Connect with us

Agricultural pumpset: ಕೃಷಿ ಪಂಪ್‌ಸೆಟ್‌ ಆಧಾರ್ ಜೋಡಣೆಗೆ ಡೆಡ್‌ಲೈನ್‌ | ಎದುರಾಗಿದೆ ಆರ್ಥಿಕ ಸಂಕಷ್ಟ

pumpset

ಮುಖ್ಯ ಸುದ್ದಿ

Agricultural pumpset: ಕೃಷಿ ಪಂಪ್‌ಸೆಟ್‌ ಆಧಾರ್ ಜೋಡಣೆಗೆ ಡೆಡ್‌ಲೈನ್‌ | ಎದುರಾಗಿದೆ ಆರ್ಥಿಕ ಸಂಕಷ್ಟ

CHITRADURGA NEWS | 23 SEPTEMBER 2024
ಚಿತ್ರದುರ್ಗ: 10 ಎಚ್‌ಪಿವರೆಗಿನ ಕೃಷಿ ಪಂಪ್‌ಸೆಟ್‌ ಸ್ಥಾವರಗಳ ಆಧಾರ್‌ ಜೋಡಣೆಯನ್ನು ಸೆ.23 ರೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದರೆ ಮುಂದಿನ ಎಲ್ಲ ಪರಿಣಾಮಗಳಿಗೆ ವಿದ್ಯುತ್‌ ಸರಬರಾಜು ಕಂಪನಿಗಳೇ ಹೊಣೆ ಆಗಲಿವೆ ಎಂದು ಎಲ್ಲ ಎಸ್ಕಾಂಗಳಿಗೆ (ವಿದ್ಯುತ್‌ ಸರಬರಾಜು ಕಂಪನಿಗಳು) ಇಂಧನ ಇಲಾಖೆ ಎಚ್ಚರಿಕೆ ನೀಡಿದೆ.

ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು 33,83,064 ಸಕ್ರಿಯ ಕೃಷಿ ಪಂಪ್‌ಸೆಟ್‌ಗಳಿವೆ. ಸೆ. 17ರವರೆಗೆ 31,90,203 (ಶೇ 94.30) ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆಯಾಗಿದೆ. ಇನ್ನೂ 1,92,861 (ಶೇ 5.70) ಪಂಪ್‌ಸೆಟ್‌‌ಗಳಿಗೆ ಬಾಕಿ ಉಳಿಯಿದೆ.‌

ವಿದ್ಯುತ್‌ ಸರಬರಾಜು ಕಂಪನಿಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಹೀಗಾಗಿ, ವಿದ್ಯುತ್ ಖರೀದಿ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳ ಮರುಪಾವತಿ ಮತ್ತು ಇತರೆ ವೆಚ್ಚಗಳನ್ನು ವ್ಯಯಿಸಲು ಸರ್ಕಾರದಿಂದ ಬಿಡುಗಡೆಯಾಗುವ ಸಹಾಯ ಧನವನ್ನು ಅವಲಂಬಿಸಿದೆ.

ಕ್ಲಿಕ್ ಮಾಡಿ ಓದಿ: ನೀತಿವಂತರಾಗಿರುವ ರೈತರಲ್ಲಿ ಎದುರಾಗಿದೆ ಸಂಘಟನೆ ಕೊರತೆ | ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಈ ಬಗ್ಗೆ ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, 10 ಎಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಅಕ್ಟೋಬರ್‌ ತಿಂಗಳ ಸಹಾಯಧನ ಬಿಡುಗಡೆಯನ್ನು ವ್ಯವಸ್ಥಿತವಾಗಿ ಪಡೆಯಲು ಆಧಾರ್‌ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜತೆಗೆ ಸೆ. 24ರ ಒಳಗೆ ವರದಿ ನೀಡಬೇಕು. ಆಧಾರ್‌ ಪ್ರಕ್ರಿಯೆ ಪೂರ್ಣಗೊಳ್ಳದೇ ಇದ್ದರೆ ಆಗುವ ಪರಿಣಾಮಗಳಿಗೆ ವಿದ್ಯುತ್‌ ಸರಬರಾಜು ಕಂಪನಿಗಳೇ ಹೊಣೆ ಆಗಲಿವೆ ಎಚ್ಚರಿಕೆ ನೀಡಿದ್ದಾರೆ.

ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 23 | ಉದ್ಯೋಗದಲ್ಲಿ ಪ್ರಗತಿ,ಹಠಾತ್ ಆರ್ಥಿಕ ಲಾಭ, ಹೊಸ ವಾಹನ ಯೋಗ

ಸೆಪ್ಟೆಂಬರ್ ತಿಂಗಳ ಸಹಾಯಧನವನ್ನು ಬಿಡುಗಡೆ ಮಾಡುವಂತೆ ಮತ್ತೊಮ್ಮೆ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದ್ದು, ಸಹಾಯಧನ ಬಿಡುಗಡೆ ಮಾಡಲು ಸಮ್ಮತಿಸಿದೆ. ಆದರೆ, ಅಕ್ಟೋಬರ್‌ ತಿಂಗಳ ಸಹಾಯಧನ ಬೇಡಿಕೆಯನ್ನು ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಕೋರಿಕೆ ಸಲ್ಲಿಸುವಂತೆ ಸೂಚಿಸಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version