Close Menu
    Facebook X (Twitter) Instagram
    Chitradurga News-Kannada News
    Facebook X (Twitter) Instagram
    Chitradurga News-Kannada News
    ಮುಖ್ಯ ಸುದ್ದಿ

    ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಶುಲ್ಕ | ಬೆಸ್ಕಾಂ ಎದುರು ರೈತರ ಪ್ರತಿಭಟನೆ

    News Desk Chitradurga NewsBy News Desk Chitradurga News15 May 2025Updated:15 May 2025No Comments2 Mins Read
    ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಶುಲ್ಕ | ಬೆಸ್ಕಾಂ ಎದುರು ರೈತರ ಪ್ರತಿಭಟನೆ

    CHITRADURGA NEWS | 16 MAY 2025

    ಚಿತ್ರದುರ್ಗ: ರಾಜ್ಯ ಸರ್ಕಾರ ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್‍ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಸಲು 10 ಸಾವಿರ ರೂ.ಗಳ ಶುಲ್ಕ ನಿಗಧಿಪಡಿಸಿರುವುದನ್ನು ವಿರೋಧಿಸಿ ತಿಪ್ಪಜ್ಜಿ ಸರ್ಕಲ್ ಸಮೀಪವಿರುವ ಬೆಸ್ಕಾಂ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಪ್ರತಿಭಟನೆ ನಡೆಸಿ ಕಾರ್ಯಪಾಲಕ ಇಂಜಿನಿಯರ್‍ ಗೆ ಮನವಿ ಸಲ್ಲಿಸಲಾಯಿತು.

    Also Read: ರಾಜವೀರ ಮದಕರಿ ನಾಯಕ ಪುಣ್ಯಸ್ಮರಣೆ | ಶ್ರೀರಂಗಪಟ್ಟಣದಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

    ಪ್ರವಾಸಿ ಮಂದಿರದಿಂದ ಇಂಧನ ಸಚಿವರ ಅಣಕು ಶವಯಾತ್ರೆ ಮೂಲಕ ಬೆಸ್ಕಾಂಗೆ ಆಗಮಿಸಿದ ರೈತರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

    ವಿದ್ಯುತ್ ಕ್ಷೇತ್ರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿಕರಣಗೊಳಿಸಲು ನಡೆಸುತ್ತಿರುವ ಹುನ್ನಾರ ನಿಲ್ಲಬೇಕು. ಅಕ್ರಮ-ಸಕ್ರಮ ಅಡಿಯಲ್ಲಿ ರೈತರಿಗೆ ಈ ಹಿಂದೆ ವಿದ್ಯುತ್ ಪರಿಕರಗಳನ್ನು ನೀಡಿದಂತೆ ಉಚಿತ ವಿದ್ಯುತ್ ಕಲ್ಪಿಸಬೇಕು. ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ಕೈಬಿಡಬೇಕು.

    ಸರ್ಕಾರ ಟಿ.ಸಿ.ಗಳನ್ನು ಮಾತ್ರ ನೀಡುತ್ತಿದ್ದು, ಕಂಬ ಮತ್ತು ವೈರ್‍ಗಳನ್ನು ರೈತರೆ ಸ್ವಂತ ಖರ್ಚಿನಿಂದ ಜೋಡಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರವೇ ವಿತರಿಸಬೇಕು.

    ಜಮೀನಿನಲ್ಲಿ ವಾಸವಾಗಿರುವ ರೈತರಿಗೆ, ವಿದ್ಯಾರ್ಥಿಗಳಿಗೆ, ಹೈನುಗಾರಿಕೆ ನಡೆಸುವವರಿಗೆ ಸಂಜೆ ಆರು ಗಂಟೆಯಿಂದ ಬೆಳಿಗ್ಗೆ 6 ಗಂಟೆತನಕ ಸಮರ್ಪಕ ವಿದ್ಯುತ್ ನೀಡಬೇಕು.

    Also Read: ಚಿತ್ರದುರ್ಗಕ್ಕೆ ಮತ್ತೊಂದು ರೈಲು ಮಾರ್ಗ | ಮಲೆನಾಡಿನಿಂದ ಅರೆ ಮಲೆನಾಡು ಸಂಪರ್ಕ | 1825 ಕೋಟಿ ವೆಚ್ಚ

