Connect with us

    ಮತಾಂತರ, ವಲಸೆ, ಶೋಷಣೆಗಳಿಂದ ನೊಂದಿರುವ ಬಂಜಾರ ಸಮಾಜದ ಅಭಿವೃದ್ಧಿಗೆ ಸರ್ಕಾರದ ವಿಶೇಷ ಪ್ಯಾಕೇಜ್ ಅಗತ್ಯ

    ಜಿಲ್ಲೆ ಪ್ರಮುಖರ ಸಮಾಲೋಚನಾ ಸಭೆ

    ಮುಖ್ಯ ಸುದ್ದಿ

    ಮತಾಂತರ, ವಲಸೆ, ಶೋಷಣೆಗಳಿಂದ ನೊಂದಿರುವ ಬಂಜಾರ ಸಮಾಜದ ಅಭಿವೃದ್ಧಿಗೆ ಸರ್ಕಾರದ ವಿಶೇಷ ಪ್ಯಾಕೇಜ್ ಅಗತ್ಯ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 22 FEBRUARY 2024

    ಚಿತ್ರದುರ್ಗ: ಬಡತನ, ನಿರುದ್ಯೋಗ, ಮತಾಂತರ, ವಲಸೆ, ಶೋಷಣೆಗಳಿಂದ ನೊಂದಿರುವ ಬಂಜಾರ ಸಮುದಾಯದ ಅಭಿವೃದ್ಧಿ ಕುಂಠಿತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ರಾಷ್ಟ್ರೀಯ ಗೋರ್(ಬಂಜಾರ) ಮಳಾವ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಬಸವರಾಜ್ ಚೌಹಾಣ್ ಅಭಿಪ್ರಾಯಪಟ್ಟರು.

    ನಗರದ ಬಂಜಾರ ಭವನದಲ್ಲಿ ಗುರುವಾರ ಸರ್ದಾರ್ ಸೇವಾಲಾಲ್ ಜಯಂತಿ ಹಾಗೂ ಮತಾಂತರ ತಡೆಗಟ್ಟುವ ಕುರಿತು ನಡೆದ ಚಿತ್ರದುರ್ಗ ಜಿಲ್ಲೆ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

    ಇದನ್ನೂ ಓದಿ: ಸ್ಥಿರತೆ ಕಂಡುಕೊಳ್ಳದ ಅಡಿಕೆ ಧಾರಣೆ | ಮಾರಾಟ ಮಾಡದ ಬೆಳೆಗಾರರಲ್ಲಿ ಗೊಂದಲ

    ಬಂಜಾರ ಸಮಾಜದ ಋಣದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ದ್ರೋಹ ಮಾಡಿದೆ. ಸಮಾಜವನ್ನು ಮೀಸಲಾತಿಯಿಂದ ವಂಚಿತಗೊಳಿಸಲು ಒಳ ಮೀಸಲಾತಿಗೆ ಶಿಫಾರಸ್ಸು ಮಾಡುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಎಚ್ಚರಿಸಿದರು.

    ರಾಷ್ಟ್ರೀಯ ಗೋರ್‍ಮಳಾವ್ ರಾಜ್ಯ ಕಾರ್ಯಾಧ್ಯಕ್ಷ ಜಯಸಿಂಹ ಖ್ವಾಟ್ರೋತ್ ಮಾತನಾಡಿ, ಬಂಜಾರ ಸಮುದಾಯವನ್ನು ಮತಾಂತರ ಮುಕ್ತ ಮಾಡಲು ಪ್ರತಿ ತಾಂಡಗಳಲ್ಲೂ ಜಾಗೃತಿ ಮೂಡಿಸಿ ಸಂಘಟನೆ ಬಲಪಡಿಸಬೇಕು ಎಂದರು.

    ಇದನ್ನೂ ಓದಿ: ಜಗದೊಡೆಯ ತಿಪ್ಪೇಶನ ಮಹಾರಥೋತ್ಸವ ವೈಭವಕ್ಕೆ ದಿನಗಣನೆ

    ರಾಜ್ಯಾದ್ಯಂತ ತಾಂಡಗಳಿಗೆ ಪ್ರವಾಸ ಮಾಡುವ ಮೂಲಕ ಮತಾಂತರದ ಕಪಿಮುಷ್ಠಿಯಿಂದ ಸಮಾಜವನ್ನು ರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.

    ಸಂಘಟನೆಯ ರಾಜ್ಯ ಸಂಚಾಲಕ ಎಸ್.ಪಿ.ಲಿಂಬ್ಯನಾಯ್ಕ್ ಮಾತನಾಡಿ, ಬಂಜಾರ ಸಮಾಜ ಸಾಂಸ್ಕøತಿಕವಾಗಿ ಶ್ರೀಮಂತವಾಗಿದ್ದರೂ, ಆರ್ಥಿಕವಾಗಿ ತುಂಬಾ ಹಿಂದುಳಿದಿದೆ. ನಮ್ಮ ಸಂಸ್ಕøತಿ ಪರಂಪರೆಯನ್ನು ನಾಶ ಮಾಡಲು ಅನ್ಯ ಧರ್ಮಗಳ ಮಿಷನರಿಗಳು ಬಡತನವನ್ನೇ ಬಂಡವಾಳ ಮಾಡಿಕೊಂಡು ಆಮಿಷ ಒಡ್ಡುತ್ತಿದ್ದಾರೆ. ಈ ಬಗ್ಗೆ ಸಮಾಜ ಜಾಗೃತವಾಗಬೇಕು ಎಂದರು.

    ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕ ಗಿರೀಶ್, ಮುಖಂಡರಾದ ಚಂದ್ರನಾಯ್ಕ, ರವಿಕುಮಾರ್, ಉಮಾಪತಿ, ವೀರಭದ್ರ, ಚಂದ್ರನಾಯ್ಕ, ಜಯಣ್ಣ ಮತ್ತಿತರರಿದ್ದರು.

    ಮಾ.1 ರಂದು ಸರ್ದಾರ್ ಸೇವಾಲಾಲ್ ಜಯಂತಿ ಆಚರಿಸಲಾಗುವುದು. ಪ್ರತಿ ವರ್ಷದಂತೆ ಈ ಬಾರಿಯ ನಮ್ಮ ಜನಾಂಗದ ವತಿಯಿಂದ ಜಯಂತಿಯನ್ನು ಆಚರಿಸುತ್ತಿದ್ದೇವೆ. ಸಮಾಜದ ಎಲ್ಲರೂ ಭಾಗವಹಿಸಬೇಕು.

    | ಎಂ.ಸತೀಶ್, ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top