ್ಜಿ ಅಹ್ವಾನ


CHITRADURGA NEWS | 23 SEPTEMBER 2024
ಚಿತ್ರದುರ್ಗ: 2024-25ನೇ ಸಾಲಿನ ರಾಜ್ಯ ವಲಯ ಕೃಷಿ ಯಾಂತ್ರೀಕರಣ ಯೋಜನೆಯಡಿ ಹೈಟೆಕ್ ಹಾರ್ವೆಸ್ಟರ್ ಹಬ್ (Hi-Tech Harvester Hub) ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ.
ಕ್ಲಿಕ್ ಮಾಡಿ ಓದಿ: DCC ಬ್ಯಾಂಕ್ ಅಧ್ಯಕ್ಷರಾಗಿ ಡಿ.ಸುಧಾಕರ್ ಅವಿರೋಧ ಆಯ್ಕೆ

ಸಾಮಾನ್ಯ ವರ್ಗದಡಿ ಎಫ್.ಪಿ.ಓ, ಎನ್.ಜಿ.ಓ ಇತರೆ ಸಂಘ-ಸಂಸ್ಥೆಗಳ ಚಾಲ್ತಿಯಲ್ಲಿರುವ ಸಿ.ಹೆಚ್.ಎಸ್.ಸಿ ಗಳಿಗೆ 01 ಹಾಗೂ ಪರಿಶಿಷ್ಟ ಪಂಗಡದ ವಯಕ್ತಿಕ ಫಲಾನುಭವಿಗಳಿಗೆ 01 ಕಂಬೈನ್ಸ್ ಹಾರ್ವೆಸ್ಟರ್ ಹಬ್‌ನ್ನು ಸ್ಥಾಪನೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಾಮಾನ್ಯ ವರ್ಗದ ಎಫ್.ಪಿ.ಓ, ಎನ್.ಜಿ.ಓ ಇತರೆ ಸಂಘ ಸಂಸ್ಥೆಗಳು ಚಾಲ್ತಿಯಲ್ಲಿರುವ ಸಿ.ಹೆಚ್.ಎಸ್.ಸಿ ಗಳಿಗೆ ಗರಿಷ್ಠ ಶೇ.70 ರಂತೆ ಮಾರ್ಗಸೂಚಿಯ ಮಿತಿಗೆ ಒಳಪಟ್ಟು ಸಹಾಯಧನವನ್ನು ನೀಡಲಾಗುವುದು.
ಸಹಾಯಧನವನ್ನು ಕ್ರೆಡಿಟ್ ಲಿಂಕ್ ಬ್ಯಾಕ್ ಎನ್‌ಡೆಡ್ ಸಬ್ಸಿಡಿ (Credit Linked Back Ended Subsidy) ಮುಖಾಂತರ ನೀಡಲಾಗುವುದು. ಆಯ್ಕೆಯಾದ ಸಂಸ್ಥೆಯವರು ಕೃಷಿ ಮೂಲಭೂತ ಸೌಕರ್ಯನಿಧಿ (AIF- Agricultural Infrastructure Fund) ಯೋಜನೆಯಡಿ ಬಡ್ಡಿ ರಿಯಾಯಿತಿಯ ನೆರವನ್ನು ಪಡೆಯಲು ಸಹ ಅವಕಾಶವಿರುತ್ತದೆ.
ಕ್ಲಿಕ್ ಮಾಡಿ ಓದಿ: Agricultural : ರೈತನೆಂಬ ಕೃಷಿ ವಿಜ್ಞಾನಿಯನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಆಸಕ್ತ ಸಂಘ-ಸಂಸ್ಥೆಗಳು ನೋಂದಣಿ ಪ್ರಮಾಣ ಪತ್ರ, ಜಿ.ಎಸ್.ಟಿ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಸಿಹೆಚ್.ಎಸ್.ಸಿ ನಡೆಸಿದ ಅನುಭವದ ವಿವರಗಳನ್ನು ಹಾಗೂ ರೂ.100/- ಗಳ ಛಾಪಾ ಕಾಗದದ ಮೇಲೆ ಹಬ್ ಅನ್ನು ಪರಬಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ ಸಲ್ಲಿಸಬೇಕಾಗಿರುತ್ತದೆ.
ಪರಿಶಿಷ್ಟ ಪಂಗಡದಡಿ (TSP) ವಯಕ್ತಿಕ ಫಲಾನುಭವಿಗಳಿಗೆ ಗರಿಷ್ಠ ಶೇ.70 ರಂತೆ ಮಾರ್ಗಸೂಚಿಯ ಮಿತಿಗೆ ಒಳಪಟ್ಟು ಸಹಾಯಧನವನ್ನು ನೀಡಲಾಗುವುದು.
ಸಹಾಯಧನವನ್ನು ಕ್ರೆಡಿಟ್ ಲಿಂಗ್ಸ್ ಬ್ಯಾಕ್ ಎನ್‌ಡೆಡ್ ಸಬ್ಸಿಡಿ ಮುಖಾಂತರ ನೀಡಲಾಗುವ್ಯದು, ಆಯ್ಕೆಯಾದ ಫಲಾನುಭವಿಗೆ (AIF – Agricultural Infrastructure Fund) ಯೋಜನೆಯಡಿ ಬಡ್ಡಿ ರಿಯಾಯಿತಿಯ ನೆರವನ್ನು ಪಡೆಯಲು ಸಹ ಅವಕಾಶವಿರುತ್ತದೆ.
ಕ್ಲಿಕ್ ಮಾಡಿ ಓದಿ: Agricultural pumpset: ಕೃಷಿ ಪಂಪ್‌ಸೆಟ್ ಆಧಾರ್ ಜೋಡಣೆಗೆ ಡೆಡ್‌ಲೈನ್ | ಎದುರಾಗಿದೆ ಆರ್ಥಿಕ ಸಂಕಷ್ಟ
ವಯಕ್ತಿಕ ಫಲಾನುಭವಿಗಳು ಅರ್ಜಿಯೊಂದಿಗೆ ಪಹಣಿ, ಎಫ್.ಐ.ಡಿ, ಜಾತಿ ಪ್ರಮಾಣ ಪತ್ರ, ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್, ರೂ.100/- ಗಳ ಛಾಪಾ ಕಾಗದದ ಮೇಲೆ ಹಬ್ ಅನ್ನು ಪರಬಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ ಸಲ್ಲಿಸಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದು.
ಈ ಮೇಲಿನ ಎಲ್ಲಾ ದಾಖಲಾತಿಗಳನ್ನು ಸೆ. 30 ರ ಒಳಗಾಗಿ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
