ಹೊಳಲ್ಕೆರೆ
ವಿಜ್ಞಾನಿಗಳಾದ ಪುಟಾಣಿಗಳು | ಸ್ನೇಹ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

CHITRADURGA NEWS | 02 MARCH 2025
ಹೊಳಲ್ಕೆರೆ: ಪಟ್ಟಣದ ಹೊರ ವಲಯದ ಸ್ನೇಹ ಪಬ್ಲಿಕ್ ಶಾಲೆಯಲ್ಲಿ ವಿಶ್ವ ವಿಜ್ಞಾನ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಸ್ನೇಹ ಅನ್ವೇಷಣಾ ಹಮ್ಮಿಕೊಳ್ಳಲಾಗಿತ್ತು.
Also Read: ಅತಿಥಿ ಶಿಕ್ಷಕರ ನೇಮಕಾತಿ | ನೇರ ಸಂದರ್ಶನಕ್ಕೆ ಆಹ್ವಾನ
ಇಸ್ರೋದ ಹಿರಿಯ ವಿಜ್ಞಾನಿ ಸೋಮೇಶ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವ ಕಾರ್ಯವನ್ನು ಶಿಕ್ಷಕರಾದವರು ಮಾಡಬೇಕಿದೆ. ಬಹುತೇಕ ವಿದ್ಯಾರ್ಥಿಗಳು ಬರೀ ಇಂಜಿನಿಯರಿಂಗ್, ದಂತ, ವೈದ್ಯಕೀಯ, ಐಟಿಐ, ಪಾಲಿಟೆಕ್ನಿಕ್ ಎಂದು ಇದರ ಕಡೆ ಹೋಗುತ್ತಿದ್ದಾರೆ.
ವಿಜ್ಞಾನದ ಕಡೆ ಯಾರು ಬರುತ್ತಿಲ್ಲ ಮಕ್ಕಳಿಗೆ ಚಿಕ್ಕನಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬರಿಸುವಂತ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಸ್ನೇಹ ಅನ್ವೇಷಣಾವನ್ನು ಜಿಸಿಟಿಇ ಯ ಮಾಜಿ ಜಂಟಿ ನಿರ್ದೇಶಕ ಗುರುಪ್ರಸಾದ್ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ಹಾಕಲು ಈ ರೀತಿಯ ವಿಜ್ಞಾನ ವಸ್ತು ಪ್ರದರ್ಶನ ವೇದಿಕೆಯಾಗಿದೆ. ಇದರಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಅಡಗಿರುವ ವಿಶಿಷ್ಠವಾದ ಜ್ಞಾನ ಹೊರಬೀಳಲಿದೆ ಎಂದರು.
Also Read: ಬೃಹತ್ ಉದ್ಯೋಗ ಮೇಳ | ಎಷ್ಟು ಜನರಿಗೆ ಕೆಲಸ ಸಿಕ್ತು?
ವಿಜ್ಞಾನ ಪೌಂಡೇಷೇನ್‍ನ ಕಾರ್ಯದರ್ಶಿ ಹೆಚ್.ಎಸ್.ಟಿ.ಸ್ವಾಮಿ ಮಾತನಾಡಿದರು.
ಈ ವೇಳೆ ಶಾಲೆಯ ಮಕ್ಕಳು ಸುಮಾರು 250ಕ್ಕೂ ಹೆಚ್ಚು ವಿವಿಧ ರೀತಿಯ ಆವಿಷ್ಕಾರಗಳ ಮಾದರಿ ಮಾಡಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದಲ್ಲದೆ ಅದರ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
Also Read: Kannada Novel: 22. ಜಂಗಮಯ್ಯರಲ್ಲಿ ಬಿಕ್ಕಟ್ಟು
ಸ್ನೇಹ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವಾಸಂತಿ, ಹೊಳಲ್ಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಭಾಗವಹಿಸಿದ್ದರು.