    11 ಕೆ.ವಿ. ಮತ್ತು ಎಲ್.ಟಿ.ಲೈನ್‍ಗಳಲ್ಲಿ ಹದಿನೈದು ವರ್ಷಗಳಿಂದ ಬೆಳೆದಿರುವ ಗಿಡ ಮರಗಳಿಂದಾಗಿ ಕರೆಂಟ್ ತಾಗಿ ಲೈನ್ ವೈರ್‍ಗಳು ಸುಟ್ಟು ಹೋಗುತ್ತಿವೆ. ಕೃಷಿ ಪಂಪ್‍ಸೆಟ್, ಟಿ.ಸಿ.ಮೋಟಾರ್, ಕೇಬಲ್‍ಗಳು ಸುಟ್ಟು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಗಿಡ-ಮರಗಳನ್ನು ಕೂಡಲೆ ತೆರವುಗೊಳಿಸುವಂತೆ ರೈತರು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ್ ಲಿಂಗಾವರಹಟ್ಟಿ, ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ, ಮಹಿಳಾಧ್ಯಕ್ಷೆ ಲೋಲಾಕ್ಷಮ್ಮ, ಜಿಲ್ಲಾ ಕಾರ್ಯಾಧ್ಯಕ್ಷ ಓಂಕಾರಪ್ಪ, ಸಿ.ಡಿ.ನಿಲಿಂಗಪ್ಪ, ತಿಪ್ಪೇಸ್ವಾಮಿ, ನಾಗರಾಜ್, ಶ್ರೀನಿವಾಸ್, ರಂಗಸ್ವಾಮಿ, ಜಯಲಕ್ಷ್ಮಿ, ಮಂಜುಳ, ನಾಗರಾಜ್, ರುದ್ರಮುನಿ, ತಿಪ್ಪೇಸ್ವಾಮಿ, ಶಶಿಕಲ, ಸೈಯದ್ ಮಮ್ತಾಜ್, ಬಸವರಾಜರೆಡ್ಡಿ, ಮಹೇಶ್ವರಿ, ಮಂಜುನಾಥ ಸೇರಿದಂತೆ ರೈತರು ಭಾಗವಹಿಸಿದ್ದರು.

     

    ________________________________________________

    ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

    ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

    ________________________________________________

    ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

    » Chitradurga News gmail: chitradurganews23@gmail.com

    » Whatsapp Number:  9008943015

    ________________________________________________

    Agricultural Pumpset Bescom Central Government Chitradurga Chitradurga news Chitradurga Updates Farmers Fees Kannada Latest News Kannada News protest Smart Meter State Government ಕನ್ನಡ ನ್ಯೂಸ್ ಕನ್ನಡ ಲೇಟೆಸ್ಟ್ ನ್ಯೂಸ್ ಕನ್ನಡ ಸುದ್ದಿ ಕೃಷಿ ಪಂಪ್‌ಸೆಟ್‌ ಕೇಂದ್ರ ಸರ್ಕಾರ ಚಿತ್ರದುರ್ಗ ಚಿತ್ರದುರ್ಗ ನ್ಯೂಸ್ ಪ್ರತಿಭಟನೆ ಬೆಸ್ಕಾಂ ರಾಜ್ಯ ಸರ್ಕಾರ ರೈತರು ಶುಲ್ಕ ಸ್ಮಾರ್ಟ್ ಮೀಟರ್
    News Desk Chitradurga News
    • Website

    Related Posts

    ಬಿ.ಎಸ್ಸಿ, ಜಿಎನ್‌ಎಂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

    24 November 2026

    ಸ್ವಯಂ ಉದ್ಯೋಗ, ವಾಹನ ಖರೀದಿಗೆ ಸಹಾಯಧನ | ಅರ್ಜಿ ಅಹ್ವಾನ

    24 November 2026

    ನಿರುದ್ಯೋಗಿಗಳಿಗೆ ಸಿಹಿಸುದ್ದಿ | ಚಿತ್ರದುರ್ಗದಲ್ಲಿ ಮಿನಿ ಉದ್ಯೋಗ ಮೇಳ

    24 November 2026
    Leave A Reply Cancel Reply

    Categories
    Dina Bhavishya Life Style ಅಡಕೆ ಧಾರಣೆ ಕ್ರೈಂ ಸುದ್ದಿ ಚಳ್ಳಕೆರೆ ತಾಲೂಕು ನಿಧನವಾರ್ತೆ ಮಾರುಕಟ್ಟೆ ಧಾರಣೆ ಮುಖ್ಯ ಸುದ್ದಿ ಮೊಳಕಾಳ್ಮೂರು ಲೋಕಸಮರ 2024 ಸಂಡೆ ಸ್ಪಷಲ್ ಹಿರಿಯೂರು ಹೊಳಲ್ಕೆರೆ ಹೊಸದುರ್ಗ

    Facebook X (Twitter) Instagram Pinterest
    © 2026 ThemeSphere. Designed by ThemeSphere.

    Type above and press Enter to search. Press Esc to cancel.