ಮುಖ್ಯ ಸುದ್ದಿ
ಮಾದಾರ ಚನ್ನಯ್ಯ ಶ್ರೀ ಬಗ್ಗೆ ಅವಹೇಳನಕಾರಿ ಪೋಸ್ಟ್ | ದೂರು ದಾಖಲು
CHITRADURGA NEWS | 06 JANUARY 2025
ಚಿತ್ರದುರ್ಗ: ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಕುರಿತಂತೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ದೂರು ದಾಖಲಾಗಿದೆ.
ಯತಿರಾಜ್ ಬ್ಯಾಲಹಳ್ಳಿ ಎಂಬ ಫೇಸ್ಬುಕ್ ಖಾತೆಯಿಂದ ಮಾದಾರ ಚನ್ನಯ್ಯ ಶ್ರೀಗಳ ಕುರಿತು ಮೂರು ದಿನಗಳ ಹಿಂದೆ ಎರಡು ಬಾರಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪ ದೂರಿನಲ್ಲಿದೆ.
ಇದನ್ನೂ ಓದಿ: 15. ಹಿರೇ ಬಡಗಿ ಗೌನಳ್ಳಿಗೆ ಬಂದರು | ಹಬ್ಬಿದಾ ಮಲೆ ಮಧ್ಯದೊಳಗೆ
ಶ್ರೀಗಳು ಆರೆಸ್ಸೆಸ್ಸ್ ಮತ್ತು ಬಿಜೆಪಿ ಕಟ್ಟುವಲ್ಲಿ ನಿರತರಾಗಿದ್ದಾರೆ. ಸಮುದಾಯದ ದಿಕು ತಪ್ಪಿಸುವ ಪ್ರವೃತ್ತಿ ಮುಂದುವರೆದರೆ ಸಮುದಾಯ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ಹಾಕಿದ್ದಾರೆ.
ಇದಕ್ಕೆ ಅನೇಕ ರೀತಿಯ ಕಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ.
ಇದನ್ನೂ ಓದಿ: ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿಗೆ ಸಾಣೇಹಳ್ಳಿ ಶ್ರೀ ಆಯ್ಕೆ
ಈ ಹಿನ್ನೆಲೆಯಲ್ಲಿ ಶ್ರೀಗಳು ಹಾಗೂ ಸಮುದಾಯವನ್ನು ಅವಮಾನಿಸಿದ ಆರೋಪದಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಶ್ರೀನಿವಾಸ್ ದೂರು ನೀಡಿದ್ದಾರೆ.