ಲೋಕಸಮರ 2024
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪಗೆ ಭರ್ಜರಿ ಸ್ವಾಗತ | ಹೂ ಮಳೆ ಸುರಿಸಿದ ಕಾರ್ಯಕರ್ತರು
CHITRADURGA NEWS | 25 MARCH 2024
ಚಿತ್ರದುರ್ಗ: ಭಾರೀ ಜಿದಾಜಿದ್ದಿನಿಂದ ಕೂಡಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೇಟ್ ಪಡೆದು ಮೊದಲ ಬಾರಿಗೆ ಚಿತ್ರದುರ್ಗ ನಗರ ಪ್ರವೇಶಿಸಿದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಧ್ಯಾಹ್ನ 2 ಗಂಟೆಗೆ ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ ಕಚೇರಿಗೆ ಆಗಮಿಸಲಿದ್ದಾರೆ ಎನ್ನುವ ಸುದ್ದಿ ತಿಳಿದು ನುರಾರು ಕಾರ್ಯಕರ್ತರು ಬಂದು ಜಮಾಯಿಸಿದ್ದರು. ಜೊತೆಗೆ ತಮಟೆ ಸದ್ದು ಜೋರಾಗಿತ್ತು.
ಇದನ್ನೂ ಓದಿ: ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ
ಚಂದ್ರಪ್ಪ ಅವರನ್ನು ಸ್ವಾಗತಿಸಲು ಸುಮಾರು 40 ಅಡಿ ಎತ್ತರದ ಬೃಹತ್ ಗಾತ್ರದ ಹೂ ಮಾಲೆಯನ್ನು ಕ್ರೇನ್ ಮೂಲಕ ಹಿಡಿದು ನಿಲ್ಲಿಸಲಾಗಿತ್ತು. ಮಧ್ಯಾಹ್ನ ಮೂರು ಗಂಟೆಗೆ ಚಂದ್ರಪ್ಪ ಬರುತ್ತಲೇ ಕಾರಿನಿಂದ ಇಳಿಸಿಕೊಂಡು ಹೆಗಲ ಮೇಲೆ ಹೊತ್ತು ನಡೆದ ಕಾರ್ಯಕರ್ತರು ಜೆಸಿಬಿಯ ಡ್ರೋಜರ್‍ನಲ್ಲಿ ನಿಲ್ಲಿಸಿದರು.
ಈ ವೇಳೆ ಜೆಸಿಬಿ ಕ್ರೇನ್‍ನಲ್ಲಿರುವ ಹೂ ಮಾಲೆಯ ಮಧ್ಯಕ್ಕೆ ಚಂದ್ರಪ್ಪ ಅವರನ್ನು ಕರೆದೊಯ್ದು ನಿಲ್ಲಿಸಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‍ಪೀರ್ ಸೇರಿದಂತೆ ಹಲವು ಕಾರ್ಯಕರ್ತರು ಸಾಥ್ ನೀಡಿದರು.
ಇದನ್ನೂ ಓದಿ: ಬಿ.ವೈ.ರಾಘವೇಂದ್ರ ವಿರುದ್ಧ ಚಿತ್ರದುರ್ಗದಲ್ಲಿ ದೂರು ದಾಖಲು
ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ಹಾಕುವ ಮೂಲಕ ಸಂಭ್ರಮಿಸಿದರು. ಆನಂತರ ಕಾಂಗ್ರೆಸ್ ಕಚೇರಿಯ ಒಳಗೆ ಪ್ರವೇಶಿಸಿ ಮುಖಂಡರು, ಮಾಧ್ಯಮದವರ ಜೊತೆಗೆ ಮಾತನಾಡಿ ನಂತರ ಹೊರಗೆ ಬಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ನಾನೀಗ ಮಧುಮಗ:
ಚಿತ್ರದುರ್ಗ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿ ಪ್ರವೇಶಿಸಿ ಬಿ.ಎನ್.ಚಂದ್ರಪ್ಪ ಅವರನ್ನು ಸ್ವಾಗತಿಸಿದ ಪರಿ ಕಂಡು ಚಂದ್ರಪ್ಪ ಮಾತು ಹೊರಡದಂತಾಗಿದ್ದರು.
ನಾನು ಈಗ ಮಧುಮಗ. ಮದುವೆಗೆ ಸಿದ್ಧತೆ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರೇ ಅಪ್ಪ, ಅಮ್ಮ, ಬಂಧುಗಳು. ಎಲ್ಲರೂ ಮಾಲೆ, ಹೂವು ಹಾಕಿ ಸಂಭ್ರಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಾಯನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ | ಅಂತಿಮ ಸಿದ್ಧತೆಗಳ ಪರಿಶೀಲನೆ