Connect with us

    ನಾಯಕನಹಟ್ಟಿ ಜಾತ್ರೆಯ ದೃಶ್ಯ ವೈಭವ | ಇಡೀ ಜಾತ್ರೆ ಕಣ್ತುಂಬಿಕೊಳ್ಳುವ ಸುಂದರ ಪೋಟೋಗಳು

    Nayakanahatty jatre

    ಮುಖ್ಯ ಸುದ್ದಿ

    ನಾಯಕನಹಟ್ಟಿ ಜಾತ್ರೆಯ ದೃಶ್ಯ ವೈಭವ | ಇಡೀ ಜಾತ್ರೆ ಕಣ್ತುಂಬಿಕೊಳ್ಳುವ ಸುಂದರ ಪೋಟೋಗಳು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 16 MARCH 2025

    ಮಾಡಿದಷ್ಟು ನೀಡು ಭಿಕ್ಷೆ ಎಂಬ ಸಂದೇಶ ಸಾರಿದ ಮಹಾತ್ಮಾ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

    Nayakanahatty jatre devoties

    ಜಾತ್ರೆಯ ಬಿಸಿಲಿನ ಝಳಕ್ಕೆ ದೇವಸ್ಥಾನದ ಮುಂದೆ ಚಪ್ಪರ

    ಸುಡು ಬಿಸಿಲ ನಡುವೆ ಲಕ್ಷಾಂತರ ಭಕ್ತರು ವೈಭವದ ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಸಾಕ್ಷೀಯಾಗಿ ಭಕ್ತಿ ಭಾವ ಸಮರ್ಪಿಸಿದರು.

    ಇದನ್ನೂ ಓದಿ: ಜನಸಾಗರದಲ್ಲಿ ರಾಜಗಾಂಭೀರ್ಯದಲ್ಲಿ ಸಾಗಿದ ನಾಯಕನಹಟ್ಟಿ ತೇರು | ಅದ್ದೂರಿ ರಥೋತ್ಸವಕ್ಕೆ ಅಸಂಖ್ಯ ಭಕ್ತರು

    Nayakanahatty jatre wibes

    ಅಜ್ಜಿ, ಮಗ, ಮೊಮ್ಮಗ ಎಲ್ಲರೂ ಜಾತ್ರೆಗೆ ಬಂದೀವಿ

    ಶ್ರೀಗುರು ತಿಪ್ಪೇರುದ್ರಸ್ವಾಮಿಯ ಹೊರಮಠ ಹಾಗೂ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

    ಮಧ್ಯಾಹ್ನ 2 ಗಂಟೆಯಿಂದಲೇ ಒಳಮಠದಲ್ಲಿ ಮುಖ್ಯ ಅರ್ಚಕರ ನೇತೃತ್ವದಲ್ಲಿ ಉತ್ಸವ ಮೂರ್ತಿ ಹೊತ್ತು ತರುವ ಪಲ್ಲಕ್ಕಿಯನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಸಿಂಗರಿಸಲಾಯಿತು. ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ, ರಥೋತ್ಸವದ ಬಳಿ ತಂದು ಸಜ್ಜುಗೊಳಿಸಲಾಯಿತು.

    Nayakanahatty jatre wibes

    ಕೊಬ್ಬರಿ, ಕಾಯಿ, ಧವನ, ಹಣ್ಣು ಮಾರಾಟದ ಭರಾಟೆ

    ಇದನ್ನೂ ಓದಿ: ನಾಯಕನಹಟ್ಟಿ ಮುಕ್ತಿ ದೊಡ್ಡ ಮೊತ್ತಕ್ಕೆ ಹರಾಜು | ಈ ಬಾರಿ ಯಾರಿಗೆ ಒಲಿಯಿತು ಮುಕ್ತಿ ಭಾವುಟ ?

    ಸಂಜೆ 4.05 ರ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ಅಸಂಖ್ಯ ಭಕ್ತರು ತಿಪ್ಪೇರುದ್ರಸ್ವಾಮಿ ರಥವನ್ನು ರಥ ತೇರುಬೀದಿಯಿಂದ ಹೊರ ಮಠದವರೆಗೆ ಎಳೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

    Nayakanahatty jatre

    ಕೊಬ್ಬರಿ ಸುಟ್ಟು ಹರಕೆ ತೀರಿಸಿಕೊಂಡ ಭಕ್ತರು

    ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ಧವನ, ಹೂವು, ಚೂರು ಬೆಲ್ಲವನ್ನು ಸಮರ್ಪಿಸಿ ತಮ್ಮ ಇಷ್ಠಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

    Nayakanahatty jatre wibes

    ಮಂಡಕ್ಕಿ, ಬೆಂಡು, ಬತಾಸ್, ಮೈಸೂರುಪಾಕ್ ಇಲ್ಲದಿದ್ರೆ ಜಾತ್ರೆನೇ ಅಲ್ಲ

    ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ..!!?

    ಜಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ ಬಾಬು,

    Nayakanahatty jatre wibes

    ಹಟ್ಟಿ ತಿಪ್ಪೇಶನ ಜಾತ್ರೆಗೆ ಬಂದು ಸೇರಿದ ಭಕ್ತಗಣ

    ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕವಿತಾ ಮನ್ನಿಕೇರಿ, SP ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನ್ ಸೇರಿದಂತೆ ಮತ್ತಿತರರು ಇದ್ದರು.

    Nayakanahatty jatre wibes

    ಧಗಧಗಿಸಿದ ಕೊಬ್ಬರಿಯ ಅಗ್ನಿಕುಂಡ

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top