Connect with us

    ಆಗಲಕೆರೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಕಳಸಾರೋಹಣ | ಮಠಾಧೀಶರು ಭಾಗೀ

    ಹೊಸದುರ್ಗ

    ಆಗಲಕೆರೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಕಳಸಾರೋಹಣ | ಮಠಾಧೀಶರು ಭಾಗೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 FEBRUARY 2025

    ಹೊಸದುರ್ಗ: ತಾಲೂಕಿನ ಆಗಲಕೆರೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭ ಜರುಗಿತು.

    Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?

    ಈ ವೇಳೆ ಕುಂಚಿಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ದೇವಸ್ಥಾನಕ್ಕೆ ಕಳಸ ಎಷ್ಟು ಮುಖ್ಯನೋ, ಮಾನವನಿಗೆ ಮಾನವೀಯತೆಯ ಕಳಸ ಮುಖ್ಯ ಎಂದರು.

    ದೇವಸ್ಥಾನಕ್ಕೆ ರಾಜಗೋಪುರ, ಕಳಸ, ಗಂಟೆ, ಜಾಗಟೆ ಶಂಕು, ಚಕ್ರ, ಧೂಪಾದೀಪ, ನೈವೇದ್ಯ, ಅರ್ಚನೆ, ಅರ್ಪಣೆ, ಆರಾಧನೆ ಎಷ್ಟು ಮುಖ್ಯವೋ ಮಾನವನಿಗೆ, ದಯೆ, ಸಮಾನತೆ, ಸೌಹಾರ್ದತೆ, ಸಹ ಬಾಳ್ವೆ, ಸಹಿಷ್ಣತೆ, ಸರಳತೆ, ಸಹಜತೆ ಅಷ್ಟೇ ಮುಖ್ಯ.

    ಮಾನವ ಧರ್ಮದ ಆಚರಣೆಗಳನ್ನು ಕೇಳುವುದರಲ್ಲಿ ಆಚರಿಸುವುದರಲ್ಲಿ ಕಾಲ ಕಳೆಯುತಿದ್ದಾನೆ ವಿನಃ ಅಳವಡಿಸಿಕೊಂಡು ಅರಿವಿನ ಜಾಗೃತಿಯೊಂದಿಗೆ ಆದರ್ಶ ಬದುಕನ್ನು ರೂಪಿಸಿಕೊಳ್ಳಲು ಮರೆತಿದ್ದಾನೆ. ದೇವರೆಂದರೆ ಎಲ್ಲಾ ಜನರು ಸೇರಿ ಸಂಭ್ರಮಿಸುವುದು, ಎಲ್ಲರೂ ಒಗ್ಗೂಡಿಯಲು ಸಹಬಾಳ್ವೆ ಜೀವನ ನಡೆಸಲು ಪ್ರೇರಣೆಯಾಗಬೇಕು.

    Also Read: ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನಿರ್ದೇಶಕ ಎಸ್‌.ಜಿ.ಮಂಜುನಾಥ್ ನಿಧನ

    ಮಾನವ ಪ್ರತಿಷ್ಠೆಗೆ ಒಳಗಾಗಿ ಪ್ರತಿಕಾರದ ಕ್ರೌರ್ಯವನ್ನು ತೋರಿಸಬಾರದು, ಪ್ರೀತಿಯ ಪರಿಪೂರ್ಣತೆಗೆ ಆದ್ಯತೆ ನೀಡಿ, ಮಾನವ ಜನುಮವನ್ನು ಅತ್ಯಂತ ಸಂತೋಷದಿಂದ ಕಳೆಯುವ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.

    ಹೊಸದುರ್ಗ ಕನಕ ಗುರು ಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಸಂವಿಧಾನದ ಆಶಯದಂತೆ ಸಹ ಬಾಳ್ವೆ, ಸಭಾಧ್ಯತೆಯನ್ನು ಕಾಪಾಡಿಕೊಂಡು ಶ್ರೀ ಆಂಜನೇಯ ಸ್ವಾಮಿಯಂತೆ ಕಿಂಕರತ್ವದಿಂದ ಸೇವೆಯನ್ನು ಮಾಡಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

    ದೇವಸ್ಥಾನದ ಆಡಳಿ ಮಂಡಳಿ ಸದಸ್ಯರು, ಆಗಲಕೆರೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಭಕ್ತರು ಭಾಗವಹಿಸಿದ್ದರು.

    Also Read: ಫೆ.5 ಮತ್ತು 6 ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಜಿಲ್ಲಾ ಪ್ರವಾಸ 

    ಸಮಾರಂಭಕ್ಕೂ ಮುನ್ನ ಪೂಜ್ಯದ್ವಯರ ಮೆರವಣಿಗೆ ಅತ್ಯಂತ ಸಂಭ್ರಮದಿಂದ ನಡೆಯಿತು.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top