Connect with us

Lok Adalat; ನ್ಯಾಯಾಲಯದಲ್ಲಿ ಒಂದಾದ ದಂಪತಿಗಳು | ನಾವು ಒಂದಾಗಿ ಬಾಳುತ್ತೇವೆ

ನ್ಯಾಯಾಲಯದಲ್ಲಿ ಒಂದಾದ ದಂಪತಿಗಳು

ಮುಖ್ಯ ಸುದ್ದಿ

Lok Adalat; ನ್ಯಾಯಾಲಯದಲ್ಲಿ ಒಂದಾದ ದಂಪತಿಗಳು | ನಾವು ಒಂದಾಗಿ ಬಾಳುತ್ತೇವೆ

CHITRADURGA NEWS | 14 SEPTEMBER 2024

ಚಿತ್ರದುರ್ಗ: ಚಿತ್ರದುರ್ಗದ ನ್ಯಾಯಾಲಯ(court)ಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್‍ ಅದಾಲತ್(Lok Adalat) ನಲ್ಲಿ ಮುೂರು ಪ್ರತ್ಯೇಕ ಪ್ರಕರಣಗಳಲ್ಲಿ ದಂಪತಿಗಳು ಒಂದಾಗಿರುತ್ತಾರೆ.
ವೈವಾಹಿಕ ವಿವಾದಗಳಿಗೆ ಸಂಬಂಧಿಸಿದಂತೆ ಕಾರಣಾಂತರಗಳಿಂದ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ರಾಜೀ ಮುಖಾಂತರ ಸುಖಾಂತ್ಯವಾಗಿರುತ್ತದೆ.
ವಿಶೇಷವಾಗಿ ಪ್ರಧಾನ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ಸಿಜೆಎಂ ಇವರ ನ್ಯಾಯಾಲಯದಲ್ಲಿ  ವೈವಾಹಿಕ ಜೀವನಕ್ಕೆ ಸಂಬಂಧಿಸಿದ 2022ನೇ ಸಾಲಿನಲ್ಲಿ ದಾಖಲಾದ ಒಂದು ಪ್ರಕರಣ ಹಾಗೂ  2023ನೇ ಸಾಲಿನ ದಾಖಲಾದ ಒಂದು ಪ್ರಕರಣ ಹಾಗೂ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್‍ ನ್ಯಾಯಾಧೀಶರು, ನ್ಯಾಯಾಲಯದಲ್ಲಿ 2021ನೇ ಸಾಲಿನಲ್ಲಿ ದಾಖಲಾದ ಒಂದು ಪ್ರಕರಣವು ನ್ಯಾಯಾಧೀಶರು ಹಾಗೂ ವಕೀಲರ ಮನವೊಲಿಕೆಯಿಂದ ಈ ದಂಪತಿಗಳು ಮನಸ್ತಾಪ ಮರೆತು ರಾಜೀಯಾಗಿ ಜೀವನದಲ್ಲಿ ಒಂದಾಗಿ ಬಾಳುತ್ತೇವೆ ಎಂದು ಒಂದಾಗಿರುತ್ತಾರೆ.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಡಿ.ಮಮತ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಚೈತ್ರ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಸೇರಿದಂತೆ ಲೋಕ್ ಅದಾಲತ್ ನಲ್ಲಿ ವಕೀಲರು, ಸಾರ್ವಜನಿಕರು ಭಾಗವಹಿಸಿದ್ದರು.
Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version