Connect with us

    ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ | 9 ದಿನಗಳ ಕಾಲ ಭರಮಸಾಗರದಲ್ಲಿ ಹಬ್ಬದ ಸಂಭ್ರಮ

    Taralabalu hunnime

    ಮುಖ್ಯ ಸುದ್ದಿ

    ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ | 9 ದಿನಗಳ ಕಾಲ ಭರಮಸಾಗರದಲ್ಲಿ ಹಬ್ಬದ ಸಂಭ್ರಮ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 04 FEBRUARY 2025

    ಚಿತ್ರದುರ್ಗ: ಸಿರಿಗೆರೆ ತರಳಬಾಳು ಬೃಹನ್ಮಠದಿಂದ ನಡೆಯುವ ತರಳಬಾಳು ಮಹೋತ್ಸವಕ್ಕೆ ದಾವಣಗೆರೆ-ಚಿತ್ರದುರ್ಗ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭರಮಸಾಗರ ನವ ವಧುವಿನಂತೆ ಸಿಂಗಾರಗೊಂಡಿದೆ.

    ತರಳಬಾಳು ಹುಣ್ಣಿಮೆ ಮಹೋತ್ಸವದ ಐಕಾನ್ ಎಂಬಂತಿರುವ ಮಹಾದ್ವಾರ, ಮಂಟಪ ಸಿದ್ಧಗೊಂಡಿದ್ದು, ಸಿರಿಗೆರೆಯಿಂದ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೆಲ ಹೊತ್ತಿನಲ್ಲೇ ಭವ್ಯ ಮೆರವಣಿಗೆ ಮೂಲಕ ಭರಮಸಾಗರದತ್ತ ಪ್ರಯಾಣ ಬೆಳಸಲಿದ್ದಾರೆ.

    ಶ್ರೀಗಳು ಹಾದು ಹೋಗುವ ಮಾರ್ಗದಲ್ಲಿ ಸಿಗುವ ಎಲ್ಲ ಹಳ್ಳಿಗಳಲ್ಲಿ ಗುರುಗಳನ್ನು ಸ್ವಾಗತಿಸಿ, ಗೌರವಿಸಿ, ಬೀಳ್ಕೊಡಲು ಸಿದ್ಧತೆಗಳು ಭರದಿಂದ ನಡೆದಿವೆ.

    ಇದನ್ನೂ ಓದಿ: ತರಳಬಾಳು ಮಠ ಸರ್ವಜನಾಂಗದ ಶಾಂತಿಯ ತೋಟ | ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಫೆಬ್ರವರಿ 4 ರಿಂದ 12ರವರೆಗೆ ನಡೆಯುವ ಮಹೋತ್ಸವದಲ್ಲಿ ಪ್ರತಿ ದಿನ ಸಂಜೆ ಮತ್ತು ಬೆಳಗ್ಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ವಿವಿಧೆಡೆಯಿಂದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಮೊದಲ ದಿನ ಶಿಕ್ಷಣ, ಕಲೆ, ಸಂಸ್ಕøತಿಗಳಿಗೆ ಮೀಸಲಾಗಿದ್ದರೆ, ಫೆ.5 ಮಹಿಳೆ ಮತ್ತು ಸಮಾಜ, ಫೆ.6 ರಾಜಕಾರಣ ಮತ್ತು ಸಮಾಜ, ಫೆ.7 ಶರಣ ಸಾಹಿತ್ಯ ಮತ್ತು ಸಮಾಜ, ಫೆ.8 ನ್ಯಾಯಾಲಯ ಮತ್ತು ಸಮಾಜ, ಫೆ.9 ಆರೋಗ್ಯ ಮತ್ತು ಸಮಾಜ ಫೆ.10 ಸಮೂಹ ಮಾಧ್ಯಮ ಮತ್ತು ಸಮಾಜ, ಫೆ.11 ರಂದು ಕೃಷಿ ಮತ್ತು ಜಲ ಸಂರಕ್ಷಣೆ, ಫೆ.12 ರಂದು ಧರ್ಮ – ವಿಜ್ಞಾನ – ಸಮಾಜ ವಿಚಾರವಾಗಿ ಚಿಂತನೆಗಳು ನಡೆಯಲಿವೆ.

