ಕ್ರೈಂ ಸುದ್ದಿ
ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಸಿಲುಕಿ ಯುವಕ ಸಾವು
Published on
CHITRADURGA NEWS | 15 DECEMBER 2024
ಚಿತ್ರದುರ್ಗ: ವೇದಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಯುವಕ ಶಿಡ್ಲಯ್ಯನಕೋಟೆ ಶ್ರೀಧರ(40) ಬೆಳಗಿನ ಜಾವ 4.30ರ ವೇಳೆಗೆ ನದಿಯಲ್ಲಿ ಮೀನು ಎತ್ತಲು ಹೋದಾಗ ಕಾಲಿಗೆ ಬಲೆ ಸಿಲುಕಿ ನೀರಿನಿಂದ ಹೊರಬರಲಾಗದೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಮತ್ತೆ ಆರಂಭವಾಯ್ತು ಒಳಹರಿವು | ಇಂದಿನ ನೀರಿನ ಮಟ್ಟ ಎಷ್ಟು ?
ಮೂಲತಃ ಮೀನು ಹಿಡಿಯುತ್ತಿದ್ದ ಶ್ರೀಧರ, ಈಜು ಬಲ್ಲವನಾಗಿದ್ದ. ಆದರೆ, ಅಚಾನಕ್ ಕಾಲಿಗೆ ಬಲೆ ತೊಡರು ಹಾಕಿಕೊಂಡಿದ್ದು, ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಹಿರಿಯೂರು ತಾಲೂಕಿನ ಹೊಸಹಳ್ಳಿ ಬಳಿಯಿರುವ ಚೆಕ್ ಡ್ಯಾಂ ನಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಅಬ್ಬಿನಹೊಳೆ ಠಾಣೆ ಪೊಲೀಸರು ಅಗ್ನಿಶಾಮಕ ದಳ ತೆರಳಿ ಪರಿಶೀಲನೆ ನಡೆಸಿದ್ದು, ಯುವಕ ಮೃತ ದೇಹವನ್ನು ನೀರಿನಿಂದ ಮೇಲೆ ತೆಗೆದಿದ್ದಾರೆ.
Continue Reading
Related Topics:Chitradurga, Chitradurga Information, Chitradurga Latest, Chitradurga news, Chitradurga Updates, featured, fishing, Hiriyur, Hosadurga, Kannada News, river, Vedavati, VV Sagar, Water, Youth drowns in water, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಮಾಹಿತಿ, ಚಿತ್ರದುರ್ಗ ಲೇಟೆಸ್ಟ್, ನದಿ, ನೀರಿನಲ್ಲಿ ಮುಳುಗಿ ಯುವಕ ಸಾವು, ನೀರು, ಮೀನು ಹಿಡಿಯುವುದು, ವಿವಿ ಸಾಗರ, ವೇದಾವತಿ, ಹಿರಿಯೂರು, ಹೊಸದುರ್ಗ
Click to comment