ಕ್ರೈಂ ಸುದ್ದಿ
3ನೇ ತರಗತಿ ಬಾಲಕಿ ಮೇಲೆ 56 ವರ್ಷದ ವ್ಯಕ್ತಿಯಿಂದ ಅತ್ಯಾಚಾರ
CHITRADURGA NEWS | 14 MARCH 2025
ಚಿತ್ರದುರ್ಗ: 56 ವರ್ಷದ ವ್ಯಕ್ತಿ ಬಾಲಕಿಗೆ ಐಸ್ ಕ್ರೀಂ ಆಸೆ ತೋರಿಸಿ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ಮನೆ ಬಳಿ ಆಟವಾಡುತ್ತಿದ್ದ ಮೂರನೇ ತರಗತಿಯಲ್ಲಿ ಓದುತ್ತಿರುವ 9 ವರ್ಷದ ಬಾಲಕಿಯನ್ನು ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ ಮೃಗೀಯ ವರ್ತನೆ ಮೆರೆಯಲಾಗಿದೆ.
ಅತ್ಯಾಚಾರ ಮಾಡಿದ ಆರೋಪಿ ನಗರದ ಅಗಸನಹಳ್ಳಿ ಬಡಾವಣೆಯ ಸಾಧಿಕ್ ಎಂಬಾತನನ್ನು ಪೊಲೀಸರು ಬಂದಿಸಿದ್ದು, ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.