    ಇದನ್ನೂ ಓದಿ: ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ | ಮೂರು ದಿನ ಸರಳ ಆಚರಣೆ

    ಫೆಬ್ರವರಿ 12 ಬುಧವಾರ ಬೆಳಗ್ಗೆ 8ಕ್ಕೆ ಭರಮಸಾಗರದ ವಿವಿಧ ಬೀದಿಗಳಲ್ಲಿ ಪ್ರಭಾತ್‍ಪೇರಿ, ಶಿವಧ್ವಜಾರೋಹಣ, 10 ಗಂಟೆಗೆ ಕುಸ್ತಿ ಪಂದ್ಯಾವಳಿ ನಡೆಯಲಿವೆ. ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಶ್ರೀಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಲಿದೆ.

    9 ದಿನ ಭಾಗವಹಿಸುವ ಗಣ್ಯರ ವಿವರ:

    ಫೆ.4 ಮಂಗಳವಾರ ಸಂಜೆ 6:30ಕ್ಕೆ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು, ಎಂ.ಬಿ.ಪಾಟೀಲ್, ಮಧು ಬಂಗಾರಪ್ಪ, ಡಿ.ಸುಧಾಕರ್, ಡಾ.ಎಂ.ಚಂದ್ರಪ್ಪ, ಟಿ.ವೆಂಕಟೇಶ್, ರವಿಕುಮಾರ್, ಚಿತ್ರನಟ ಡಾಲಿ ಧನಂಜಯ್, ಕುಲಪತಿ ಬಿಡಿ ಕುಂಬಾರ ಭಾಗವಹಿಸಲಿದ್ದಾರೆ.

    ಫೆ.5ರ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ಲತಾ ಮಲ್ಲಿಕಾರ್ಜುನ್, ಉಮಾಶ್ರೀ, ನಾಗಲಕ್ಷ್ಮೀ ಚೌದರಿ, ಜಿ.ಆರ್.ಜೆ.ದಿವ್ಯಪ್ರಭು, ಶಾಲಿನಿ ಶ್ರೀಶೈಲ ದೊಡ್ಡಮನಿ, ಡಾ.ನಾಗಪುಷ್ಪಲತಾ ಭಾಗವಹಿಸಲಿದ್ದು, ಡಾ.ಬಿ.ಟಿ.ಕವಿತಾ, ಎಂ.ಎಸ್.ಆಶಾದೇವಿ, ಹಾಸ್ಯ ಭಾಷಣಕಾರರಾದ ಸಂಧ್ಯಾಶೆಣೈ ಉಪನ್ಯಾಸ ನೀಡಲಿದ್ದಾರೆ.

    ಇದನ್ನೂ ಓದಿ: ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ 

    ಫೆ.6ರ ಮೌಲಾನ ಬಿ.ಎ ಇಬ್ರಾಹಿಂ ಸಖಾಫಿ, ಬಿ.ವೈ.ವಿಜಯೇಂದ್ರ, ಗೋವಿಂದ ಕಾರಜೋಳ, ಕೆ.ಆರ್.ರಮೇಶ್‍ಕುಮಾರ್, ಮುಖ್ಯಮಂತ್ರಿ ಚಂದ್ರು, ಬಿ.ಜಿ.ಗೋವಿಂದಪ್ಪ, ಎಸ್.ಎಲ್.ಬೋಜೇಗೌಡ, ಕೆ.ಎಸ್.ಬಸವಂತಪ್ಪ, ಎಚ್.ಕೆ.ಸುರೇಶ್ ಭಾಗವಹಿಸಲಿದ್ದಾರೆ. ಎಚ್.ಡಿ.ತಮ್ಮಯ್ಯ, ವೀರೇಂದ್ರ ಪಪ್ಪಿ, ಬಿ.ದೇವೇಂದ್ರಪ್ಪ, ಧನಂಜಯ ಸರ್ಜಿ, ಪ್ರಕಾಶ್ ಕೋಳಿವಾಡ, ಮಿಮಿಕ್ರಿ ಗೋಪಿ ಉಪನ್ಯಾಸ ನೀಡಲಿದ್ದಾರೆ.

