ಹಿರಿಯೂರು
ಅಬ್ಬಿನಹೊಳೆ | ಶ್ರೀ ರಂಗನಾಥಸ್ವಾಮಿ ಜಾತ್ರೆ ಏ.16ರವರೆಗೆ

CHITRADURGA NEWS | 08 APRIL 2025
ಹಿರಿಯೂರು: ಹಿರಿಯೂರು ತಾಲ್ಲೂಕು ಅಬ್ಬಿನಹೊಳೆ ಗ್ರಾಮದ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಇದೇ ಏಪ್ರಿಲ್ 01 ರಿಂದ ಪ್ರಾರಂಭವಾಗಿದ್ದು, ಏ.16 ರವರೆಗೆ ನಡೆಯಲಿದೆ.
Also Read: 3 ದಿನ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?
ಏ.8ರಂದು ಶ್ರೀ ಸ್ವಾಮಿ ಗಂಗಾಪೂಜೆ, ಏ.09ರಂದು ಮಖಾ ನಕ್ಷತ್ರದಲ್ಲಿ ಕಂಕಣಧಾರಣೆ, ಅಂಕುರಾರ್ಪಣದ ಕಳಸ ಸ್ಥಾಪನೆ, ಹೋಮ, ಏ.10ರಂದು ಧ್ವಜಾರೋಹಣ, ಅಗ್ನಿ ಪ್ರತಿಷ್ಠೆ, ಮೂರ್ತಿ ಹೋಮಾದಿಗಳು ಸಂಜೆ ಸಿಂಹ ವಾಹನೋತ್ಸವ.
ಏ.11ರಂದು ರಾತ್ರಿ ಹನ್ಮಂತ ಮಹೋತ್ಸವ, ಏ.12ರಂದು ಬೆಳಿಗಿನ ಜಾವ 3 ರಿಂದ 4ಕ್ಕೆ ಗರುಡೋತ್ಸವ, ಬೆಳಗಿನ ಜಾವ4 ರಿಂದ 6 ರವರೆಗೆ ಕಲ್ಯಾಣೋತ್ಸವ, ಬೆಳಿಗ್ಗೆ 9 ರಿಂದ 11 ರವರೆಗೆ ಗಜೇಂದ್ರ ಮೋಕ್ಷ, ಬೆಳಿಗ್ಗೆ 11ಕ್ಕೆ ಕುಂಭಲಗ್ನದಲ್ಲಿ ಹೋಮಾದಿ ಕಾರ್ಯಕ್ರಮ, ನೂತನ ರಥ ಸಂಪ್ರೋಕ್ಷಣೆ ಹಾಗೂ ಕಳಸ ಸ್ಥಾಪನೆ, ಏ.13ರಂದು ಬೆಳಿಗ್ಗೆ 11.30 ರಿಂದ 12.30ರವರೆಗೆ ಮೂರ್ತಿ ಹೋಮಾದಿ ಕಾರ್ಯಗಳು ಬ್ರಹ್ಮರಥೋತ್ಸವ ನಡೆಯಲಿದೆ.
ಸಂಜೆ 6ಕ್ಕೆ ರಥ ಅಭಿವೃದ್ಧಿ ದಾನಿಗಳಿಗೆ ಸನ್ಮಾನ ಸಮಾರಂಭ, ರಾತ್ರಿ 8.30ಕ್ಕೆ ಓಂಶಕ್ತಿ ಆರ್ಕೆಸ್ಟ್ರಾ ಹಾವೇರಿ ಇವರಿಂದ ವಾದ್ಯಗೋಷ್ಠಿ, ರಾತ್ರಿ ಧೂಳೋತ್ಸವ ಮತ್ತು ದೃಷ್ಠಿ ಕಾರ್ಯ, ಏ.14ರಂದು ಮೂರ್ತಿ ಹೋಮಾದಿ ಕಾರ್ಯಕ್ರಮಗಳು, ಮೃಗ ಯಾತ್ರೋತ್ಸವ.
Also Read: Astrology: ದಿನ ಭವಿಷ್ಯ | ಏಪ್ರಿಲ್ 08 | ಅನಾರೋಗ್ಯದ ಸಮಸ್ಯೆ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲಮಯ ವಾತಾವರಣ
ಏ.15ರಂದು ಜಲ ಕ್ರೀಡೋತ್ಸವ, ವಸಂತೋತ್ಸವ, ಧ್ವಜಾ ಅವರೋಹಣ, ಕಂಕಣ ವಿಸರ್ಜನೆ, ಪೂರ್ಣಾಹುತಿ, 101 ಮಂಗಳಾರತಿ, ರಾತ್ರಿ ಶಯನೋತ್ಸವ ನಡೆಯಲಿದೆ. ಏ.16ರಂದು ಶ್ರೀ ಕಣಿವೆ ಮಾರಮ್ಮದೇವಿಗೆ ಸುಮಂಗಲೆಯರಿಂದ ಆರತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
