ಹೊಳಲ್ಕೆರೆ
ಗಾಳಿ, ಮಳೆಗೆ ನೆಲಕ್ಕುರುಳಿದ ಬಾಳೆ | ರೈತರಿಂದ ಪರಹಾರಕ್ಕೆ ಮನವಿ
CHITRADURGA NEWS | 18 MAY 2024
ಹೊಳಲ್ಕೆರೆ: ಶುಕ್ರವಾರ ಸುರಿದ ಮಳೆ ಹಾಗೂ ವಿಪರೀತ ಗಾಳಿಗೆ ಹೊಳಲ್ಕೆರೆ ತಾಲೂಕು, ರಾಮಗಿರಿ ಹೋಬಳಿ, ರಾಮಗಿರಿ ಗೊಲ್ಲರಹಟ್ಟಿಯ ರಮೇಶ್ ಎಂಬುವವರ ಬಾಳೆ ಬೆಳೆ ಹಾಳಾಗಿದೆ.
1 ಎಕರೆ 08 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದು, ಬಿರುಗಾಳಿ ಹಾಗೂ ಮಳೆಯಿಂದ ಬಾಳೆ ಬೆಳೆ ನಾಶಗೊಂಡಿದ್ದು, ಸುಮಾರು 8 ಲಕ್ಷ ರೂ. ನಷ್ಟವಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
ಇದೇ ಗ್ರಾಮದ ಸಂತೋಷ್ ಎಂಬುವವರಿಗೆ ಸೇರಿದ 1 ಎಕರೆ 21 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆದಿದ್ದು ಅದೂ ಕೂಡಾ ಮಳೆಯಿಂದ ನೆಲಕ್ಕೆ ಮಲಗಿದೆ. ಕೊಳವೆ ಬಾವಿಯಲ್ಲಿ ನೀರಿಲ್ಲದ ಕಾರಣ ಟ್ಯಾಂಕರ್ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲಾಗಿತ್ತು.
ಈಗ ಒಂದು ಕಡೆ ಮಳೆ ಬಂದ ಖುಷಿಯಿದ್ದರೆ, ಮತ್ತೊಂದು ಕಡೆ ಬೆಳೆದ ಬಾಳೆಯೇ ಹಾಳಾದ ದುಃಖ ರೈತರಲ್ಲಿದೆ.
ಇದನ್ನೂ ಓದಿ: ಜಯದೇವ ಗುರುಗಳ ನೆಚ್ಚಿನ ಶಿಷ್ಯ ಜಯವಿಭವ ಸ್ವಾಮೀಜಿ | ಮುರುಘಮಠದಲ್ಲಿ ಸ್ಮರಣೋತ್ಸವ
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಬೆಳೆ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.