    Bharamasagara Taralabalu Hunnime

    ತರಳಬಾಳು ಹುಣ್ಣಿಮೆ ಮಹೋತ್ಸವ

    ಫೆ.7ರ ಶುಕ್ರವಾರ ಧಾರವಾಡ ಶ್ರೀ ಮುರುಘಾ ಮಠದ ಮು.ನಿ.ಪ್ರ.ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಬೆಂಗಳೂರು ಬೇಲಿ ಮಠದ ಶ್ರೀ ಮ.ನಿ.ಪ.ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿಯವರು, ಡಾ.ಹಂಪಾ ನಾಗರಾಜಯ್ಯ, ಗೊ.ರು.ಚನ್ನಬಸಪ್ಪ, ಡಾ.ಶಿವಾನಂದ ಕಣವಿ, ಡಾ.ಮಾಂತೇಶ್‍ಬೀಳಗಿ, ಡಾ.ಬಿ.ರಾಜಶೇಖರಪ್ಪ, ಡಾ.ರಾಜಶೇಖರ ಜಮದಂಡಿ ಆಗಮಿಸಲಿದ್ದಾರೆ. ಡಾ.ಮಹಾಂತೇಶ್ ಬಿರಾದಾರ, ಅಶೋಕ್ ದೊಮ್ಮಲೂರು ಉಪನ್ಯಾಸ ನೀಡಲಿದ್ದಾರೆ.

    ಇದನ್ನೂ ಓದಿ: ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಿಸಿ ರಸ್ತೆ | ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ

    ಫೆ.8ರ ಶನಿವಾರ ನ್ಯಾ.ಎನ್.ಸಂತೋಷ್ ಹೆಗಡೆ, ಪ್ರಭಾಕರ ಶಾಸ್ತ್ರಿ, ಕೃಷ್ಣ ಎಸ್.ದೀಕ್ಷಿತ್, ವೇದವ್ಯಾಸಾಚಾರ್ ಶ್ರೀಶಾನಂದ ಆಗಮಿಸಲಿದ್ದಾರೆ.
    ಫೆ.9ರ ಭಾನುವಾರ ಹರಿಹರದ ಶ್ರೀ ವಚನಾನಂದ ಸ್ವಾಮೀಜಿ, ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಡಾ.ಸಿ.ಎನ್.ಮಂಜುನಾಥ್, ಡಾ.ಪ್ರಭಾ ಮಲ್ಲಿಕಾರ್ಜುನ್, ಡಾ.ಶರಣ್ ಪಾಟೀಲ್, ಎಂ.ಎಸ್.ದಿವಾಕರ್, ಡಾ.ಅಬ್ದುಲ್‍ಬಷೀರ್, ಕೊಗಳಿ ಕೊಟ್ರೇಶ್ ಆಗಮಿಸಲಿದ್ದಾರೆ.

    ಫೆ.10ರ ಸೋಮವಾರ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಪಬ್ಲಿಕ್ ಟಿ.ವಿಯ ಎಚ್.ಆರ್.ರಂಗನಾಥ್, ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ, ಡಾ.ಬಿ.ಆರ್.ರವಿಕಾಂತ್‍ಗೌಡ, ಡಾ.ಜಿ.ಎಂ.ಗಂಗಾಧರಸ್ವಾಮಿ, ಬಿ.ಪಿ.ಹರೀಶ್, ಕೆ.ಎಸ್.ನವೀನ್, ಬೆಳ್ಳಿಪ್ರಕಾಶ್, ಎಚ್.ಪಿ.ರಾಜೇಶ್, ಆಗಮಿಸಲಿದ್ದು, ಟಿ.ವಿ.9 ರಂಗನಾಥ್ ಭಾರಧ್ವಜ್, ಎಂ.ಎಸ್.ರಾಘವೇಂದ್ರ, ಯತೀಶ್‍ಚಂದ್ರ, ಎಂ.ಎಸ್.ಶರತ್ ಉಪನ್ಯಾಸ ನೀಡಲಿದ್ದಾರೆ.

    ಇದನ್ನೂ ಓದಿ: ದಾಳಿಂಬೆ, ‌ಮಾವು, ಬಾಳೆ ಸೂಕ್ಷ್ಮ ನೀರಾವರಿ ಅಳವಡಿಕೆ ತರಬೇತಿ 

    ಫೆ.11ರ ಮಂಗಳವಾರ ಮಹಾರಾಷ್ಟ್ರದ ಕನ್ನೇರಿ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮೀಜಿ ಹಾಗೂ ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಬಿ.ಎಸ್.ಯಡಿಯೂರಪ್ಪ, ಎನ್.ಚೆಲುವರಾಯಸ್ವಾಮಿ, ಡಾ.ರಾಜೇಂದ್ರಸಿಂಗ್, ಎಚ್.ಆರ್.ಬಸವರಾಜಪ್ಪ, ಎಚ್.ಆಂಜನೇಯ, ಟಿ.ರಘುಮೂರ್ತಿ, ಎಸ್.ವಿ.ರಾಮಚಂದ್ರಪ್ಪ, ಮಲ್ಲಿಕಾರ್ಜುನ ಗುಂಗೆ ಭಾಗವಹಿಸಲಿದ್ದಾರೆ.

