CHITRADURGA NEWS | 06 JUNE 2024
ಚಿತ್ರದುರ್ಗ: ವೈದ್ಯಕೀಯ ಕೋರ್ಸ್‍ಗಳ ಆಯ್ಕೆಗೆ ನಡೆದ 2024ರ ನೀಟ್ ಪರೀಕ್ಷೆಯಲ್ಲಿ ಚಿತ್ರದುರ್ಗದ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ ಹಾಗೂ ಎಸ್‍ಎಲ್‍ವಿ ಪಿಯು ಕಾಲೇಜಿನ 64 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ದೈವಿಕ್ ಡಿ ಕುಮಾರ್ 584 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಕೆ.ಸ್ನೇಹಾ, ಕುಲದೀಪ್‍ಸಿಂಗ್, ಕೆ.ಪವನ್, ಶ್ರೀರಕ್ಷಾ, ಲಿಖಿತ್, ತ್ರಿಪುರಾಂಭ ಮತ್ತಿತರೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಇದನ್ನೂ ಓದಿ: ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ | ಕುತೂಹಲ ಮೂಡಿಸಿದ ಫಲಿತಾಂಶ
ಕಾಲೇಜಿನಲ್ಲಿ ಅನುಭವಿ ಉಪನ್ಯಾಸಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ನಡೆಸುವ ವಿಶೇಷ ತರಗತಿಗಳು, ತರಬೇತುದಾರರ ಸೂಕ್ತ ಮಾರ್ಗದರ್ಶನದಿಂದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ ಎಂದು ದೈವಿಕ್ ಡಿ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಫಲಿತಾಂಶ ಘೋಷಣೆಯಲ್ಲಿ ದೇಶದಲ್ಲಿಯೇ ಚಿತ್ರದುರ್ಗ ಮೊದಲು
ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಚ್.ಚಂದ್ರಕಲಾ, ಸಿಇಓ ಎಂ.ಸಿ.ರಘುಚಂದನ್, ಇಂಡಿಯನ್ ಇಂಟರ್‍ನ್ಯಾಷನಲ್ ಶಾಲೆಯ ಪ್ರಾಚಾರ್ಯ ಆಂಟೋನಿ ಮ್ಯಾಥ್ಯೂ, ಸಂಯೋಜಕ ಕೆ.ಟಿ.ಕೊಟ್ರೇಶ್, ಎಸ್‍ಎಲ್‍ವಿ ಪಿಯು ಕಾಲೇಜು ಪ್ರಾಚಾರ್ಯ ಯು.ಕೇಶವಮೂರ್ತಿ ಅಭಿನಂದಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
