ಕ್ರೈಂ ಸುದ್ದಿ
ರಾಯಲ್ ಎನ್ ಫೀಲ್ಡ್ – ಆಟೋ ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರ ದುರ್ಮರಣ
ಚಿತ್ರದುರ್ಗ ನ್ಯೂಸ್.ಕಾಂ: ಆಟೋ ಹಾಗೂ ರಾಯಲ್ ಎನ್ ಫೀಲ್ಡ್ (Royal Enfilade) ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಚಿತ್ರದುರ್ಗ-ಚಳ್ಳಕೆರೆ ನಡುವಿನ ಹೊಸಕಲ್ಲಹಳ್ಳಿ ಬಳಿ ಈ ಭೀಕರ ಅಪಘಾತ ನಡೆದಿದೆ.
Royl enfielde ಬೈಕಿನಲ್ಲಿದ್ದ ಬೆಂಗಳೂರು ಮೂಲದ ಶಿಲ್ಪ (30), ಹಾಗೂ ಆಟೋದಲ್ಲಿದ್ದ ಚಿತ್ರದುರ್ಗ ಮೂಲದ ಬರ್ಕತ್ (35) ಸ್ಥಳದಲ್ಲಿಯೇ ಮೃತಪಟ್ಟವರು.
ಚಳ್ಳಕೆರೆಯಿಂದ ಬೈಕಲ್ಲಿ ಚಿತ್ರದುರ್ಗಕ್ಕೆ ಬರುತ್ತಿದ್ದ ಶಿಲ್ಪ ಪತಿ ರಾಘವೇಂದ್ರ. ಆಟೋದಲ್ಲಿ ಚಳ್ಳಕೆರೆಗೆ ಬರುತ್ತಿದ್ದ ಬರ್ಕತ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಹಗ್ಗ ಬಿಗಿದು ಕೊಲೆ ಮಾಡಲಾಗಿತ್ತೇ..?
ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು ಗಂಭಿರ ಸ್ಥಿತಿಯಲ್ಲಿದ್ದಾರೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿದ್ದಾರೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.