    ಸಮಾರೋಪ ಸಮಾರಂಭದಲ್ಲಿ ಮೈಸೂರು ಮಹಾರಾಜರು:

    ಫೆ.12ರ ಸಮಾರೋಪ ಸಮಾರಂಭದಲ್ಲಿ ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಿಸಿಎಂ ಡಿ.ಕೆ.ಶಿವಕುಮಾರ್, ಬಸವರಾಜ ಬೊಮ್ಮಾಯಿ, ಎಸ್.ಎಸ್.ಮಲ್ಲಿಕಾರ್ಜುನ್, ಜಿ.ಎಂ.ಸಿದ್ದೇಶ್ವರ, ಜೆ.ಸಿ.ಮಾಧುಸ್ವಾಮಿ, ಡಿ.ಜಿ.ಶಾಂತನಗೌಡ, ಯು.ಬಿ.ಬಣಕಾರ್, ಶಿವಗಂಗಾ ಬಸವರಾಜ್, ಡಾ. ಬಿ.ಎನ್.ಸುರೇಶ್, ಪ್ರೊ.ಎಂ.ಕೃಷ್ಣೇಗೌಡ, ಸುವರ್ಣ ನ್ಯೂಸ್ ಅಜಿತ್ ಹನುಮಕ್ಕನವರ್, ಡಾ.ಎಚ್.ಎಸ್.ಹರಿಶಂಕರ್ ಭಾಗವಹಿಸಲಿದ್ದಾರೆ.

    ಶ್ರೀಗಳು ಸಂಚರಿಸುವ ಮಾರ್ಗ.

    ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಫೆ.4ರ ಸೋಮವಾರ ಬೆಳಗ್ಗೆ 10 ಗಂಟೆಗೆ ಐಕ್ಯಮಂಟಪಕ್ಕೆ ಆಗಮಿಸಿ ಲಿಂ.ಶಿವಕುಮಾರ ಶ್ರೀಗಳ ಹಾಗೂ ಗುರುಶಾಂತೇಶ್ವರ ಶ್ರೀಗಳ ಕರ್ತೃ ಗದ್ದಿಗೆಗೆ ಪುಷ್ಪ ನಮನ ಸಲ್ಲಿಸಿ, ನಂತರ ಒಬ್ಬವ್ವನಾಗತಿಹಳ್ಳಿ, ಸಿರಿಗೆರೆ ಸರ್ಕಲ್, ಚಿಕ್ಕಬೆನ್ನೂರು, ಕೊಳಹಾಳ್, ಬೇಡರಶಿವನಕೆರೆ, ಬಸವನಶಿವನಕೆರೆ, ಹಿರೇಕಬ್ಬಿಗೆರೆ, ಚಿಕ್ಕಕಬ್ಬಿಗೆರೆ, ಮುದ್ದಾಪುರ, ಮುದ್ದಾಪುರಮ್ಯಾಸರಹಟ್ಟಿ, ಯಳಗೋಡು, ಬಸ್ತಿಹಳ್ಳಿ, ನೆಲ್ಲಿಕಟ್ಟೆ, ಹೊಸಹಟ್ಟಿ, ಇಸಾಮುದ್ರ, ಕಾಲಗೆರೆ ಕೋಡಿಹಳ್ಳಿ, ಕೊಗುಂಡೆ, ಬಹದ್ದೂರ್‍ಗಟ್ಟ, ಯಮ್ಮನಘಟ್ಟ, ಪಂಜಯ್ಯನಹಟ್ಟಿ, ನಂದಿಹಳ್ಳಿ, ದ್ಯಾಪನಹಳ್ಳಿ, ಚೌಲಿಹಳ್ಳಿ, ಚೌಲಿಹಳ್ಳಿ ಗೊಲ್ಲರಹಟ್ಟಿ, ಕೋಡಿರಂಗವನಹಳ್ಳಿ, ವಡ್ಡರಹಟ್ಟಿ, ಹೆಗಡೆಹಾಳು, ಕಸವನಹಳ್ಳಿ ಬಿ.ಗೊಲ್ಲರಹಟ್ಟಿ, ಭರಮಸಾಗರ ಭರಮಣ್ಣನಾಯಕ ತೆಪ್ಪೋತ್ಸವದ ನಂತರ ಬಿಚ್ಚುಗತ್ತಿ ಭರಮನಾಯಕ ಮಹಾಮಂಟಪಕ್ಕೆ ಆಗಮಿಸಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top