ಮುಖ್ಯ ಸುದ್ದಿ
ABVPಯಿಂದ ಅರಳುವ ಪ್ರತಿಭೆ ರಾಜ್ಯಮಟ್ಟದ ಬರಹಗಾರರ ಸಮಾವೇಶ

Published on
CHITRADURGA NEWS | 25 FEBRUARY 2025
ಚಿತ್ರದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ABVP) ಕರ್ನಾಟಕ ವತಿಯಿಂದ ಕೋಟೆನಾಡು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ಬರಹಗಾರರ ಶಿಬಿರ-2025 ‘ಅರಳುವ ಪ್ರತಿಭೆ’ ಹಮ್ಮಿಕೊಳ್ಳಲಾಗಿದೆ.
ನಗರದ ಐತಿಹಾಸಿಕ ಮುರುಘಾ ಮಠದಲ್ಲಿ ಮಾರ್ಚ್ 7,8 ಮತ್ತು 9 ರಂದು ಮೂರು ದಿನಗಳ ಕಾಲ ಈ ಶಿಬಿರ ನಡೆಯಲಿದೆ.
ಇದನ್ನೂ ಓದಿ: ತಹಶೀಲ್ದಾರ್ ಡಾ.ನಾಗವೇಣಿ ವರ್ಗಾವಣೆ | ಚಿತ್ರದುರ್ಗಕ್ಕೆ ನೂತನ ತಹಶೀಲ್ದಾರ್
- ಶಿಬಿರದಲ್ಲಿ ಕಥೆ, ಕವನ, ಕಾದಂಬರಿ, ಪ್ರಬಂಧ, ಲೇಖನಗಳ ಕುರಿತು ತರಬೇತಿ ನೀಡಲಾಗುತ್ತದೆ.
- ಸಾಹಿತ್ಯ, ಪತ್ರಿಕೋದ್ಯಮ, ಬ್ಲಾಗಿಂಗ್ ಕುರಿತು ಪ್ರಾಯೋಗಿಕ ವಿವರಣ, ಈ ಶಿಬಿರಕ್ಕೆ 18 ರಿಂದ 30 ವಯೋಮಾನದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಶುಭ ಸುದ್ದಿ | ಚಿತ್ರದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ
- ಶಿಬಿರದಲ್ಲಿ ಅನುಭವಿ, ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
- ಮೂರು ದಿನಗಳ ಕಾಲ ನಡೆಯುವ ಈ ಶಿಬಿರಕ್ಕೆ 100 ಶುಲ್ಕ ನಿಗಧಿ ಮಾಡಲಾಗಿದೆ.
- 2025 ಮಾರ್ಚ್ 7 ರಂದು ಮಧ್ಯಾಹ್ನ 12 ಗಂಟೆಗೆ ಶಿಬಿರಾರ್ಥಿಗಳು ಆಗಮಿಸಬೇಕು. ಅಂದು ಸಂಜೆ 4 ಗಂಟೆಗೆ ಉದ್ಘಾಟನೆಯಾಗಲಿದೆ.
- ಶಿಬಿರಕ್ಕೆ 75 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ನೊಂದಣಿ ಮಾಡಿಸಿಕೊಂಡವರಿಗೆ ಆಧ್ಯತೆ ನೀಡಲಾಗುತ್ತದೆ.
ಮಾರ್ಚ್ 4 ನೊಂದಣಿಗೆ ಕೊನೆಯ ದಿನವಾಗಿದ್ದು, ನೊಂದಣಿಯನ್ನು ಆನ್‍ಲೈನ್ ಅಥವಾ ದೂರವಾಣಿ ಕರೆ ಮೂಲಕವೂ ಮಾಡಬಹುದಾಗಿದೆ ಎಂದು ಎಬಿವಿಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಡಿ.ಸುಧಾಕರ್ | ಪತ್ರದ ಪೂರ್ಣ ವಿವರ ಇಲ್ಲಿದೆ
ಹೆಚ್ಚಿನ ಮಾಹಿತಿಗೆ 6363044610/7760515161/7337669656/9986572664 ಸಂಪರ್ಕಿಸಬಹುದಾಗಿದೆ.
Continue Reading
Related Topics:ABVP, Aralu Talent, AraluPratibhe, Article, Chitradurga news, featured, Kannada Latest News, Kannada News, Muruga Math, national highway, writer, ಅರಳು ಪ್ರತಿಭೆ, ಎಬಿವಿಪಿ, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ ನ್ಯೂಸ್, ಬರಹಗಾರ, ಮುರುಘಾ ಮಠ, ರಾಷ್ಟ್ರೀಯ ಹೆದ್ದಾರಿ, ಲೇಖನ

Click to comment